Friday 29th, March 2024
canara news

ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮಿ ಅವರಿಂದ ರಾಮ ಮಂದಿರ ನಿರ್ಮಾಣಕ್ಕೆ ಮುಂಬಯಿ ಭಕ್ತಾದಿಗಳಿಂದ ನಿಧಿ ಸಂಗ್ರಹ -ಪಾದಯಾತ್ರೆ

Published On : 08 Feb 2021   |  Reported By : Ronida Mumbai


(ಚಿತ್ರ/ವರದಿ: ರೊನಿಡಾ ಮುಂಬಯಿ)

ಮುಂಬಯಿ, ಫೆ.08: ಶ್ರೀ ಅಯೋಧ್ಯ ರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್‍ನ ಟ್ರಸ್ಟಿ, ಉಡುಪಿ ಶ್ರೀ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿ ಅವರು ಕಳೆದ ರವಿವಾರ (ಫೆ.07) ಅಯೋಧ್ಯೆಯಲ್ಲಿ ರೂಪುಗೊಳ್ಳುತ್ತಿರುವ ಭವ್ಯ ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಮುಂಬಯಿ ಮಹಾನಗರದ ಖಾರ್ ಪಶ್ಚಿಮದಲ್ಲಿನ ಖಾರ್ ದಾಂಡ ಇಲ್ಲಿನ ಸುಮಾರು ಇನ್ನೂರು ವರ್ಷ ಪುರಾತನ ರಾಮ ಮಂದಿರದಲ್ಲಿ ನಿಧಿಸಂಗ್ರಹಕ್ಕೆ ಚಾಲನೆಯಿತ್ತರು. ಶ್ರೀಗಳು ಇಲ್ಲಿನ ಮಂದಿರದಲ್ಲಿ ದೇವರಿಗೆ ಆರತಿಗೈದು ಕಾರ್ಯಕ್ರಮ ನೇರವೇರಿಸಿದರು.

ಬಳಿಕ ಸ್ಥಾನೀಯ ಮನೆಮನೆಗಳ ಭೇಟಿಗೈದು ಭಕ್ತರನ್ನು ಹರಸಿದರು. ಭಕ್ತರು ಬಹು ಉತ್ಸಾಹದಿಂದ ದೇಣಿಗೆ ನೀಡಿ ಶ್ರೀರಾಮ್ ಕೀ ಜೈ ಉದ್ಘಾರಿಸಿದರು.

ಈ ಸಂದರ್ಭದಲ್ಲಿ ಮಹಾರಾಷ್ಟ್ರ ಗೋವಾ ಪ್ರಾಂತ್ಯದ ವಿಹೆಚ್ ಪಿ ಕ್ಷೇತ್ರಪತಿ ಶಂಕರ ಗಾಂವ್ಕರ್, ಕೊಂಕಣಿ ಪ್ರಾಂತ ವಿಭಾಗದ ಅಧಿಕಾರಿ ನರೇಶ ಪಾಟೀಲ, ಆರ್‍ಎಸ್‍ಎಸ್ ಭಾಗ ಸಂಚಾಲಕ, ಪೂರ್ವ ನ್ಯಾಯಧೀಶ ಜೋಗ್ ಸಿಂಗ್ ಹಾಗೂ ಶಾಸಕ ಆಶೀಷ್ ಶೇಲ್ಹಾರ್, ಆರ್‍ಎಸ್‍ಎಸ್ ಪ್ರಮುಖ ನಿತ್ಯೇಶ ಶ್ಹಾ, ವಿದ್ವಾನ್ ಡಾ. ರಾಮದಾಸ ಉಪಾಧ್ಯಾಯ ಮೊದಲಾದವರು ಪಾದಯಾತ್ರೆ ಪಾಲ್ಗೊಂಡರು.

 

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here