Saturday 20th, April 2024
canara news

2020 ರ ದ.ಕ. ಜಿಲ್ಲಾ ಹಿಂದಿ ರತ್ನ : ಪುತ್ತೂರು ಇರ್ದೆ ಉಪ್ಪಳಿಗೆಯ ಗೀತಾ ಕುಮಾರಿ

Published On : 24 Jan 2021   |  Reported By : Rayee Rajkumar


ಶಿಕ್ಷಣಕ್ಕೂ ಸಂಸ್ಕøತಿಗೂ ಅವಿನಾಭಾವ ಸಂಬಂಧ. ಹೆಚ್ಚಿನ ಎಲ್ಲಾ ಶಿಕ್ಷಕರೂ ಸಂಸ್ಕøತಿಯ ಒಂದಿಲ್ಲೊಂದು ಮಗ್ಗುಲನ್ನು ತಮ್ಮ ಬದುಕಿನಲ್ಲಿ ಜೊತೆಗಿರಿಸಿಕೊಂಡು ಬದುಕಿ ಬಾಳಿದವರು. ಕೆಲ ಶಿಕ್ಷಕರು ಯಕ್ಷಗಾನ, ಸಂಗೀತ, ಗಾಯನ, ಭಜನೆ, ನಾಟಕ, ಭಾಷಣ, ಇತ್ಯಾದಿ ಹಲವಾರು ರಂಗ ಚಟುವಟಿಕೆಯ ಲಲಿತ ಕಲೆಗಳಲ್ಲಿ ಮಿಂದೆದಿದ್ದಾರೆ. ಮಕ್ಕಳಿಗೆ ಶಿಕ್ಷಣ ನೀಡುವುದರೊಂದಿಗೆ ಪಾಠೇತರ ಚಟುವಟಿಕೆಗಳಲ್ಲಿ ಕೂಡಾ ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟು ರಾಜ್ಯ, ರಾಷ್ಟ್ರ ವ್ಯಾಪ್ತಿಯಲ್ಲಿ ಹೆಸರು, ಪ್ರಶಸ್ತಿ ಪಡೆದು ಸಮಾಜದಲ್ಲಿ ರಾರಾಜಿಸಿದ್ದಾರೆ, ರಾರಾಜಿಸುತ್ತಿದ್ದಾರೆ. ಇದಕ್ಕೆ ಹಿಂದಿನ, ಇಂದಿನ ಜನಾಂಗ ಎಂಬ ಭೇದವಿಲ್ಲ. ಇಲ್ಲಿ ಕೇವಲ ಅವರವರ ಸ್ವಂತ ಪರಿಶ್ರಮ, ಪ್ರಯತ್ನ, ಎಲ್ಲವನ್ನೂ ಅಥವಾ ಏನನ್ನಾದರೂ ಸಾಧಿಸಿ ತೋರಿಸಬೇಕೆಂಬ ಅದಮ್ಯ ಬಯಕೆಯೇ ಮೂಲ ಹಾಗೂ ಕಾರಣ.

ವಿದ್ಯಾರ್ಥಿಗಳಿಗೆ ಹಿಂದಿ ಶಿಕ್ಷಣದೊಂದಿಗೆ ಗ್ರಾಹಕ ತತ್ವ, ರಂಗ ತಾಲೀಮು, ನಾಟಕ, ಸಂಗೀತದ ವಿದ್ಯೆಯನ್ನು ಧಾರೆ ಎರೆಯುತ್ತಿದ್ದ ಪುತ್ತೂರು ಇರ್ದೆ-ಉಪ್ಪಳಿಗೆ ಸರಕಾರೀ ಪ್ರೌಢಶಾಲೆಯ ಶಿಕ್ಷಕಿ ಗೀತಾ ಕುಮಾರಿಯವರನ್ನು ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. ಸ್ವತ: ಎಂಟು ವರ್ಷಗಳಿಂದ ಗ್ರಾಹಕ ಕ್ಲಬ್‍ನ್ನು ಶಾಲೆಯಲ್ಲಿ ನಡೆಸುತ್ತಾ ಬಂದ ಗೀತಾ ತನ್ನ ಸ್ವಂತ ಹಣದಲ್ಲಿ ‘ನಮನ’ ಎಂಬ ಗ್ರಾಹಕ ಪತ್ರಿಕೆಯನ್ನು ಹೊರತಂದು ಜನಜನಿತರಾದರು. ಸತತ ನಾಲ್ಕು ವರ್ಷಗಳ ಕಾಲ ಜಿಲ್ಲಾ ಉತ್ತಮ ಗ್ರಾಹಕ ಸಂಯೋಜಕ ಶಿಕ್ಷಕಿ ಪುರಸ್ಕಾರವನ್ನು ಗ್ರಾಹಕ ದಿನಾಚರಣೆಯಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮೂಖ್ಯಾಧಿಕಾರಿಗಳು ಇತ್ಯಾದಿಯರಿಂದ ಸ್ವೀಕರಿಸಿದರು. ಸ್ವತ: ವಿದ್ಯಾರ್ಥಿಗಳಿಗೆ ಸಂಗೀತ, ನಾಟಕ ತಾಲೀಮು, ನಡೆಸಿ ವಿದ್ಯಾರ್ಥಿಗಳನ್ನು ತಯಾರು ಮಾಡಿ ಸತತ ಜಿಲ್ಲಾ ಮಟ್ಟದ ಹಲವಾರು ಪುರಸ್ಕಾರಗಳನ್ನು ಶಾಲೆಗೆ ತಂದುಕೊಟ್ಟು ವಿದ್ಯಾರ್ಥಿಗಳ, ಶಿಕ್ಷಕರ, ಊರವರ ಮೆಚ್ಚುಗೆ ಗಳಿಸಿದರು. ಇದು ಪಾಠವನ್ನು ಉತ್ತಮವಾಗಿ ಕಲಿಸಲೂ ಪ್ರೇರಣಾದಾಯಕವಾಯಿತು. ಹಲವಾರು ಕಾರ್ಯಾಗಾರಗಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಯಶಸ್ವಿಯಾಗಿ ನಡೆಸಿಕೊಟ್ಟು ಜಿಲ್ಲಾ ಮಟ್ಟದಲ್ಲಿ ಮಿಂಚತೊಡಗಿದರು.

ಇವರ ಸತತ ಪರಿಶ್ರಮ, ಸಂಪನ್ಮೂಲತೆಯನ್ನು ಗುರುತಿಸಿದ ರಾಜ್ಯ ಹಿಂದಿ ಶಿಕ್ಷಕ ಸಂಘ, 2020 ರ ಮೈಸೂರು ವಿಭಾಗದ ದ.ಕ. ಜಿಲ್ಲೆಯ ಹಿಂದಿ ರತ್ನ ಪುರಸ್ಕಾರವನ್ನು 2021 ರ ಜನವರಿ 16 ರಂದು ಹಾಸನದ ದೇವೇಗೌಡ ನಗರದ ಸರಕಾರೀ ಪ್ರೌಢಶಾಲೆಯಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಸಂಘದ ರಾಜ್ಯಾಧ್ಯಕ್ಷ ಡಿ.ಎಂ. ರಾಥೋಡ್ ಹಾಗೂ ಮುಖ್ಯ ಅತಿಥಿಗಳು ಸಾರ್ವಜನಿಕರ ಸಮಕ್ಷಮ ನೀಡಿ ಸಂಮಾನಿಸಿದರು. ಜಿಲ್ಲಾ ಮಟ್ಟದ ಸಂಪನ್ಮೂಲ ವ್ಯಕ್ತಿಯಾಗಿ, ಪಾಠ-ಪಾಠೇತರಗಳೆಲ್ಲದರಲ್ಲೂ ಸೈ ಎನಿಸಿಕೊಂಡ ಗೀತಾ ಕುಮಾರಿಯವರಿಗೆ ಸಂದಿರುವ ಸಂಮಾನ ಸ್ವತ: ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿದೆ ಎನ್ನುವುದಕ್ಕೆ ಅವರ ಶಿಷ್ಯರು, ಊರಿನವರು, ಸಾರ್ವಜನಿಕರು ಸತತವಾಗಿ ಸಂಮಾನಿಸುತ್ತಿರುವುದೇ ಸಾಕ್ಷಿ. ಇಂತಹ ಇನ್ನಷ್ಟು ಸಂಮಾನಗಳು ಗೀತಾರವರ ಮುಡಿಗೇರಲಿ ಎಂಬ ಹಾರೈಕೆ ನಮ್ಮದು.

ಲೇಖನ: ರಾಯೀ ರಾಜಕುಮಾರ್, ಮೂಡುಬಿದಿರೆ. ಫೋ: 9008238599

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here