Sunday 16th, May 2021
canara news

ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಶರಣಪ್ಪ ಆರ್. ತಳವಾರ್

Published On : 20 Dec 2020   |  Reported By : Rons Bantwal


ಮುಂಬಯಿ (ಆರ್ ಬಿಐ), ಡಿ.11: ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಶರಣಪ್ಪ ಆರ್. ತಳವಾರ್ ಬಿಜೆಪಿ ಹಿರಿಯರಾದ ಮಹದೇವಪ್ಪ ಕಡೇಚೂರ್ ಅವರನ್ನು ಇತ್ತೀಚಿಗೆ ಭೇಟಿಯಾಗಿ ಮಾರ್ಗದರ್ಶನ ಪಡೆದರು.

 

ಕೃಷ್ಣಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಕಡೇಚೂರ್ ನಿವಾಸದಲ್ಲಿ ಭೇಟಿಮಾಡಿ ಚರ್ಚಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಮ್ಮಂತಹ ಹಿರಿಯರ ಮಾರ್ಗದರ್ಶನದಲ್ಲಿ ನಡೆದವರನ್ನು ಗುರುತಿಸಿ ಒಂದೊಂದೇ ಅಧಿಕಾರ ಹಾಗೂ ಸ್ಥಾನ ಮಾನ ನೀಡಿ ಗೌರವಿಸುವ ಪಕ್ಷದ ಕ್ರಮದಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುತ್ತಿದೆ. ಡಾ. ಎಂ ಆರ್ ತಂಗಾ, ಡಿ ಎ ಚಿಲ್ಲಾಳ್, ಸೊಮಾನಿ, ಬುರುಬುರೆ, ಮಹಾಂತ ಗೌಡ ಮತ್ತು ನೀವು ಪಕ್ಷ ಹಾಗೂ ಕಾರ್ಯಕರ್ತರನ್ನು ಬೆಳೆಸಿದ ರೀತಿ ಆದರ್ಶವಾದುದು. ನಿಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ತಳವಾರ್ ಹೇಳಿದರು. ಪಕ್ಷ ನಿಷ್ಠೆ, ಅಭಿವೃದ್ಧಿ ಈ ಎರಡು ಮೂಲ ತತ್ವವಾಗಿ ಇಟ್ಟುಕೊಳ್ಳಬೇಕು. ಪ್ರಾಧಿಕಾರದಲ್ಲಿ ಉತ್ತಮ ಮತ್ತು ಜನ ಮೆಚ್ಚುವ ಕೆಲಸ ಮಾಡಲು ಸದಾ ಆಶೀರ್ವಾದ, ಮತ್ತು ಬೆಂಬಲ ಇದೆ ಎಂದು ಮಹದೇವಪ್ಪ ಕಡೇಚೂರ್ ಹೇಳಿದರು. ಸದ್ಯದಲ್ಲೇ ಪಕ್ಷದ ಹಿರಿಯರು ಮತ್ತು ಸಚಿವರಾದ ಈಶ್ವರಪ್ಪ ಅವರು ತಮ್ಮನ್ನು ಭೇಟಿ ಮಾಡಲಿದ್ದಾರೆ ಎಂದು ತಲ್ವಾರ್ ಹೇಳಿದರು. ಈ ಸಂದರ್ಭದಲ್ಲಿ ಮಹೇಶ್ ಎಂ ಕಡೇಚೂರ್ ಹಾಜರಿದ್ದರು


ಕೃಷ್ಣಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಶರಣಪ್ಪ ಆರ್. ತಳವಾರ್ ಅವರು ಬಿ ಜೆ ಪಿ ಯ ಹಿರಿಯರಾದ ಮಹದೇವಪ್ಪ ಕಡೇಚೂರ್ ಅವರನ್ನು ಇತ್ತೀಚಿಗೆ ಭೇಟಿಯಾಗಿ ಮಾರ್ಗದರ್ಶನ ಪಡೆದರು.

ಕೃಷ್ಣಾ ಅಚ್ಚುಕಟ್ಟು ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಸ್ವೀಕರಿಸಿದ ನಂತರ ಕಡೇಚೂರ್ ನಿವಾಸದಲ್ಲಿ ಭೇಟಿಮಾಡಿ ಚರ್ಚಿಸಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ನಿಮ್ಮಂತಹ ಹಿರಿಯರ ಮಾರ್ಗದರ್ಶನದಲ್ಲಿ ನಡೆದವರನ್ನು ಗುರುತಿಸಿ ಒಂದೊಂದೇ ಅಧಿಕಾರ ಹಾಗೂ ಸ್ಥಾನ ಮಾನ ನೀಡಿ ಗೌರವಿಸುವ ಪಕ್ಷದ ಕ್ರಮದಿಂದ ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸುತ್ತಿದೆ. ಡಾ. ಎಂ ಆರ್ ತಂಗಾ, ಡಿ ಎ ಚಿಲ್ಲಾಳ್, ಸೊಮಾನಿ, ಬುರುಬುರೆ, ಮಹಾಂತ ಗೌಡ ಮತ್ತು ನೀವು ಪಕ್ಷ ಹಾಗೂ ಕಾರ್ಯಕರ್ತರನ್ನು ಬೆಳೆಸಿದ ರೀತಿ ಆದರ್ಶವಾದುದು. ನಿಮ್ಮ ಮಾರ್ಗದರ್ಶನದಲ್ಲಿ ಮುನ್ನಡೆಯುವುದಾಗಿ ತಳವಾರ್ ಹೇಳಿದರು. ಪಕ್ಷ ನಿಷ್ಠೆ, ಅಭಿವೃದ್ಧಿ ಈ ಎರಡು ಮೂಲ ತತ್ವವಾಗಿ ಇಟ್ಟುಕೊಳ್ಳಬೇಕು. ಪ್ರಾಧಿಕಾರದಲ್ಲಿ ಉತ್ತಮ ಮತ್ತು ಜನ ಮೆಚ್ಚುವ ಕೆಲಸ ಮಾಡಲು ಸದಾ ಆಶೀರ್ವಾದ, ಮತ್ತು ಬೆಂಬಲ ಇದೆ ಎಂದು ಮಹದೇವಪ್ಪ ಕಡೇಚೂರ್ ಹೇಳಿದರು. ಸದ್ಯದಲ್ಲೇ ಪಕ್ಷದ ಹಿರಿಯರು ಮತ್ತು ಸಚಿವರಾದ ಈಶ್ವರಪ್ಪ ಅವರು ತಮ್ಮನ್ನು ಶೀಘ್ರದಲ್ಲೇ ಭೇಟಿ ಮಾಡಲು ಆಗಮಿಸಲಿದ್ದಾರೆ ಎಂದು ತಲ್ವಾರ್ ಹೇಳಿದರು. ಈ ಸಂದರ್ಭದಲ್ಲಿ ಮಹೇಶ್ ಎಂ ಕಡೇಚೂರ್ ಹಾಜರಿದ್ದರು
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here