Friday 26th, April 2024
canara news

ಬಜಾಲ್-ಅಳಪೆ-ಕಣ್ಣೂರು-ಅಡ್ಯಾರ್ ವಲಯ ಬಂಟರ ಸಂಘದ ಉದ್ಘಾಟನೆ

Published On : 20 Feb 2021   |  Reported By : Rons Bantwal


ಸಂಘಟನಾತ್ಮಕವಾದಾಗ ಯಶಸ್ಸು ಸುಲಭಸಾಧ್ಯ-ಅಜಿತ್‍ಕುಮಾರ್ ರೈ ಮಾಲಾಡಿ

ಮುಂಬಯಿ (ಆರ್‍ಬಿಐ), ಫೆ.18: ಬಂಟ ಸಮಾಜದವರು ಒಮ್ಮತ–ಒಗ್ಗಟ್ಟಿನಿಂದ ಸಮುದಾಯದ ಅಭಿವೃದ್ಧಿ ಸಾಧಿಸುವ ಮೂಲಕ ಇತರರ ದುಃಖ-ದುಮ್ಮಾನಗಳಿಗೂ ಸ್ಪಂದಿಸಬೇಕಾಗಿದೆ. ಸಂಘಟನಾತ್ಮಕವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಂಡಾಗ ಯಶಸ್ಸು ನಮ್ಮದಾಗುತ್ತದೆ ಎಂದು ಬಂಟರಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‍ಕುಮಾರ್‍ರೈ ಮಾಲಾಡಿ ಹೇಳಿದರು.

ನೂತನವಾಗಿ ಅಸ್ತಿತ್ವಕ್ಕೆ ಬಂದ ಬಜಾಲ್ ಅಳಪೆ ಕಣ್ಣೂರು ಮತ್ತು ಅಡ್ಯಾರ್ ವಲಯ ಬಂಟರ ಸಂಘದ ಉದ್ಘಾಟನೆ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂ¨ ದೀಪ ಬೆಳಗಿಸುವ ಹಾಗೂ ಭತ್ತ ತುಂಬಿದ ಕಳಸೆಯಲ್ಲಿ ತೆಂಗಿನ ಹೊಂಬಾಳೆಯನ್ನು ಅರಳಿಸುವ ಮೂಲಕ ಉದ್ಘಾಟಿಸಿ ಮಾಲಾಡಿ ಮಾತÀನಾಡಿದರು.

ಮಾಜಿ ಸಚಿವ ಬಿ.ರಮಾನಾಥರೈ ಮುಖ್ಯ ಅತಿಥಿüಯಾಗಿದ್ದು ಮಾತನಾಡಿ, ಸಮಾಜದ ಅಭಿವೃದ್ಧಿಗೆÉ ಯುವಜನತೆ ಮುಂದಡಿ ಇಡಬೇಕೆಂದರು.

ಶಾಸಕ ವೇದವ್ಯಾಸಕಾಮತ್ ಮಾತನಾಡಿ, ಸಂಘದಯಾವುದೇ ಚಟುವಟುಕೆಗಳಿಗೆ ತನ್ನ ಸಂಪೂರ್ಣ ಸಹಕಾರ ನೀಡುವುದಾಗಿ ಪ್ರಕಟಿಸಿದರು.

ಸಂಘದ ಅಧ್ಯಕ್ಷ ಯಶೋಧರ ಬಿ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾನಿಧಿ, ಕ್ರೀಡಾನಿಧಿ, ಅಶಕ್ತರ ನಿಧಿ, ದತ್ತುನಿಧಿ ಸಹಿತ ಸಮಾಜದ ಬಡ ವರ್ಗದ ಜನರ ಶ್ರೇಯೋಭಿವೃದ್ಧಿಗೆ ಸಂಘ ಕಟಿಬದ್ಧವಾಗಿದೆ. ಸಂಘಕ್ಕೆ ಸುಸಜ್ಜಿತ ಕಟ್ಟಡವೊಂದನ್ನು ನಿರ್ಮಿಸುವ ಯೋಜನೆಯೂ ಪ್ರಸ್ತಾವದಲ್ಲಿದೆ ಎಂದರು.

ಮಂಗಳೂರು ಸ್ವಸ್ತಿಕ್ ನ್ಯಾಶನಲ್ ಕಾಲೇಜ್‍ನ ಪ್ರಾಂಶುಪಾಲೆ ರಾಜೇಶ್ವರಿ ಡಿ.ಶೆಟ್ಟಿ ದಿಕ್ಸೂಚಿ ಭಾಷಣ ನೀಡಿದ್ದು ರಾಷ್ಟ್ರಪತಿಪದಕ ಪುರಸ್ಕøತ ಪೆÇಲೀಸ್ ಅಧಿಕಾರಿ ಪ್ರಕಾಶ್ ಶೆಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೂ ಬಡವರ ಚಿಕಿತ್ಸೆಗೆ ಹಾಗೂ ವಿದ್ಯಾಭಾಸಕ್ಕೆ ಆಥಿರ್üಕ ನೆರವು ನೀಡಲಾಯಿತು.

ಮನಪಾ ನಾಮ ನಿರ್ದೇಶಿತ ಸದಸ್ಯ ಭಾಸ್ಕರಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಚಂದ್ರ ಪ್ರಕಾಶ್‍ಶೆಟ್ಟಿ ತುಂಬೆ, ಬಿಜೆಪಿ ಮಂಗಳೂರು ದಕ್ಷಿಣ ಕ್ಷೇತ್ರ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ, ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಕಿರಣ್ ರೈ, ಮಹಾಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಭರತ್‍ರಾಜ್ ಶೆಟ್ಟಿ, ರಾಮಪ್ರಸಾದ್ ಪೂಂಜ, ಮನೀಷ್ ರೈ, ಸಂಘದ ಪ್ರಧಾನ ಕಾರ್ಯದರ್ಶಿ ಅಮೃತಾ ಶೆಟ್ಟಿ, ಕೋಶಾಧಿಕಾರಿ ಮಾನಸ ರೈ, ಮಹಿಳಾ ವಿಭಾಗಧ್ಯಕ್ಷೆ ರೇಖಾ ಮನೀಶ್ ರೈ ವೇದಿಕೆಯಲ್ಲಿದ್ದರು.

ಕಟ್ಟಡ ವಿಭಾಗದ ಸಂಚಾಲಕ ಜಗನ್ನಾಥ ಶೆಟ್ಟಿ ಸ್ವಾಗತಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರ್ವಹಿಸಿದರು. ಯುವ ವಿಭಾಗಧ್ಯಕ್ಷ ಶೈಲೇಶ್ ಶೆಟ್ಟಿ ಧನ್ಯವಾದವಿತ್ತರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here