Friday 26th, April 2024
canara news

ಅಂತರ್ ಧರ್ಮೀಯ ಸಂವಾದ: ಸಾರ್ವತ್ರಿಕ ಸಹೋದರ ಸಹೋದರಿ ಭ್ರಾತೃತ್ವ

Published On : 12 Dec 2020


ಪ್ರಾಸ್ತವಿಕ ನುಡಿ:

ದೇವರು ನಮ್ಮೆ¯್ಲರನ್ನು ಒಂದೇ ಸಮಾನವಾದ ಹಕ್ಕು, ಕರ್ತವ್ಯ ಮತ್ತು ಘನತೆಗಳೊಂದಿಗೆ ಸೃಷ್ಟಿಸಿದ್ದಾರೆ ಮತ್ತು ನಾಮ್ಮೆ¯್ಲರನ್ನು ಒಟ್ಟಾಗಿ ಸಹೋದರ ಸಹೋದರಿಯರಂತೆ ಬಾಳಲು ಕರೆಯನ್ನು ಕೊಟ್ಟಿದ್ದಾರೆ. ಈ ಮೇಲಿನ ನುಡಿಗಳನ್ನು ಫೆಬ್ರವರಿ 4, 2019ರಲ್ಲಿ ಪೋಪ್ ಪಾನ್ಸಿಸ್‍ರು, Abu Dhabi ಯಲ್ಲಿ Grand Iman Ahmad ರವರನ್ನು ಭೇಟಿಯಾದಾಗ ಸಹಿ ಮಾಡಿದ “ಮಾನವ ಭಾತೃತ್ವ ಪ್ರಪಂಚದ ಶಾಂತಿಗಾಗಿ ಹಾಗೂ ಒಟ್ಟಾಗಿ ಬಾಳುವುದಕ್ಕಾಗಿ, ಎಂಬಂತಹ ಪುಸ್ತಕದಲ್ಲಿ ಲಿಖಿತವಾಗಿದೆ. ಪೂಜ್ಯ ಸ್ವಾಮೀಜಿ ಚಿದಾನಂದ ಸರಸ್ವತಿ ಮತ್ತು ಸಾದ್ವಿ ಭಗವತ್ ಸರಸ್ವತಿ ಇವರು ಜಗದ್ಗುರುಗಳನ್ನು ವೆಟಿಕನ್ ನಗರದಲ್ಲಿ ಭೇಟಿಯಾಗಿ ಈ ಕೆಳಗಿನ ಮಾತುಗಳನ್ನು ಹೇಳೀದರು. “ನೀವು ಧರ್ಮಕ್ಕೆ ಒಂದು ಉದ್ದೇಶ ಮತ್ತು ಹೊಸ ಅರ್ಥವನ್ನು ತಂದಿದ್ದೀರಿ. ಅಚ್ಚ ಹಸಿರಿನ ಗುರಿ, ಇಡೀ ವಿಶ್ವದ ಒಳಿತಿಗಾಗಿ ಆಲೋಚಿಸುವ, ಆರೈಕೆ ಮಾಡುವ ಹಾಗೂ ಕಾರ್ಯರೂಪಕ್ಕೆ ತರುವ ಗುರಿಯನ್ನು ಹೊಂದಿ, ವಿಶ್ವದ ಎಲ್ಲೆಡೆ ಜನರಿಗೆ ಹೊಸ ನಂಬಿಕೆಯನ್ನು ಹೆಚ್ಚಿಸಲು ನಮ್ಮ ಭರವಸೆಯ ವಿಶ್ವ ಗುರುಗಳು ಆಗಿದ್ದೀರಿ” ಎಂದರು. ಅದಕ್ಕೆ ಪ್ರತ್ಯುತ್ತರವಾಗಿ ಜಗದ್ಗುರುಗಳು, ನಾವೆಲ್ಲರೂ ಬೇರೆ ಬೇರೆ ಧರ್ಮವನ್ನು ತತ್ವವನ್ನು ಪ್ರತಿಪಾದಿಸುವ ಧರ್ಮಗುರುಗಳು ಆದರೂ ಎಲ್ಲರೂ ಸಹೋದರ ಸಹೋದರಿಯರಂತೆ ಶಾಂತಿಯಿಂದ ಬಾಳಬೇಕಾದರೆ ಎಲ್ಲರೂ ಒಟ್ಟಾಗಿ ಆ ಶಾಂತಿಯ ಮಂತ್ರವನ್ನು ಜಪಿಸಬೇಕು. ಆಗ ಮಾತ್ರ ಪ್ರಪಂಚದಲ್ಲಿ ಶಾಂತಿ, ಸಾಮರಸ್ಯ, ಬರಲು ಸಾಧ್ಯ. ಈ ನಿಟ್ಟಿನೆಡೆಗೆ ನಾವೆಲ್ಲರೂ ನೆರೆದಿರುವ ಹಿಂದೂ, ಮುಸ್ಲಿಂ, ಬೌದ್ಧಧರ್ಮದವರೆಲ್ಲರೂ ಪ್ರತಿಯೊಬ್ಬರ ಹಿತಕ್ಕಾಗಿ ಪ್ರಯತ್ನಿಬೇಕು ಎಂದು ಪೋಪ್ ಜಗದ್ಗುರುಗಳು ಈ ಸಂದರ್ಭದಲ್ಲಿ ಕರೆಯನ್ನು ಕೊಡುತ್ತಾರೆ. ಅದೂ ಮಾತ್ರವಲ್ಲದೇ ತಮ್ಮನ್ನು ಭೇಟಿ ಮಾಡಲು ಬಂದ ಹಿಂದೂ, ಮುಸ್ಲಿಂ, ಬೌದ್ಧ ಗುರುಗಳನ್ನು ಬೀಳ್ಕೊಡುವಾಗ ಅವರೆಲ್ಲರ ಪಾದಗಳನ್ನು ತೊಳೆದು ನಮಸ್ಕರಿಸಿ ನಾವೆಲ್ಲರೂ ಒಂದೇ ಆಗಿ ಬಾಳಬೇಕು ಎಂಬ ಕರೆಯನ್ನು ಕೊಡುತ್ತಾರೆ. ಅದೇ ಮೇರೆಗೆ ವಿಶ್ವಗುರು ಪರಮ ಪೂಜ್ಯರಾದ ಪೋಪ್ ಪ್ರಾನ್ಸಿಸ್‍ರವರು ಅಕ್ಟೋಬರ್ 3, 2020 ಸಂತ ಫ್ರಾನ್ಸಿಸ್ ಅಸ್ಸಿಸಿಯವರ ಹಬ್ಬದ ದಿನ “ಈಡಿಚಿಣeಟಟi ಖಿuಣಣi” ಎಂಬ ಪರಿಪತ್ರವನ್ನು ಬಿಡುಗಡೆ ಮಾಡುತ್ತಾರೆ. “ಈಡಿಚಿಣeಟಟi ಖಿuಣಣi” ಎಂದರೆ “ಎಲ್ಲರೂ ಸಹೋದರ ಸಹೋದರಿಯರು”. ಈ ಪರಿಪತ್ರದಲ್ಲಿ 8 ಅಧ್ಯಾಯಗಳಿವೆ ಮತ್ತು 287 Pಚಿಡಿಚಿgಡಿಚಿಠಿh (ವಾಕ್ಯಖಂಡ)ಗಳಿವೆ.

 


ಮಾನವ ಭಾತೃತ್ವ ಮತ್ತು ಅದರ ಏಕತೆ: ನಾವೆಲ್ಲರೂ ಸಹೋದರ ಸಹೋದರಿಯರು, ಅವರು ಯಾವುದೇ ಜಾತಿಗೆ, ಧರ್ಮಕ್ಕೆ, ರಾಷ್ಟ್ರಕ್ಕೆ, ಭಾಷೆಗೆ ಸೇರಿದವರೇ ಆಗಿರಲಿ ಎಲ್ಲರೂ ಸಹೋದರ ಸಹೋದರಿಯರು. ಏಕೆಂದರೆ ನಾವೆಲ್ಲರೂ ಒಂದೇ ದೇವರ ಮಕ್ಕಳು, ದೇವರು ನಮ್ಮ ಸೃಷ್ಟಿಕರ್ತ, ಎಲ್ಲಾ ಸೃಷ್ಟಿಯನ್ನು ರೂಪಿಸಿದವರು ಅವರಾಗಿದ್ದಾರೆ. ದೇವರಿಂದ ರೂಪಿಸಲ್ಪಟ್ಟ ಎಲ್ಲಾ ಮಾನವರು ಆತನ ಮಕ್ಕಳು ಈ ಸತ್ಯಾಂಶವನ್ನು ಸಾರಬೇಕು. ಈ ಜಗತ್ತಿನಲ್ಲಿ ಪ್ರೀತಿಯನ್ನು ವಿಸ್ತರಿಸಲು ಶಾಂತಿಯ ಬೀಜವನ್ನು ಬಿತ್ತಲು ಹಾಗೂ ಕರುಣೆಯನ್ನು ಹರಡಲು ನಮ್ಮನ್ನೇ ತೊಡಗಿಸಿ ಕೊಳ್ಳಬೇಕು ಎನ್ನುತ್ತದೆ ಈ ಪರಿಪತ್ರ.

ಪೂಜ್ಯನೀಯ ಪೋಪ್ ಪ್ರಾನ್ಸಿಸ್ ರವರು ತಮ್ಮ ಪರಿಪತ್ರ ದಲ್ಲಿ ಪ್ರಜಾಪ್ರಭುತ್ವ, ಸ್ವಾತಂತ್ರ್ಯ ನ್ಯಾಯನೀತಿಯ ಮೌಲ್ಯಗಳ ಸಾರ್ವತ್ರಿಕ ಬೆಳವಣಿಗೆಗೆ ಅಡ್ಡಿಯಾಗುವ ಆತಂಕ ವ್ಯಕ್ತಪಡಿಸುತ್ತಾರೆ. ಪೂಜ್ಯರು ಹೇಳುವಂತೆ “Globalized Ssociety makes us neighbours, but does not makes us brothers and sisters”. . ಜಾಗತೀಕೃತ ಸಮಾಜವು ನಮ್ಮನ್ನು ನೆರೆಹೊರೆಯವರನ್ನಾಗಿ ಮಾಡುತ್ತದೆ ಆದರೆ ಅದು ನಮ್ಮನ್ನು ಸಹೋದರ ಸಹೋದರಿಯರನ್ನಾಗಿ ಮಾಡುವುದಿಲ್ಲ”.

ನಮ್ಮ ಹತ್ತಿರದಲ್ಲಿರುವವರು ಮಾತ್ರ ನಮ್ಮ ನೆರೆಹೊರೆಯವರು ಎಂದು ನಿರ್ಧರಿಸದೆ ಸರ್ವರನ್ನು ನಮ್ಮ ಕುಟುಂಬದಂತೆ ಸ್ವೀಕರಿಸಿ ಪ್ರೀತಿ, ವಾತ್ಸಲ್ಯ, ಮಮತೆಯ ಮನೋಭಾವವನ್ನು ತೋರಿಸಬೇಕು. ಬೈಬಲ್‍ನಲ್ಲಿ ಬರುವ ಸದಯ ಸಮರಿತನ ಸಮಾತಿಯಂತೆ ನಾವು ಇನರರಿಗೂ ನೆರೆಯವರಾಗಬೇಕೆಂದು ಜಗದ್ಗುರುಗಳು ಕರೆನೀಡುತ್ತಾರೆ. ಮಾನವ ಜೀವನ ಸಾರ್ವತ್ರಿಕವಾದದ್ದು, ನೈಸರ್ಗಿಕವಾದದ್ದು ಹಾಗೂ ಅತೀ ಅಗತ್ಯವಾದದ್ದು ಆದುದರಿಂದ ಸ್ವಾರ್ಥವನ್ನು ತೊರೆಯಬೇಕು. ನಾನು ಎಂಬ ಅಹಂನ್ನು ತೊರೆಯಬೇಕು. “ಎಲ್ಲಾ ವ್ಯಕ್ತಿಗಳ ಅಂತರ್ಗತ ಘನತೆ ಗುರುತಿಸುವುದರಲ್ಲಿ ಮಾನವ ಸಹೋದರತ್ವ ಅಡಗಿದೆ. ವಿಶೇಷವಾಗಿ ಮುಗ್ಧರ, ರೋಗಿಗಳ, ಬಡವರ, ಕಷ್ಟಪಡುವವರ ಜೊತೆಗಿದ್ದು ಈ ಮೂಲಕ ಇಡೀ ವಿಶ್ವದ ಜನರೊಂದಿಗೆ ಒಂದಾಗುತ್ತೇವೆ ಎನ್ನುತ್ತಾರೆ ಜಗದ್ಗುರುಗಳು.

ವಲಸೆ ಬಂದವರನ್ನು ಉತ್ತಮವಾಗಿ ನೋಡಿಕೊಳ್ಳುವುದರ ಮೂಲಕ, ಅವರ ಘನತೆಯನ್ನು ಎತ್ತಿಹಿಡಿಯುವುದರಲ್ಲಿ ಉತ್ತಮ ಜೀವನವನ್ನು ಕಲ್ಪಿಸಬಹುದು ಎನ್ನುತ್ತಾರೆ. ರಾಜಕೀಯ ವ್ಯಕ್ತಿಗಳು ಕೇವಲ ಮತಗಳನ್ನು ಪಡೆಯದೇ ಉತ್ಪಾದಕ, ವೈವಿಧ್ಯತೆ ಮತ್ತು ವ್ಯವಹಾರ ಸೃಜನಶೀಲತೆಯನ್ನು ಹೊಂದಲು ಕರೆನೀಡುತ್ತಾರೆ. ಉತ್ತಮ ರಾಜಕೀಯ ಎಂದರೆ ಕರುಣೆ ಮತ್ತು ಕೋಮಲತೆಯ ಸಂಭಾಷಣೆಗೆ ಮುಕ್ತವಾದ ಮತ್ತು ನೆರೆಹೊರೆಯವರ ಪ್ರೀತಿಯನ್ನು ವ್ಯಕ್ತಪಡಿಸುವುದೇ ಉತ್ತಮ ರಾಜಕೀಯ ಎನ್ನುತ್ತಾರೆ. ಮಾನವ ಸಂಬಂಧ ಸೇತುವೆಗಳನ್ನು ನಿರ್ಮಿಸಲು ಡಿಜಿಟಲ್ ಸಂಪರ್ಕವು ಸಾಕಾಗುವುದಿಲ್ಲ, ಪ್ರಬಲ ಸಮುದಾಯಗಳನ್ನು ಉಳಿಸಿಕೊಳ್ಳಲು ನಮ್ಮ ವಾಸ್ತವ ಜೀವನಶೈಲಿ ಎಷ್ಟು ಅಸಮರ್ಪಕವಾಗಿದೆ ಎಂದು ಕೋವಿಡ್ ಸಾಂಕ್ರಮಿಕ ರೋಗವು ಬಹಿರಂಗ ಪಡಿಸಿದೆ. ಮುಂದುವರಿದ ಹಾಗೂ ಶ್ರೀಮಂತ ರಾಷ್ಟ್ರಗಳು ಈ ನಿಟ್ಟಿನಲ್ಲಿ ಸೋತಿವೆ.

ಶಾಶ್ವತ ಶಾಂತಿಯತ್ತ ಸಾಗಲು ಅವರು ಕೆಲವು ಮಾರ್ಗಗಳನ್ನು ಸೂಚಿಸುತ್ತಾರೆ. ನಿಜವಾದ ಶಾಂತಿ, ನ್ಯಾಯ, ಸತ್ಯ ಮತ್ತು ಕರುಣೆಯನ್ನು ಆಧರಿಸಿರಬೇಕು. ಶಾಂತಿ ಎನ್ನುವುದು ಎಲ್ಲರನ್ನೂ ಒಳಗೊಳ್ಳುವ ಮತ್ತು ಗೌರವಿಸುವ ಒಂದು ಕಲೆ ಮತ್ತು ಇದರಲ್ಲಿ ಪ್ರತಿಯೊಬ್ಬರು ಎಂದಿಗೂ ಮುಗಿಯದ ಕಾರ್ಯದಲ್ಲಿ ತಾವು ಭಾಗವಹಿಸಬೇಕು. ಸಂಘರ್ಷಗಳು, ಯುದ್ಧಗಳು, ಜಗಳಗಳು ಉದ್ಬವಿಸುತ್ತವೆ. ಅದು ಸಹಜ ಆದರೆ ಸಂಭಾಷಣೆ ಮತ್ತು ಪ್ರಮಾಣಿಕ ಸಮಾಲೋಚನೆಯ ಮೂಲಕ ಇವುಗಳನ್ನು ಪರಿಹರಿಸಬಹುದು.
ಯೇಸು ಕ್ರಿಸ್ತ ಎಂದಿಗೂ ಹಿಂಸೆ ಅಥವಾ ಅಸಹಿಷ್ಣತೆಯನ್ನು ಉತ್ತೇಜಿಸಲಿಲ್ಲ. ಅವರು ಭೋದಿಸಿದ್ದು ಕ್ಷಮೆ, ಪ್ರೀತಿ ಮತ್ತು ಶಾಂತಿ. ಕ್ಷಮೆ ಎಷ್ಟರ ಮಟ್ಟಿಗೆ ಅಂದರೆ “ಏಳು ಸಲವಲ್ಲ, ಏಳೆಪ್ಪತ್ತು ಸಲ ಕ್ಷಮಿಸಬೇಕು” ಎಂದರು. ನಿಜವಾದ ಕ್ಷಮೆ ಮತ್ತು ನಿಜವಾದ ಸಾಮರಸ್ಯವು ದ್ವೇಷಗಳಿಂದ ದೂರವಿರುತ್ತದೆ.

ಸಾರ್ವತ್ರಿಕ ಭಾತೃತ್ವವನ್ನು ಬೆಳೆಸುವಲ್ಲಿ ವಿಶ್ವದ ವಿವಿಧ ಧರ್ಮಗಳು ವಹಿಸಬೇಕಾದ ಪ್ರಮುಖ ಪಾತ್ರದ ಬಗ್ಗೆ ಪೋಪ್ ಪ್ರಾನ್ಸಿಸರು 8 ನೆಯ ಅಧ್ಯಾಯದಲ್ಲಿ ವಿವರಿಸುತ್ತಾರೆ. ನಾವೆಲ್ಲರೂ ದೇವರ ಮಕ್ಕಳು ಎಂಬ ಅರಿವಿದ್ದರೆ ಮಾತ್ರ ಶಾಂತಿಯಿಂದ ಬದುಕಲು ಸಾಧ್ಯ. ದೇವರನ್ನು ಹುಡುಕುವ ಹಾದಿಯಲ್ಲಿ ನಾವೆಲ್ಲರೂ ಸಹಚರರು, ಅಣ್ಣ ತಮ್ಮಂದಿರು. ಧಾರ್ಮಿಕ ಸ್ವಾತಂತ್ರ್ಯ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯದ ನಿರಾಕರಣೆ ಮಾನವೀಯತೆಯನ್ನು ಬಡತನಕ್ಕೆ ತಳ್ಳುತ್ತದೆ.


ಧಾರ್ಮಿಕ ಜೀವನ ಹಿಂಸೆಯಿಲ್ಲದ ವಿನಮ್ರ ಆರಾಧನೆಯಾಗಬೇಕು. ಆಗ ಮಾತ್ರ ಅದು ಜೀವನ ಘನತೆಗೆ ತಕ್ಕಂತೆ ಫಲ ನೀಡುತ್ತದೆ. ಧರ್ಮಸಭೆ/ಚರ್ಚ್ ತೆರೆದ ಬಾಗಿಲುಗಳನ್ನು ಹೊಂದಿರುವ ಮನೆಯಾಗಿದೆ. ಏಕೆಂದರೆ ಆಕೆ ಸರ್ವರ ತಾಯಿಯಾಗಿದ್ದಾಳೆ. ಆಕೆ ನಮ್ಮನ್ನು ವಿಭಜಿಸುವ ಅಡ್ಡ ಗೋಡೆಗಳನ್ನು ಒಡೆದು ಹಾಕಿ ಪರಸ್ಪರ ಒಂದಾಗುವ ಸಂಪರ್ಕ ಸೇತುವೆಗಳನ್ನು ನಿರ್ಮಿಸುತ್ತಾಳೆ. ಉಭಯರನ್ನು ಒಂದು ಗೂಡಿಸಿ ಶಾಂತಿ ಸಮಾಧಾನವನ್ನೇರ್ಪಡಿಸಿ, ಸಮನ್ವಯದ ಹಾದಿಯನ್ನು ತೋರುವ ತಾಯಿಯಾಗಿದ್ದಾಳೆ. ಶಾಂತಿ ಸಂಭಾಷಣೆಯೊಂದಿಗೆ ಇದೇ ಹಾದಿಯಲ್ಲಿ ಇಡೀ ಮಾನವ ಕುಲ ನಡೆದಾಗ ಅಲ್ಲಿ ಶಾಂತಿಯ ಭ್ರಾತೃತ್ವದ ಸಮಾಜವನ್ನು ಕಟ್ಟಿ ಬೆಳೆಸಲು ಅದೇ ತಾಯಿ ನಮಗೆ ದಾರಿದೀಪವಾಗಿದ್ದಾರೆ.

ಆದ್ದರಿಂದ ಇಲ್ಲಿ ನೆರೆದಿರುವ ಸರ್ವ ಧರ್ಮಗಳ ಧಾರ್ಮಿಕ ಗುರುಗಳೇ, ಮುಖ್ಯಸ್ಥರೇ ಪೋಪ್ ಜUದ್ಗುರುಗಳು ಈ ವಿಶ್ವ ಪತ್ರವನ್ನು ಸಾರ್ವತ್ರಿಕವಾಗಿ ನೀಡಿದ್ದಾರೆ. ನಮ್ಮ ದೇಶಕ್ಕೆ ನಾವೆಲ್ಲಾರೂ ಭಾರತೀಯರು, ಭಾರತವು ಸರ್ವಧರ್ಮೀಯರ ಮಾತೃಭೂಮಿಯಾಗಿದೆ ಮತ್ತು ಎಂದಿಗೂ ಈ ದೇಶ ವಿಶ್ವ ಭಾತೃತ್ವ, ಸಹಿಷ್ಣತೆ, ಶಾಂತಿ ಮತ್ತು ಸಾಮರಸ್ಯವನ್ನು ಪ್ರೋತ್ಸಾಹಿಸುವ ದೇಶವಾಗಿದೆ. ಆದ್ದರಿಂದ ಕೈಗೆ ಕೈ ಜೋಡಿಸಿ ಪರಸ್ಪರರ ಒಳಿತನ್ನು ಎದುರು ನೋಡಿ, ಹರಿದಿದ್ದನ್ನು ಹೊಲಿಯುವ ಸೂಜಿಯಂತೆ ಐಕ್ಯಗೊಳಿಸುವ ಮನಸ್ಸನ್ನು ಪಡೆದು, ಕತ್ತರಿಯಂತೆ ವಿಭಜಿಸುವ ದುರ್ನಡತೆಯನ್ನು, ಅಸಂಸ್ಕøತಿಯನ್ನು ದೂರ ಮಾಡಿ ಸಹೋದರ ಸಹೋದರಿಯ ಭಾತೃತ್ವದಂತೆ ಜೀವಿಸೋಣ.

ವಂ. ಫಾದರ್ ಐವನ್ ಪಿಂಟೊ PRO
ಸಂತ ಅಂತೋನಿಯವರ ಸಮುದಾಯ ಕೇಂದ್ರ
ಕಂಟೋನ್‍ಮೆಂಟ್ ಬಳ್ಳಾರಿ

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here