ಮುಂಬಯಿ, ಮಾ.06: ಜಿಎಸ್‍ಬಿ ಮಂಡಳಿ ಡೊಂಬಿವಲಿ ಸಮಿತಿಯ ಮಾಜಿ ಸದಸ್ಯೆ ಕಿಣಿ ಟೀಚರ್ ಪ್ರಸಿದ್ಧಿಯ ಶ್ರೀಮತಿ ಶೋಭಾ (ಆಶಾ) ಆರ್.ಕಿಣಿ (71.) ಕಳೆದ ಶುಕ್ರವಾರ (ಮಾ.05.) ಅಲ್ಪಕಾಲಿಕ ಅಸ್ವಸ್ಥತೆಯಿಂದ ನಿಧನರಾದರು.
ದಕ್ಷಿಣ ಕನ್ನಡ ಜಿಲ್ಲೆ ಕಾರ್ಕಳ ಬೈಲೂರು ಮೂಲತಃ ಇವರು ಉಪನಗರ ಡೊಂಬಿವಲಿಯಲ್ಲಿ ಅನೇಕ ವರ್ಷಗಳಿಂದ ಶಿಕ್ಷಕಿ ಆಗಿ ಸೇವೆ ಸಲ್ಲಿಸಿ ಪ್ರಸಿದ್ಧರೆಣಿಸಿದ್ದರು. ಜಿಎಸ್‍ಬಿ ಮಂಡಳಿ ಡೊಂಬಿವಲಿ ಸಮಿತಿಯ ಮಾಜಿ ಸದಸ್ಯೆ, ರೋಟರಿ ಕ್ಲಬ್ ಸದಸ್ಯೆಯಾಗಿ ನೂರಾರು ದಲಿತರಿಗೆ ಉಚಿತ ಕಣ್ಣು ಚಿಕಿತ್ಸೆಯ ರೂವಾರಿಯಾಗಿ ವಿವಿಧ ಕ್ಷೇತ್ರದಲ್ಲಿ ಸಮಾಜ ಸೇವಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಮೃತರು ಪತಿ ಬೈಲೂರು ರಘುನಾಥ್ ಕಿಣಿ, ಓರ್ವ ಸುಪುತ್ರ ಸೇರಿದಂತೆ ಅಪಾರ ಬಂಧುಬಳಗ ಅಗಲಿದ್ದಾರೆ.