Thursday 25th, April 2024
canara news

ಶ್ರೀ ದುರ್ಗಾ ಪರಮೇಶ್ವರಿ ಮಂದಿರ ಮಲಾಡ್ ಸಂಭ್ರಮಿಸಿದ 43ನೇ ವಾರ್ಷಿಕೋತ್ಸವ

Published On : 28 Feb 2021   |  Reported By : Rons Bantwal


ಆಧ್ಯಾತ್ಮದ ಜೀರ್ಣೋದ್ಧಾರದಿಂದ ಸಂಸ್ಕಾರ ಸದ್ಭರಿತ : ರಘುನಾಥ ಕೆ.ಕೊಟ್ಟಾರಿ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಫೆ.27: ಧರ್ಮ ಮತ್ತು ರಾಷ್ಟ್ರದ ಭವಿಷ್ಯದ ರಕ್ಷಣೆಗೆ ಯುವ ಪೀಳಿಗೆಯಲ್ಲಿ ಪೂರ್ವಜರ ಆದರ್ಶ ಜೀವನದ ಅರಿವು ಮೂಡಿಸಿ, ಆಧ್ಯಾತ್ಮ ಜ್ಞಾನ ರೂಡಿಸಿ ಧರ್ಮ ರಕ್ಷಣೆಯ ನಿಟ್ಟಿನಲ್ಲಿ ಈ ದೇವಸ್ಥಾನ ಸಮಿತಿ ಶ್ರಮಿಸುತ್ತಿದೆ. ಸಚ್ಚಾರಿತ್ರ್ಯದ ಕಲಶಾಭಿಷೇಕ ಮತ್ತು ಆಧ್ಯಾತ್ಮದ ಜೀರ್ಣೋದ್ಧಾರ ಆದಾಗಲೇ ಸಂಸ್ಕಾರಯುತ ಬಾಳು ಸಾಧ್ಯ. ಆದ್ದರಿಂದ ನವ ಸಂತತಿಗೆ ಎಲ್ಲಾ ಆಚರಣೆಗಳನ್ನು ತಿಳಿಯುವ ಧರ್ಮಾಚರಣಾ ಪದ್ಧತಿ ತಿಳಿಹೇಳಿದಾಗಲೇ ಸಮಗ್ರ ಜೀವರಾಶಿಯ ಉದ್ಧಾರ ಸಾಧ್ಯ ಎಂದು ಮಲಾಡ್ ಪೂರ್ವದ ಕುರಾರ್ ವಿಲೇಜ್ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿಯ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ತಿಳಿಸಿದರು.

ಮಲಾಡ್ ಪೂರ್ವದ ಕುರಾರ್ ವಿಲೇಜ್ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸಮಿತಿ ಸಂಚಾಲಕತ್ವದ ಶ್ರೀ ದುರ್ಗಾ ಪರಮೇಶ್ವರಿ ಮಂದಿರ ಆಚರಿಸಿದ 43ನೇ ವಾರ್ಷಿಕೋತ್ಸವದಲ್ಲಿ ರಘುನಾಥ ಕೊಟ್ಟಾರಿ ತಿಳಿಸಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ಮಹಾನಗರದಲ್ಲಿನ ಭಕ್ತರ ಒಂದು ಪುಣ್ಯಕ್ಷೇತ್ರವೇ ಸರಿ. ಕಳೆದ ಸುಮಾರು ನಾಲ್ಕುವರೆ ದಶಕಗಳಿಂದ ಇಲ್ಲಿ ತುಳುನಾಡ ವೈಭವದ ಸಂಸ್ಕೃತಿ, ಸಂಪ್ರದಾಯಗಳು ಶಾಸ್ತ್ರೋಕ್ತವಾಗಿ ನಡೆಸಲಾಗಿ ಭ್ರಮಾರಂಭಿಕೆಯ ಆರಾಧನೆ ನಡೆಯುತ್ತಿದೆ. ಆ ಮೂಲಕ ಅದೆಷ್ಟೋ ಭಕ್ತಾದಿಗಳು ಶ್ರೀ ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿದ್ದಾರೆ. ಮಾತೆಯಲ್ಲಿನ ವಿಶೇಷ ನಂಬಿಕೆ ಭಕ್ತಬಾಂಧವರು ಜೀವಂತವಾಗಿರಿಸುವ ನಿಟ್ಟಿನಲ್ಲಿ ಇಲ್ಲಿ ಪ್ರತಿ ವಾರ್ಷಿಕೋತ್ಸವ, ಪುನರ್ ಪ್ರತಿಷ್ಠಾಪನಾ ಉತ್ಸÀವಗಳನ್ನು ನಡೆಸಲಾಗಿದೆ ಎಂದರು.

14 ವಾರ್ಷಿಕ ಪುನರ್ ಪ್ರತಿಷ್ಠಾಪನಾ ವರ್ಧಂತ್ಯೋತ್ಸÀವ ನಿಮಿತ್ತ ಇಂದಿಲ್ಲಿ ಶನಿವಾರ ಸಂಪೆÇ್ರೀಕ್ಷಣೆ, ಪ್ರಧಾನ ಹೋಮ, ನವಕಲಶಾರಾಧನೆ, ಕಲಶಾಭಿಷೇಕ, ಮಹಾ ಮಂತ್ರಾಕ್ಷತೆ ಇನ್ನಿತರÀ ಧಾರ್ಮಿಕ ಕಾರ್ಯಕ್ರಮಗಳನ್ನು ಬ್ರಹ್ಮಶ್ರೀ ಶಂಕರನಾರಾಯಣ ತಂತ್ರಿ ಡೊಂಬಿವಲಿ ತನ್ನ ಪ್ರಧಾನ ಪೌರೋಹಿತ್ಯದಲ್ಲಿ ನೆರವೇರಿಸಿದರು. ಮಂದಿರದ ಪ್ರಧಾನ ಅರ್ಚಕ ಸೂಡ ರಾಘವೇಂದ್ರ ಭಟ್ ಅವರು ಮಂದಿರದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಆಗಿದ್ದ ಪ್ರೇಮನಾಥ ಎಸ್.ಸಾಲಿಯಾನ್ ಮತ್ತು ಕವಿತಾ ಪ್ರೇಮನಾಥ್ ದಂಪತಿಗೆ ವಿಶೇಷವಾಗಿ ಹಾಗೂ ಮತ್ತಿತರ ಗಣ್ಯರಿಗೆ ಪ್ರಸಾದವನ್ನಿತ್ತು ಗೌರವಿಸಿದರು. ಪುರೋಹಿತರು ಪೂಜೆಗಳನ್ನು ನಡೆಸಿ ನೆರೆದ ಸದ್ಭಕ್ತರನ್ನು ಹರಸಿದರು.

ಸಮಿತಿಯ ಗೌ| ಪ್ರ| ಕಾರ್ಯದರ್ಶಿ ಎಸ್.ಬಿ ಕೋಟ್ಯಾನ್ ಪ್ರಾರ್ಥನೆಯನ್ನಾಡಿದರು. ಗಿರೀಶ್ ಬಿ.ಸುವರ್ಣ ಮತ್ತು ನೀಶಾ ಗಿರೀಶ್ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಮಹಿಳಾ ಮಂಡಳಿ ಮತ್ತು ಭಕ್ತಾಭಿಮಾನಿಗಳು ಭಜನೆಗೈದರು.

ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ರಘುನಾಥ ಕೆ.ಕೊಟ್ಟಾರಿ ಮತ್ತು ಆಶಾ ರಘುನಾಥ್ ದಂಪತಿ, ಗೌರವ ಕೋಶಾಧಿಕಾರಿ ಬಾಬು ಎಂ.ಸುವರ್ಣ ಮತ್ತಿತರ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಮಂತ್ರಿತ ಸದಸ್ಯರು, ಸಲಹಾದಾರರು, ಮಹಿಳಾ ಮಂಡಳಿ, ಸದಸ್ಯರನೇಕರು ಉಪಸ್ಥಿತರಿದ್ದು ವಿವಿಧ ಪೂಜೆ, ಸೇವೆಗಳನ್ನು ನೆರವೇರಿಸಿದರು. ಅಪಾರ ಸಂಖ್ಯೆಯ ಸದ್ಭಕ್ತರು ಚಿತ್ತೈಸಿ ತೀರ್ಥಪ್ರಸಾದ ಸ್ವೀಕರಿಸಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಮತ್ತು ಶ್ರೀ ಗಣಪತಿ ದೇವರ ಕೃಪೆಗೆ ಪಾತ್ರರಾಗಿದ್ದು ವಾರ್ಷಿಕ ಉತ್ಸವ ಸಂಪನ್ನಗೊಂಡಿತು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here