Tuesday 18th, May 2021
canara news

ಧರ್ಮಸ್ಥಳದ ಮಂಜುಷಾ ಮ್ಯೂಸಿಯಂನಲ್ಲಿ ಶೋಭಿಸಲಿರುವ ಡಬಲ್ ಡೆಕ್ಕರ್ ಬಸ್ಸುಗಳು

Published On : 27 Feb 2021   |  Reported By : Rons Bantwal


(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.25: ದಕ್ಷಿಣ ಭಾರತದ ಕರ್ನಾಟಕದ ಅತ್ಯಂತ ಪ್ರಸಿದ್ಧ ಧಾರ್ಮಿಕ ಹೆಗ್ಗುರುತುಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಸಂಸ್ಥಾಪಕತ್ವ ಶ್ರೀ ಕ್ಷೇತ್ರ ಧರ್ಮಸ್ಥಳದ ಖಾಸಗಿ ವಸ್ತುಸಂಗ್ರಹಾಲಯ-ಮಂಜುಷಾ ಮ್ಯೂಸಿಯಂಗೆ ಹೊಸ ಅತಿಥಿüಗಳ ಸೇರ್ಪಡೆ ಆಗಿದ್ದು ಅವುಗಳೆಂದರೆ ಮುಂಬಯಿವಾಸಿಗರ ಸೇವೆಯಲ್ಲಿ ತೊಡಗಿಸಿ ಐತಿಹಾಸಿಕವಾಗಿರುವ ಸುಮಾರು ಎಂಟುವರೆ ದಶಕಗಳ ಹಳೇ ಡಬಲ್ ಡೆಕ್ಕರ್ ಬಸ್ಸುಗಳು.

ಬೃಹನ್ಮುಂಬಯಿ ವಿದ್ಯುತ್ ಸರಬರಾಜು ಮತ್ತು ಸಾರಿಗೆ (ಬೆಸ್ಟ್-ಬೃಹನ್ಮುಂಬಯಿ ಇಲೆಕ್ಟ್ರಿಕ್ ಸಪ್ಲೈ ಎಂಡ್ ಟ್ರಾನ್ಸ್‍ಪೆÇರ್ಟ್) ಸಂಸ್ಥೆಯು ಈ ತನಕ ಸೇವೆಯಲ್ಲಿ ತೊಡಗಿಸಿ ಇದೀಗ ಸೇವಾಸ್ತಬ್ಧವಾದ ಡಬ್ಬಲ್ ಡೆಕ್ಕರ್ ಎರಡು ಬಸ್ಸುಗಳನ್ನು ಡಾ| ಹೆಗ್ಗಡೆ ಅವರ ಆಶಯದ ಮೇರೆಗೆ ಮಂಜುಷಾ ಮ್ಯೂಸಿಯಂಗೆ ತರಿಸಿ ಕೊಳ್ಳಲಾಗಿದೆ.

ಮಂಜುಷಾ ಮ್ಯೂಸಿಯಂನಲ್ಲಿ ಇದೀಗಲೇ ಸುಮಾರು 8300 ಕಲಾಕೃತಿಗಳು ಸಂಗ್ರಹವಿದ್ದು ಇದೀಗ ಸೇರ್ಪಡೆ ಗೊಳ್ಳಲಿರುವ ಈ ಎರಡು ಬಸ್ಸ್‍ಗಳು ಮನಾರ್ಷಕ ವಸ್ತುಗಳು ಶೋಭಿಸಲಿವೆ. ಈ ಪೈಕಿ ಒಂದು ಬಸ್ ನಿಯಮಿತ ಪ್ರಯಾಣ ಸೇವೆಯದ್ದಾಗಿದ್ದು ಮತ್ತೊಂದು ತೆರೆದ ಛಾವಣಿಯೊಂದಿಗೆ ಪ್ರವಾಸಕ್ಕಾಗಿ ಬಳಸುತ್ತಿದ್ದ ಬಸ್ ಆಗಿದೆ. ಒಂದು ಬಸ್ ಇದೀಗಲೇ ಧರ್ಮಸ್ಥಳ ಸೇರಿದ್ದು ಮತ್ತೊಂದು ಬಸ್‍ನ್ನು ಇಂದಿಲ್ಲಿ (ಫೆ.25) ಬೆಸ್ಟ್ ಸಂಸ್ಥೆ ಬಿಡುಗಡೆ ಮಾಡಿದ್ದು ಒಂದೆರಡುದಿನಗಳಲ್ಲಿ ಈ ಬಸ್ ಕೂಡಾ ಧರ್ಮಸ್ಥಳ ಸೇರಲಿದೆ.

ಈ ಡಬಲ್ ಡೆಕ್ಕರ್ ಬಸ್ಸ್‍ಗಳನ್ನು ಸಂಗ್ರಹಿಸುವಲ್ಲಿ ಧರ್ಮಸ್ಥಳದ ಪರವಾಗಿ ದಿನೇಶ್ ಪಾಟೇಲ್ ಅವರು ಹರಾಜು ಪ್ರಕ್ರಿಯೆಯಲ್ಲಿದ್ದು (ಟೆಂಡರ್) ಬಸ್‍ಗಳನ್ನು ಬೆಸ್ಟ್ ಸಂಸ್ಥೆಯ ಕಾಯಿದೆ ಕ್ರಮಾನುಸಾರ ಪಡೆದಿದ್ದರು. ಡಾ| ವೀರೇಂದ್ರ ಹೆಗ್ಗಡೆ ಅವರ ಆಪ್ತ ಸಹಾಯಕ ಎ.ವಿ ಶೆಟ್ಟಿ ಅವರ ಮನವಿಯ ಮೇರೆಗೆ ಪತ್ರಕರ್ತ ರೋನ್ಸ್ ಬಂಟ್ವಾಳ್ ಅವರು ವಿಲೇಪಾರ್ಲೆ ಕ್ಷೇತ್ರದ ಮಾಜಿ ಶಾಸಕ, ಹಾಲಿ ಶಿವಸೇನಾ ನಾಯಕ ಕೃಷ್ಣ ಎಸ್.ಹೆಗ್ಡೆ (ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ನಿಟ್ಟೆ ಇಲ್ಲಿನ ಬೋಳ ಮರಿಮಾರುಗುತ್ತು ನಿವಾಸಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬೋಳ ಶ್ರೀಪಾದ ಹೆಗ್ಡೆ ಸುಪುತ್ರ) ಮತ್ತು ಶಿವಾ'ಸ್ ಸಂಸ್ಥೆಯ ಡಾ| ಶಿವರಾಮ ಕೆ. ಭಂಡಾರಿ ಅವರನ್ನು ಸಂಪರ್ಕಿಸಿ ಬಸ್ಸ್‍ಗಳನ್ನು ಶೀಘ್ರವಾಗಿ ಪಡೆಯುವಲ್ಲಿ ಶ್ರಮಿಸಿದ್ದರು. ಕೃಷ್ಣ ಹೆಗ್ಡೆ ಬೆಸ್ಟ್ ಸಂಸ್ಥೆಯ ಉನ್ನತಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು ಎಲ್ಲರ ಪ್ರಯತ್ನದಂತೆ ಎರಡೂ ಬಸ್ಸುಗಳನ್ನು ಮುಂಬೈನಿಂದ ಸಂಗ್ರಹಿಸಲಾಗಿದ್ದು ವಿಆರ್‍ಎಲ್ ಸಂಸ್ಥೆಯ ಅಪಾರ ಶ್ರಮ, ಸಹಯೋಗದೊಂದಿಗೆ ಯಥಾಸ್ಥಿತಿಯಲ್ಲೇ ಒಂದು ಬಸ್ಸ್‍ನ್ನು ಇದೀಗಲೇ ಧರ್ಮಸ್ಥಳಕ್ಕೆ ತರಿಸಿ ಕೊಳ್ಳಲಾಗಿದೆ.

ಬೆಸ್ಟ್ ಡಬ್ಬಲ್ ಡೆಕ್ಕರ್ ಬಸ್ಸುಗಳು:
1937ರಲ್ಲಿ ಮೊದಲ ಬೆಸ್ಟ್ ಸಂಸ್ಥೆ ಮುಂಬಯಿನಲ್ಲಿ ಡಬಲ್ ಡೆಕ್ಕರ್ ಬಸ್ಸುಗಳನ್ನು ಆರಂಭಿಸಿದ್ದು ಇವುಗಳು ಹಳೆಯದ್ದ್ದಾಗಿದ್ದು ಸೇವೆಯಿಂದ ಸ್ಥಗಿತಗೊಳಿಸಲು ತೀರ್ಮಾನಿಸಿ 2020ರ ನವೆಂಬರ್‍ನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ಫ್ಲೀಟ್ 1947-1948ರಲ್ಲಿ 141 ಬಸ್‍ಗಳಿಂದ 1993ರ ವೇಳೆಗೆ 882ಕ್ಕೆ ಏರಿತು. ಆದಾಗ್ಯೂ, ಸದ್ಯ ಕೇವಲ 3,500ಕ್ಕೂ ಹೆಚ್ಚು ಬಸ್‍ಗಳ ಫ್ಲೀಟ್‍ನಲ್ಲಿ ಕೇವಲ 120 ಡಬಲ್ ಡೆಕ್ಕರ್ ಬಸ್‍ಗಳು ಕಾರ್ಯ ನಿರ್ವಹಿಸುತ್ತಿದ್ದು ಜೊತೆಗೆ 100 ಆಧುನಿಕ ಡಬಲ್ ಡೆಕ್ಕರ್ ಬಸ್ಸುಗಳನ್ನು ಖರೀದಿಸಲು (ಬೆಸ್ಟ್) ನಿರ್ಧರಿಸಿತ್ತು. ಈ ಹೊಸ ಬಸ್ಸುಗಳು ಬಿಎಸ್6 ಸಂಪೂರ್ಣ ಡೀಸೆಲ್ ಎಂಜಿನ್‍ಗಳಿಂದ ನಿಯಂತ್ರಿಸಲ್ಪಡುತ್ತವೆ ಮತ್ತು ಡ್ಯುಯಲ್ ನ್ಯೂಮ್ಯಾಟಿಕ್ ಕ್ಲೋಸಿಂಗ್ ಡೋರ್, ಎರಡು ಮೆಟ್ಟಿಲುಗಳು, ಸಿಸಿಟಿವಿ, ಎಲೆಕ್ಟ್ರಾನಿಕ್ ಡೆಸ್ಟಿನೇಶನ್ ಡಿಸ್ಪ್ಲೇ ಮತ್ತು ಚಾಲಕ ಮತ್ತು ಕಂಡಕ್ಟರ್‍ಗಳಿಗೆ ಸಂವಹನ ವ್ಯವಸ್ಥೆ (ಪ್ರತಿ ಡೆಕ್‍ನಲ್ಲಿ 1) ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರುತ್ತವೆ. ಬಸ್ಸುವೊಂದು 70 ಆಸನ ಸಾಮರ್ಥ್ಯ ಹೊಂದಿದ್ದು, ಹವಾನಿಯಂತ್ರಣ ಹೊಂದಿರುವುದಿಲ್ಲ. ಈ ಬಸ್‍ಗಳಲ್ಲಿ ಸ್ವಯಂಚಾಲಿತ ಹಸ್ತಚಾಲಿತ ಪ್ರಸರಣ (ಎಎಂಟಿ) ಅಳವಡಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ. ಡಬಲ್ ಡೆಕ್ಕರ್ ಬಸ್‍ಗಳಿಗೆ ಸಾಮಾನ್ಯ ಬೆಸ್ಟ್‍ಗಳಿಗಿಂತ ಎರಡು ಪಟ್ಟು ಸಮಯ ಬೇಕಾಗುತ್ತದೆ, ದಟ್ಟಣೆಯ ರಸ್ತೆಗಳಲ್ಲಿ ಬೃಹತ್ ಬಸ್ಸುಗಳನ್ನು ಓಡಿಸುವುದು ಅಸಮರ್ಥವಾಗುತ್ತಿದ್ದು ಇದು ಸಿಬ್ಬಂದಿಗಳ ಸೇವೆಗೂ ಕಷ್ಟಕರ ಇದಲ್ಲದೆ, ಅವುಗಳನ್ನು ನಿರ್ವಹಿಸಲು ಅಗತ್ಯವಾದ ಹೆಚ್ಚುವರಿ ಮಾನವ ಶಕ್ತಿಯನ್ನು ಮುಖ್ಯ ಕಾಳಜಿಯಾಗಿಸಿ ಬದಲು ವ್ಯವಸ್ಥೆಗೆ ಕ್ರಮನಡೆಸಲಾಗಿದೆ ಎಂದು ಹಿರಿಯ ಬೆಸ್ಟ್ ಅಧಿಕಾರಿಯೊಬ್ಬರು ತಿಳಿಸಿದ್ದರು. ಎರಡು ಹಂತಗಳಲ್ಲಿ ಬಸ್ಸುಗಳನ್ನು ಸೇವೆಗಿಳಿಸÀಲು ಯೋಜಿಸಿದ್ದು 2020ರ ವೇಳೆಗೆ 72 ಬಸ್‍ಗಳು ರಸ್ತೆಗಿಳಿಯಲಿದ್ದು, 2023ರ ಅಕ್ಟೋಬರ್‍ನಲ್ಲಿ ಉಳಿದ 48 ಬಸ್‍ಗಳು ರಸ್ತೆಗಿಳಿಯಲಿವೆ ಎಂದು ಅಧಿಕಾರಿ ತಿಳಿಸಿದ್ದರು.

ಮಂಜುಷಾ ವಸ್ತು ಸಂಗ್ರಹಾಲಯ: ಕೆ.ಪುಷ್ಪದಾಂತ ಪರಿಪಾಲಕತ್ವದಲ್ಲಿ 1989ರಲ್ಲಿ ಸ್ಥಾಪಿತ ಸಮಾರು 32 ವರ್ಷಗಳಿಂದ ಆಕರ್ಷನಾ ಕೇಂದ್ರವಾಗಿರುವ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಇದೀಗಲೇ ಪ್ರಾಚೀನ ವಸ್ತುಗಳು, ವರ್ಣಚಿತ್ರಗಳು, ಕಲಾಕೃತಿಗಳು, ದೇವಾಲಯದ ರಥಗಳು, ವಿಂಟೇಜ್ ಮತ್ತು ಕ್ಲಾಸಿಕ್ ಕಾರುಗಳ ಉತ್ತಮ ಸಂಗ್ರಹವಗಳಿವೆ. ಮೈಸೂರಿನ ಖ್ಯಾತ ಕಲಾವಿದ, ಜಾನಪದ ಲೇಖಕ ಪಿ.ಆರ್ ತಿಪ್ಪೇಸ್ವಾಮಿ ಅವರ ಅಪಾರ ಶ್ರಮದೊಂದಿಗೆ ಅಭಿವೃದ್ಧಿಕಂಡ ಈ ವಸ್ತುಸಂಗ್ರಹಾಲಯದಲ್ಲಿ ಕ್ರಿ.ಪೂ ಒಂದನೇ ಶತಮಾನದಷ್ಟು ಹಳೆಯ ಮೌರ್ಯರ ಕಾಲದಿಂದ ಟೆರಾಕೋಟಾ ನಾಣ್ಯಗಳೂ ಸಂರಕ್ಷಿಸಿದೆ. 300 ವರ್ಷ ಹಳೆಯ ವೀಣಾ, ವಿದ್ವಾನ್ ವೀಣೆ ಶೇಷಣ್ಣರ ಸಂಗೀತ ವಾದ್ಯಗಳ ವಿವರಗಳನ್ನು ಹೊಂದಿರುವ ಪುರಾತನ ಪುಸ್ತಕವನ್ನು ಸಂಗ್ರಹಿಸಿದೆ. ಇದು ಭಾರತೀಯ ಕಲ್ಲು ಮತ್ತು ಲೋಹದ ಶಿಲ್ಪಕಲೆ, ವರ್ಣಚಿತ್ರಗಳು, ಆಭರಣ ವಸ್ತುಗಳು, ಪೂಜಾ ವಸ್ತುಗಳು ಮತ್ತು ಕರಾವಳಿ ಪ್ರದೇಶದ ಕುಶಲಕರ್ಮಿಗಳು ರಚಿಸಿದ ಉಪಯುಕ್ತ ವಸ್ತುಗಳ ಸಂಗ್ರಹವನ್ನು ಹೊಂದಿದೆ. ವಿಭಿನ್ನ ಗಾತ್ರದ ಕ್ಯಾಮೆರಾಗಳು ಮುಂತಾದ ಹಲವಾರು ವಿಭಿನ್ನ ಪುರಾತನ ವಸ್ತುಗಳನ್ನು ವಿಶಾಲವಾದ ಜಾಗದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕೇವಲ 20 ರೂಪಾಯಿಗಳ ಪ್ರವೇಶ ಶುಲ್ಕವನ್ನು ಪಡೆದು ಸುಮಾರು 2 ಗಂಟೆಗಳ ವರೆಗೂ ವೀಕ್ಷಿಸುವಷ್ಟು ವಿಷೇಶ ವಸ್ತುಗಳನ್ನು ಈ ಸಂಗ್ರಹಾಲಯ ಹೊಂದಿದೆ. ಕೊಂಚವೇ ದೂರದಲ್ಲಿ ಸುಮಾರು 50 ವಿವಿಧ ಕಾರುಗಳ ಸಂಗ್ರಹವನ್ನೂ ಮಾಡಲಾಗಿದ್ದು ಕಾರು ಸಂಗ್ರಹಾಲಯದಲ್ಲಿ ಪುರಾತನ ವಾಹನಗಳು ಮತ್ತು ಕಾರುಗಳನ್ನು ಸಂಗ್ರಹಿಸಿ ಇಡಲಾಗಿದ್ದು ಹೆಚ್ಚಿನವು ಇಂದಿಗೂ ಚಾಲ್ತಿಯಲ್ಲಿ ಇವೆ ಎಂಬುದು ವಿಶೇಷÀ. ಇಲ್ಲಿ ಮನುಸ್ಮ ೃತಿಯ 6000 ತಾಳೆ ಎಲೆ ಹಸ್ತಪ್ರತಿಗಳ ವಿಶಿಷ್ಟ ಸಂಗ್ರಹವಿದ್ದು ಭಾವೀ ಜನಾಂಗಕ್ಕೆ ಇದೊಂದು ಪ್ರಾಚೀನ ವಸ್ತುವಾಗಿ ಸ್ಥಾನಮಾನ ಪಡೆಯಲಿದೆ.
More News

ಸ್ವರ್ಣೋದ್ಯಮಿ ಸತೀಶ್ ಎನ್.ಶೇಟ್ ನಿಧನ
ಸ್ವರ್ಣೋದ್ಯಮಿ ಸತೀಶ್ ಎನ್.ಶೇಟ್ ನಿಧನ
ಶಿವ ಮೂಡಿಗೆರೆ ಅವರಿಗೆ ಮಾತೃ ವಿಯೋಗ
ಶಿವ ಮೂಡಿಗೆರೆ ಅವರಿಗೆ ಮಾತೃ ವಿಯೋಗ
ಖಾವಿ-ಖಾಕಿ-ಖಾದಿ ಧರಿಸದೇ ಜನನಾಯಕನಾಗಿ ಜನಮಾನಸದಿ ಉಳಿದ ಜಯಣ್ಣ
ಖಾವಿ-ಖಾಕಿ-ಖಾದಿ ಧರಿಸದೇ ಜನನಾಯಕನಾಗಿ ಜನಮಾನಸದಿ ಉಳಿದ ಜಯಣ್ಣ

Comment Here