Wednesday 24th, April 2024
canara news

ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ-ಶ್ರೀ ಪೇಜಾವರ ಮಠದವತಿಯಿಂದ ಶ್ರದ್ಧಾಂಜಲಿಸಭೆ

Published On : 16 Nov 2020   |  Reported By : Rons Bantwal


ಹೃದಯಶ್ರೀಮಂತಿಕೆಯಿಂದ ನಾಡಿನ ರಾಜರೆಣಿಸಿದ್ದ ಜಯ ಸುವರ್ಣ : ವಿಶ್ವಪ್ರಸನ್ನತೀರ್ಥಶ್ರೀ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)


ಮುಂಬಯಿ, ನ.10: ಜಯ ಸುವರ್ಣರು ಸಮಾಜದಲ್ಲಿ ಮಾಡಿದ ಸಾಧನೆ ಎಲ್ಲರಿಗೂ ತಿಳಿದಿದೆ. ಸುವರ್ಣರು ಮುಂಬಯಿಗೆ ಮಾತ್ರವಲ್ಲ. ಊರಲ್ಲೂ ಅನೇಕನೇಕ ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಂದ ಪರಿಚಿತರು. ನಾನೂ ಅಲ್ಲಲ್ಲಿ ಅವರನ್ನು ಮುಖತಃ ಭೇಟಿಯಾಗಿ ಅವರ ಬಗ್ಗೆ ತಿಳಿದಿದ್ದೇನೆ. ಮುಂಬಯಿಯಲ್ಲಿ ಇದ್ದವರಿಗೆ ಅವರು ಇಲ್ಲಿಯೇ ಕಾರ್ಯವ್ಯಸ್ತರಾಗಿದ್ದಾರೆ ಎಂದಾರ್ಥ. ಆದರೆ ಊರಲ್ಲಿ ಇರುವರಿಗೆ ಅವರು ಊರಲ್ಲೇ ಇದ್ದಾರೆ ಎಂದರ್ಥ. ಅವರೋರ್ವ ಅಸಾಧಾರಣ ಸಮಾಜಮುಖಿ ಸೇವಾಕರ್ತರು. ಆದ್ದರಿಂದ ಅವರ ಕಾರ್ಯದಕ್ಷತೆ, ಪ್ರೀತಿ ವಿಶ್ವಾಸ, ಸೇವಾಮನೋಧರ್ಮದಿಂದಲೇ ಸುವರ್ಣರು ಸಮಗ್ರ ಸಮಾಜವನ್ನೇ ಗೆದ್ದಿದ್ದಾರೆ ಯಾವುದೇ ಪರಾಕ್ರಮದಿಂದಲ್ಲ. ಹಿರಿಯರ ಪ್ರಭಾವದಿಂದ ಕಿರಿಯರು ದೊಡ್ಡವರಾಗಿರುವುದು ಇದೆ ಆದರೆ ಜಯ ಸುವರ್ಣರು ಸಮಾಜದಿಂದ ಪಡೆದ ಪ್ರೀತ್ಯಾಧಾರದ ಸದ್ಗುಣತನದಿಂದ ದೊಡ್ಡವರೆಣಿಸಿದ್ದಾರೆ. ಅದು ಅವರಿಗೆ ಬಳುವಳಿಯಾಗಿ, ಪಿತೃತ್ವದಿಂದ ಅಥವಾ ಯಾರಿಂದಲೂ ಬಂದದ್ದಲ್ಲ. ಎಲ್ಲವೂ ಸ್ವಯಂ ಸಾಧನೆಯಿಂದ ಬಂದಿದೆ. ಸಿಂಹವನ್ನು ಕಾಡಿನ ರಾಜ ಎಂದು ಕರೆಯುತ್ತಾರೆ. ಕಾಡಿನ ರಾಜ ಎಂದೆಣಿಸಿದ ಸಿಂಹವನ್ನು ಯಾರು ಪಟ್ಟಾಭಿಷೇಕ ಮಾಡಿದ್ದಿಲ್ಲ ಆದು ಸ್ವಂತ ಬಲದಿಂದ ಕಾಡಿನ ರಾಜ ಅಂದೆಣಿಸಿದ್ದಂತೆ ಜಯ ಸುವರ್ಣರೂ ತನ್ನ ನಡೆನುಡಿ, ಪ್ರೀತಿ, ಹೃದಯಶ್ರೀಮಂತಿಕೆಯಿಂದ ಸಮಾಜದ ಹೃದಯವನ್ನು ಗೆದ್ದ ನಾಡಿನ ರಾಜರೆಣಿಸಿದ್ದವರು ಎಂದು ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಪೂಜ್ಯ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಮಾಜಿ ಅಧ್ಯಕ್ಷರಾಗಿ, ಭಾರತ್ ಬ್ಯಾಂಕ್‍ನ ನಿಕಟಪೂರ್ವ ಕಾರ್ಯಾಧ್ಯಕ್ಷರಾಗಿದ್ದು ಇತ್ತೀಚೆಗೆ ಸ್ವರ್ಗೀಯರಾದ ಜಯ ಸಿ.ಸುವರ್ಣ ಅವರಿಗೆ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನ ಮುಂಬಯಿ ಮತ್ತು ಶ್ರೀ ಪೇಜಾವರ ಮಠ ಮುಂಬಯಿ ಶಾಖೆಯ ವತಿಯಿಂದ ಇಂದಿಲ್ಲಿ ಶುಕ್ರವಾರ ಮಧ್ಯಾಹ್ನ ಸಾಂತಾಕ್ರೂಜ್ ಪೂರ್ವದ ಪೇಜಾವರ ಮಠದ ಮಧ್ವ ಭವನದಲ್ಲಿನ ಶ್ರೀ ವಿಶ್ವೇಶ ತೀರ್ಥ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಮತ್ತು ಶೋಕಸಭೆ ಉದ್ದೇಶಿಸಿ ಅಗಲಿದ ಜಯ ಸುವರ್ಣರ ದೀರ್ಘಾವಧಿ ಸೇವೆಯನ್ನು ಶ್ರೀಪಾದಂಗಳವರು ಮೆಲುಕು ಹಾಕುತ್ತಾ ಇಂತಹ ಜಯ ಸುವರ್ಣರದ್ದು ನಾಲ್ಕು ಮಂದಿಯ ಕುಟುಂಬವಲ್ಲ. ಇಡೀ ಸಮಾಜದ ಪರಿವಾರವಾಗಿದೆ. ಅವರ ಗುರುತರ ಸೇವೆಯೇ ಮೋಕ್ಷಕ್ಕೆ ಸನ್ಮಾರ್ಗವಾಗಿದೆ. ಅಗಲಿದ ಧೀಶಕ್ತಿಗೆ ಭಗವಂತ ಸದ್ಗತಿ ಕರುಣಿಸಲಿ ಎಂದರು.

 

ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್.ಪೂಜಾರಿ ಅವರು ಅಗಲಿದ ಜಯ ಸುವರ್ಣರ ಚೇತನದ ಭಾವಚಿತ್ರಕ್ಕೆ ಪುಷ್ಫವೃಷ್ಠಿಗೈದು ನುಡಿನಮನ ಸಲ್ಲಿಸಿ ಸ್ವಸಮಾಜದ ಮತ್ತು ಸಮಾಜೇತರ ಜನತೆಯೂ ಯಾವುದೇ ಒಪ್ಪುವಂತಹ ಕೆಲಸವನ್ನು ಮಾಡಿದ್ದರೆ ಅದು ಜಸುವರ್ಣರು ಓಬ್ಬರೇ. ಆ ದಿವ್ಯ ಚೇತನವನ್ನು ಒಂದಿಷ್ಟು ದಿನಗಳಿಗಷ್ಟೇ ಭಗವಂತ ಇಲ್ಲಿಗೆ ಕಳುಹಿಸಿ ಅದೆಷ್ಟೋ ಬೇಗ ತನ್ನಷ್ಟು ಸೆಳೆದು ಬಿಟ್ಟ. ಅವರ ಜೀವನ ಶೈಲಿ, ಬಾಳಿನ ವಿಚಾರಧಾರೆಗಳು ವೈಶಿಷ್ಟ ್ಯವಾದವು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಾನುಸಾರ ಸಾಮರಸ್ಯತ್ವದೊಂದಿಗೆ ಬಾಳಿ ನಮ್ಮೆಲ್ಲರಿಗೆ ಪ್ರೇರಕರಾಗಿ ಆದರ್ಶಪ್ರಾಯರಾಗಿ ಮತ್ತೆ ಪರಮಾತ್ಮನಲ್ಲಿ ಲೀನವಾದ ದಿವ್ಯಚೇತನಕ್ಕೆ ಶ್ರೀಹರಿ ಚಿರಶಾಂತಿಕರುಣಿಸಲಿ ಎಂದು ಪ್ರಾಥಿರ್üಸಿದರು.

ಜಯಸುವರ್ಣರನ್ನು ನಾನು ಬರೇ ಒಂದು ದಶಕದಿಂದ ಖುದ್ಧಾಗಿ ನೋಡಿ ಕಂಡವನು. ಆದರೆ ಅದೆಷ್ಟೋ ದಶಕಗಳಿಂದ ಅವರ ಬಗ್ಗೆ ಅರಿತು ತಿಳಿದವನು. ಅವರು ಯಾವೊತ್ತೂ ಒಂದು ಸಮಾಜ, ಸಮುದಾಯ, ಧರ್ಮಕ್ಕೆ ಸೀಮಿತವಾದವರಲ್ಲ. ಎಲ್ಲರಲ್ಲೂ ಒಂದಾಗಿ ಮನುಕುಲಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಿ ಸಂತುಷ್ಟ ಪಡಿಸಿದ ಮಾನವತಾವಾಧಿ ಆಗಿದ್ದರು. ಇಂತಹ ದಿವ್ಯಚೇತನಗಳು ಮಾಡಿದ ಸೇವಾ ಕೈಂಕರ್ಯ, ಕಾಯಕಗಳ ಬಗ್ಗೆ ಒಂದಷ್ಟು ಜನರಿಗೆ ತಿಳಿಸಿದರೆ ಮತ್ತು ಅವರ ಸೇವೆಯನ್ನು ನಮ್ಮಲ್ಲಿ ರೂಢಿಸಿದರೆ ನಮಗೂ ಪುಣ್ಯ ಫಲಿಸುವುದು. ಅದೇ ಭಗವಂತನ ನಿಜಾರ್ಥದ ಸೇವೆ ಆಗಿದೆ ಎಂದು ಅದಮಾರು ಮಠ ಮುಂಬಯಿ ಶಾಖೆಯ ವ್ಯವಸ್ಥಾಪಕ ಪಡುಬಿದ್ರಿ ವಿ.ರಾಜೇಶ್ ರಾವ್ ತಿಳಿಸಿದರು.

ಹಿರಿಯ ಸಮಾಜ ಸೇವಕ, ಜಯ ಸುವರ್ಣರ ನಿಕಟವರ್ತಿ ಶಂಕರ್ ಕೆ.ಸುವರ್ಣ ಖಾರ್ ಮಾತನಾಡಿ ಮುಂಬಯಿನಲ್ಲಿ ಒಂದು ಸಮಾಜವನ್ನೇ ಬೆಳೆಸಿ ಮುನ್ನಡೆಸಿದ ಧೀಶಕ್ತಿ ಜಯಣ್ಣ. ಭಾವೈಕ್ಯತೆಯ ಬಂಧುವಾಗಿಯೇ ಮೆರೆಯುತ್ತಾ ಸೇವೆಗೈದ ಸೇವಾಕರ್ಮಿಯೂ ಅವರಾಗಿದ್ದರು. ಜನನ ಮರಣದ ಮಧ್ಯೆ ಎಂದೂ ಮೌನವಾಗಿರದೆ ಮಾಡುವಷ್ಟು ಮಾಡಿ ಜೀವನದ ಸಾರ್ಥಕತೆ ಪಡೆದು ಧನ್ಯರೆಣಿಸಿದವರು. ಅವರ ಆದರ್ಶಗಳು ಮತ್ತು ಜೀವನಸ್ಪೂರ್ತಿ ಎಂದಿಗೂ ಅಜರಾಮರವಾಗಲಿದೆ ಎಂದರು.

ಜಯ ಸುವರ್ಣರ ಸಮಾಜಮುಖಿ ಸೇವೆಯೇ ಅನುಕರಣೀಯ. ಸುವರ್ಣರ ಸಾಮರಸತ್ವದ ವ್ಯಕ್ತಿತ್ವದಿಂದಲೇ ಪೇಜಾವರ ಮಠ ಮತ್ತು ಬಿಲ್ಲವರ ಭವನದ ಸಂಬಂಧ ಅವಿನಾಭಾವವಾಗಿತ್ತು. ಶ್ರೀ ಕೃಷ್ಣೈಕ್ಯ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಯತಿಕುಲ ಚಕ್ರವರ್ತಿ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರನ್ನು ಗುರುವರ್ಯರೆಂದಿಣಿಸಿದ್ದ ಸುವರ್ಣರ ಸಂಬಂಧವೂ ಮರೆಯಲಾಗದ್ದು. ಆದ್ದರಿಂದಲೇ ಜಯ ಸುವರ್ಣರ ಅಸಮಾನ್ಯ ಸೇವೆಯಿಂದ ಇಂತಹ ಸಭೆಯನ್ನು ಆಯೋಜಿಸುವಂತಾಯಿತು ಎಂದು ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಡಾ| ರಾಮದಾಸ ಉಪಾಧ್ಯಾಯ ರೆಂಜಾಳ ಸಭೆ ನಿರ್ವಹಿಸಿ ಸುವರ್ಣರ ಜೀವನ ಚಿತ್ರಣವನ್ನು ಬಣ್ಣಿಸಿದರು.

ಸಭೆಯಲ್ಲಿ ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಶ್ರೀ ಪೇಜಾವರ ಮಠದ ವ್ಯವಸ್ಥಾಪಕರಾದ ಪ್ರಕಾಶ ಆಚಾರ್ಯ ರಾಮಕುಂಜ, ಹರಿ ಭಟ್ ಪುತ್ತಿಗೆ, ನಿರಂಜನ್ ಗೋಗ್ಟೆ, ಭಾರತ್ ಬ್ಯಾಂಕ್‍ನ ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, (ಜಯ ಸುವರ್ಣರ ಸುಪುತ್ರ) ಸೂರ್ಯಕಾಂತ್ ಜೆ.ಸುವರ್ಣ, ಬಿಲ್ಲವರ ಅಸೋಸಿಯೇಶನ್ ಗೌರವ ಪ್ರಧಾನ ಕಾರ್ಯದರ್ಶಿ ರವೀಂದ್ರ ಎ.ಅವಿೂನ್ (ಶಾಂತಿ), ಯುವಾಭ್ಯುದಯ ಸಮಿತಿ ಕಾರ್ಯಾಧ್ಯಕ್ಷ ನಾಗೇಶ್ ಎನ್.ಕೋಟ್ಯಾನ್, ಸಾಮಾಜಿಕ ಮತ್ತು ಧಾರ್ಮಿಕ ಸಮಿತಿ ಕಾರ್ಯಧ್ಯಕ್ಷ ಮೋಹನ್‍ದಾಸ್ ಜಿ.ಪೂಜಾರಿ, ರಾಮಣ್ಣ ಸುವರ್ಣ ಗೋರೆಗಾಂವ್, ದೇವೆಂದ್ರ ಬಂಗೇರ ಖಾರ್, ಶೇಖರ್ ಸಾಲ್ಯಾನ್ ಸಾಂತಕ್ರೂಜ್, ಚಂದ್ರಹಾಸ ಜೆ.ಕೋಟ್ಯಾನ್, ಶ್ರೀನಿವಾಸ ಭಟ್ ಪರೇಲ್, ವಿದ್ವಾನರುಗಳಾದ ಅರವಿಂದ ಬನ್ನಿಂತ್ತಾಯ, ಆದಿತ್ಯ ಕಾರಂತ, ರಾಮಕೃಷ್ಣ ದಾಂಬ್ಳೆ, ಪವನ್ ಭಟ್, ವಿಷ್ಣುತೀರ್ಥ ಸಾಲಿ ಮುಂತಾದ ಗಣ್ಯರು ಹಾಜರಿದ್ದು ಸಂತಾಪ ವ್ಯಕ್ತ ಪಡಿಸಿ ಪುಷ್ಫನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

 

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here