Friday 4th, July 2025
canara news

ಜ.27: ಸಿರಿ ಪಾವಂಜೆ ಸಿರಿಮನೆಯ ಅನುಭವ ಮಂಟಪದಲ್ಲಿ

Published On : 24 Jan 2021   |  Reported By : Rons Bantwal


ಡಾ| ಗಣೇಶ ಅಮೀನ್ ಸಂಕಮಾರ್ ಆತ್ಮಕಥನ `ಮಣ್ಣಿನೊಳಗಿನ ಅನ್ನ' ಕೃತಿ ಬಿಡುಗಡೆ

ಮುಂಬಯಿ (ಆರ್‍ಬಿಐ), ಜ.23: ಸಿರಿ ಪ್ರಕಾಶನ ಪಾವಂಜೆ ಮತ್ತು ಆಕೃತಿ ಆಶಯ ಪಬ್ಲಿಕೇಷನ್ಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೇ ಜ.27ನೇ ಬುಧವಾರ ಸಂಜೆ 6.00 ಗಂಟೆಯಿಂದ ಸಿರಿ ಪಾವಂಜೆ ಸಿರಿಮನೆಯ ಅನುಭವ ಮಂಟಪದಲ್ಲಿ ನಾಡಿನ ಹೆಸರಾಂತ ವಿದ್ವಾಂಸ, ಸಾಹಿತಿ ಡಾ| ಗಣೇಶ ಅಮೀನ್ ಸಂಕಮಾರ್ ಅವರ ಆತ್ಮಕಥನ `ಮಣ್ಣಿನೊಳಗಿನ ಅನ್ನ' ಕೃತಿ ಬಿಡುಗಡೆ ನಡೆಯಲಿದೆ.

Pro. P. S yadapadithaya.

Dr. Vivek Rai

 

Capt. Ganesh Karnik

Dr. Mohan Alva

Dr Ganesh Sankamar

 

 

 

ಮಂಗಳೂರು ವಿಶ್ವವಿದ್ಯಾನಿಲಯದ ಮಾನ್ಯ ಕುಲಪತಿ ಪೆÇ್ರ| ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಇವರ ಅಧ್ಯಕ್ಷತೆಯಲ್ಲಿ ಜರುಗುವ ಕಾರ್ಯಕ್ರಮವನ್ನು ಕರ್ನಾಟಕ ವಿಧಾನ ಪರಿಷತ್‍ನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಉದ್ಘಾಟಿಸಲಿದ್ದಾರೆ.

ಆಳ್ವಾಸ್ ಶಿಕ್ಷಣ ಸಮೂಹ ಸಂಸ್ಥೆ ಮೂಡುಬಿದಿರೆ ಇದರ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಮುಖ್ಯ ಅತಿಥಿüಯಾಗಿ ಮತ್ತು ಕಡಂಬೋಡಿ ಮಹಾಬಲ ಪೂಜಾರಿ ಅತಿಥಿü ಅಭ್ಯಾಗತರಾಗಿ ಆಗಮಿಸಲಿದ್ದು ತುಳು ಕನ್ನಡ ವಿದ್ವಾಂಸ, ವಿಶ್ರಾಂತ ಕುಲಪತಿ ಪೆÇ್ರ| ಬಿ.ಎ. ವಿವೇಕ ರೈ ಕೃತಿ ಬಿಡುಗಡೆ ಮಾಡಲಿದ್ದಾರೆ. ಡಾ| ರಾಧಾಕೃಷ್ಣ ಕೆ. ಶಾಸ್ತ್ರಿ ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ಸಿರಿ ಪ್ರಕಾಶನ ಪಾವಂಜೆ ಇದರ ಡಾ| ಗಣೇಶ ಅಮೀನ್ ಸಂಕಮಾರ್ ತಿಳಿಸಿದ್ದಾರೆ. ಕೋವಿಡ್ ನಿಯಮದ ಅನುಸಾರವಾಗಿ ಕಾರ್ಯಕ್ರಮ ನಡೆಯಲಿದ್ದು ಸಾಹಿತ್ಯಾಭಿಮಾನಿಗಳು ಸಹಕರಿಸುವಂತೆ ಆಕೃತಿ ಆಶಯ ಪಬ್ಲಿಕೇಷನ್ಸ್‍ನ ಮುಖ್ಯಸ್ಥ ಕಲ್ಲೂರು ನಾಗೇಶ ತಿಳಿಸಿದ್ದಾರೆ.

 




More News

ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ವಿಜಯ ಕಾಲೇಜು ಮುಲ್ಕಿ, ವಿಶ್ವ ಹಳೇ ವಿದ್ಯಾಥಿs ಸಂಘದ ೩ನೇ ವಾರ್ಷಿಕ ಮಹಾಸಭೆ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
ನವೀಕೃತ ಸ್ಟೆರ್ಲಿಂಗ್ ಕಾರವಾರ ಅನಾವರಣ
 ಭೋಜ ಎನ್. ಪೂಜಾರಿ ನಿಧನ
ಭೋಜ ಎನ್. ಪೂಜಾರಿ ನಿಧನ

Comment Here