Sunday 16th, May 2021
canara news

ಬಿಎಸ್‍ಕೆಬಿಎ-ಗೋಕುಲ ವತಿಯಿಂದ ರಾಷ್ಟ್ರದ 72ನೇ ಗಣತಂತ್ರ್ರ ದಿನಾಚರಣೆ

Published On : 28 Jan 2021   |  Reported By : Rons Bantwal


ಶೀಘ್ರದಲ್ಲೇ ಗೋಕುಲದಲ್ಲಿ ಶ್ರೀದೇವರ ಪುನ:ರ್ ಪ್ರತಿಷ್ಠೆ-ಬ್ರಹ್ಮಕಲಶೋತ್ಸವ

ಮುಂಬಯಿ (ಆರ್‍ಬಿಐ), ಜ.27: ಭಾರತ ರಾಷ್ಟ್ರದ 72ನೇ ಗಣತಂತ್ರ ದಿನಾಚರಣೆಯನ್ನು ಬಿಎಸ್‍ಕೆಬಿ ಎಸೋಸಿಯೇಶನ್, ಗೋಕುಲದ ವತಿಯಿಂದ ನೆರೂಲ್ ಅಲ್ಲಿನ ಆಶ್ರಯದಲ್ಲಿ ಕಳೆದ ಮಂಗಳವಾರ ಆಚರಿಸಲಾಯಿತು.

ಪ್ರಾತಃಕಾಲ ಬಿಎಸ್‍ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷ ವಾಮನ್ ಹೊಳ್ಳ, ಉಪಾಧ್ಯಕ್ಷೆ ಶೈಲಿನಿ ರಾವ್, ಗೌರವ ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ ಮತ್ತಿತರ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ, ಸದಸ್ಯರ ಉಪಸ್ಥಿತಿಯಲ್ಲಿ ಧ್ವಜಾರೋಹಣಗೈದು ನೆರೆದ ರಾಷ್ಟ್ರಾಭಿಮಾನಿಗಳಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯ ಸಲ್ಲಿಸಿದರು.

ಡಾ| ಸುರೇಶ್ ಎಸ್.ರಾವ್ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ವೃತ್ತಿಪರ ಶಿಕ್ಷಣದಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿದ ವಿದ್ಯಾಥಿರ್üಗಳಿಗೆ ಮತ್ತು ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಿದರು.

ಡಾ| ಸುರೇಶ್ ರಾವ್ ಮಾತನಾಡಿ ಗೋಕುಲ ಕಟ್ಟಡ ನಿರ್ಮಾಣದ ಸದ್ಯದ ಪ್ರಗತಿಯನ್ನು ತಿಳಿಸುತ್ತಾ, ಇನ್ನು ಕೆಲವೇ ತಿಂಗಳುಗಳಲ್ಲಿ ಕಟ್ಟಡ ಹಾಗೂ ಮಂದಿರ ನಿರ್ಮಾಣ ಪೂರ್ಣಗೊಂಡು ನಂತರ ಶೀಘ್ರದಲ್ಲಿಯೇ ಶ್ರೀ ದೇವರ ಪುನ:ರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿಸಲು ಸಂಕಲ್ಪಿಸಿದ್ದೇವೆ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಆಶ್ರಯ ನಿವಾಸಿಗಳು ದೇಶಭಕ್ತಿ ಗೀತೆಗಳು, ಯುವ ಕಲಾವೃಂದವು ಸಂಗೀತೋಪಕರಣಗಳ ಮೂಲಕ ದೇಶಭಕ್ತಿಗೀತೆಗಳನ್ನು, ಮಹಿಳಾ ವಿಭಾಗವು ದೇಶಭಕ್ತಿ ಗೀತೆ ಗಾಯನ ಹಾಗೂ ನೃತ್ಯ ಇತ್ಯಾದಿಗಳನ್ನು ಪ್ರಸ್ತುತ ಪಡಿಸಿದರು. ಗೋಕುಲ ಕಲಾವೃಂದ, ಯುವ ವಿಭಾಗ ಹಾಗೂ ಮಹಿಳಾ ವಿಭಾಗವು ಮೂಡ್ಸ್ ಆಫ್ ರಾಗ್ ಯಮನ್ ಮತ್ತು ಮೂಡ್ಸ್ ಆಫ್ ಬಾಲಿವುಡ್ ವಿಷಯಾಧಾರಿತ ಸಂಗೀತನೃತ್ಯ ಕಾರ್ಯಕ್ರಮ ಸಾದರ ಪಡಿಸಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ಕೊರೋನಾ ಪ್ರಯುಕ್ತ ಕೆಲವು ಕಲಾವಿದರು ಜೂಮ್ ಜಾಲತಾಣದ ಮೂಲಕ ಕಾರ್ಯಕ್ರಮ ನೀಡಿದರು. ಸೀಮಿತ ಸಂಖ್ಯೆಯ ಸದಸ್ಯರ ಉಪಸ್ಥಿತಿಯಲ್ಲಿ ಜರಗಿದ ಈ ಕಾರ್ಯಕ್ರಮ ಯು ಟ್ಯೂಬ್ ಜಾಲತಾಣದ ಮೂಲಕ ನೇರ ಪ್ರಸಾರಗೊಂಡಿತು.
More News

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
ಗೃಹಿಣಿ ಅನಿತಾ ಡಾಲು ರವಿ ನಿಧನ-ವಾರದ ಹಿಂದೆ ನಡೆಸಲ್ಪಟ್ಟ ಗೃಹ ಪ್ರವೇಶ
 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ

Comment Here