Thursday 25th, April 2024
canara news

ಲೆಕ್ಕ ಪರಿಶೋಧಕ-ತೆರಿಗೆ ತಜ್ಞ ಪಣಂಬೂರು ಸುಬ್ಬರಾವ್ ನಿಧನ

Published On : 19 Nov 2020   |  Reported By : Rons Bantwal


ಮುಂಬಯಿ (ಆರ್‍ಬಿಐ),ನ.17: ಸುಮಾರು ಆರು ದಶಕಗಳ ಕಾಲ ಬಿಎಸ್‍ಕೆಬಿ ಎಸೋಸಿಯೇಶನ್ ಮುಂಬಯಿ( ಗೋಕುಲ) ಇದರ ಗೌರವ ಲೆಕ್ಕ ಪರಿಶೋಧಕ, ತೆರಿಗೆ ತಜ್ಞರಾಗಿ ತಮ್ಮ ಅಮೂಲ್ಯ ಸೇವೆ ಸಲ್ಲಿಸಿದ್ದ ಘಾಟ್ಕೋಪರ್ ನಿವಾಸಿ ಪಣಂಬೂರು ಸುಬ್ಬರಾವ್ (95.) ಅಲ್ಪಕಾಲದ ಅನಾರೋಗ್ಯದಿಂದ ಕಳೆದ ಭಾನುವಾರ (ನ.15) ದೈವಾದೀನರಾದರು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಪಣಂಬೂರು ಇಲ್ಲಿ ಜನಿಸಿದ ಸುಬ್ಬರಾವ್ ಸೈ0ಟ್ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಬಿ.ಕಾಂ ಪದವಿ ಪಡೆದು ಮುಂಬಯಿಗೆ ಆಗಮಿಸಿದ್ದÀರು. ಆ ಕಾಲದ ಪ್ರಸಿದ್ಧ ಚಾರ್ಟರ್ಡ್ ಅಕೌಂಟೆಂಟ್ ಆರ್.ಕೆ ಕಾರಂತ್ ಸಂಸ್ಥೆಯಲ್ಲಿ ತರಬೇತಿ ಪಡೆದು 1955ರಲ್ಲಿ ತಮ್ಮ ಪ್ರಥಮ ಪ್ರಯತ್ನದಲ್ಲಿಯೇ ಸಿಎ ಪದವೀಧರರಾದರು. ಸುಮಾರು ಮೂರು ದಶಕಗಳ ಕಾಲ ಆರ್.ಕೆ ಕಾರಂತ್ ಸಂಸ್ಥೆಯ ಪಾಲುದಾರರಾಗಿ ಉದ್ಯೋಗ ನಿರತರಾಗಿದ್ದ ಸುಬ್ಬರಾವ್ 2000ರಲ್ಲಿ ಅಶೋಕ್ ಮೇಲ್ಮನೆ ಅವರ ಜತೆಗೂಡಿ ತಮ್ಮದೇ ಆದ ರಾವ್ ಎಂಡ್ ಅಶೋಕ್ ಸಂಸ್ಥೆ ಪ್ರಾರಂಭಿಸಿದರು.

ಮುಂಬಯಿನ ಹಲವಾರು ಸಂಘ ಸಂಸ್ಥೆಗಳ ಲೆಕ್ಕ ಪರಿಶೋಧಕರಾಗಿ, ತಮ್ಮ ಇಳಿ ವಯಸ್ಸಿನವರೆಗೂ ಅತ್ಯಂತ ಚಟುವಟಿಕೆಯಿಂದ, ಶ್ರದ್ಧೆ ನಿಷ್ಠೆಯಿಂದ ಕರ್ತವ್ಯ ನಿರತರಾಗಿದ್ದು, ತೆರಿಗೆ ನಿಘಂಟು ಎಂಬ ಪ್ರಸಿದ್ಧಿಗೆ ಪಾತ್ರರಾಗಿದ್ದರು. ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆ ಸುಮಾರು 60 ವರ್ಷಗಳ ಅಪಾರ ಸೇವೆ ಸಲ್ಲಿಸಿದೆ. ಇವರ ಅನನ್ಯ ಸೇವೆ ಗುರುತಿಸಿ ಬಿಎಸ್‍ಕೆಬಿ ಸಂಸ್ಥೆಯೂ ಅವರು ಸಲ್ಲಿಸಿದ ನಿಸ್ವಾರ್ಥ ಸೇವೆಗಾಗಿ 2018 ಗಣರಾಜ್ಯೋತ್ಸವ ದಿನ ಅವರನ್ನು ಸನ್ಮಾನಿಸಿ ಗೌರವಿಸಿದೆ.

ಮೃತರು ಪತ್ನಿ ಗೌರಿ ಎಸ್.ರಾವ್, ಇಬ್ಬರು ಪುತ್ರರಾದ ಅಜಿತ್ ಎಸ್.ರಾವ್, ಅರುಣ್ ಎಸ್.ರಾವ್, ಪುತ್ರಿ ಶುಭದಾ ಎಸ್.ರಾವ್ ಹಾಗೂ ಅಪಾರ ಬಂಧು ಬಳಗ, ಹಿತೈಷಿಗಳು, ಅಭಿಮಾನಿಗಳನ್ನು ಅಗಲಿದ್ದಾರೆ. ಸುಬ್ಬರಾವ್ ನಿಧನಕ್ಕೆ ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು ಮತ್ತು ಸರ್ವ ಸದಸ್ಯರು, ಮಹಾನಗರದಲ್ಲಿನ ಹಲವಾರು ಸಂಘಸಂಸ್ಥೆಗಳ ಮುಖ್ಯಸ್ಥರು, ಸದಸ್ಯರು ಸಂತಾಪ ಸೂಚಿಸಿದ್ದಾರೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here