Wednesday 24th, April 2024
canara news

ಉಡುಪಿಯಲ್ಲಿ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ಪ್ರದಾನ

Published On : 18 Mar 2021   |  Reported By : Rons Bantwal


ಸಾಧಕರ ಸ್ಮರಣೆ ಭಾವೀ ಪ್ರತಿಭಾನ್ವಿತರಿಗೆ ಪ್ರೇರಣೆ : ಹರಿಕೃಷ್ಣ ಪುನರೂರು

ಮುಂಬಯಿ (ಆರ್‍ಬಿಐ), ಮಾ.17: ಸಾಧನೆ ಮಾಡಿ ಇಲ್ಲವಾದ ರಾಜೇಶ ಶಿಬಾಜೆ ಅಂತಹ ಸಾಧಕ, ಪ್ರ್ರಾಮಾಣಿಕ ಪತ್ರಕರ್ತರನ್ನು ಸ್ಮರಿಸಿ ಈಗಿನ ಸಾಧಕ ಪತ್ರಕರ್ತರಿಗೆ ಗೌರವ ಸಲ್ಲಿಸುವ ಈ ಕೆಲಸ ಪ್ರೇರಣಾದಾಯಿ ಎಂದು ಕನ್ನಡ ಸಾಹಿತ್ಯ ಪರಿಷತ್ತ್‍ನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಧರ್ಮದರ್ಶಿ ಹರಿಕೃಷ್ಣ ಪುನರೂರು ತಿಳಿಸಿದರು.

ಧರ್ಮದರ್ಶಿ ಪುನರೂರು ಅವರು ಉಡುಪಿಯ ಜಗನ್ನಾಥ ಸಭಾ ಭವನದಲ್ಲಿ ಶನಿವಾರ ಬೆಂಗಳೂರುನ ಪತ್ರಕರ್ತರ ವೇದಿಕೆ (ರಿ.) ಮತ್ತು ಉಡುಪಿ ಜಿಲ್ಲಾ ಘಟಕ ಜಂಟಿಯಾಗಿ ಆಯೋಜಿಸಿದ್ದ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತ ಡಾ| ಶೇಖರ ಅಜೆಕಾರು ಅವರು ಪ್ರತಿಭಾ ಪೆÇೀಷಕರಾಗಿ ಎಲ್ಲಾ ವಯೋಮಾನದ ಮತ್ತು ಎಲ್ಲಾ ವೃತ್ತಿಪರ ಸಾಧಕರನ್ನು ಯಾವುದೇ ವಸೂಲಿಬಾಜಿಯಿಲ್ಲದೆ, ಯಾರ ಪ್ರಭಾವಕ್ಕೂ ಒಳಗಾಗದೆ ಗೌರವಿಸುತ್ತಾ ಬಂದಿದ್ದಾರೆ ಎಂದೂ ಪುನರೂರು ಪ್ರಶಂಸಿದರು.

ವಿಶ್ರಾಂತ ಪ್ರಾಧ್ಯಾಪಕ ಎ.ಎಂ ನರಹರಿ ಮಂಗಳೂರು, ಉದ್ಯಮಿ-ದಾನಿ ವಿಶ್ವನಾಥ ಶೆಣೈ ಉಡುಪಿ, ಪಂಚನಬೆಟ್ಟು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎ.ನರಸಿಂಹ ಬೊಮ್ಮರಬೆಟ್ಟು, ಕರ್ನಾಟಕ ಕಾಯಕರತ್ನ ನಾಗಪ್ಪ ಬಸಪ್ಪ ಕುರುವತ್ತಿಗೌಡರ್ ಕೊಪ್ಪಳ ಅತಿಥಿü ಅಭ್ಯಾಗತರುಗಳಾಗಿದ್ದು ನಾಡಿನ ಹೆಸರಾಂತ ಸಮಾಜ ಸೇವಕ ಇಂದ್ರಾಳಿ ಜಯಕರ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು.

ಅನುದಾನಿತ ಕನ್ನಡ ಶಾಲೆಗಳನ್ನು ಗಟ್ಟಿಗೊಳಿಸುವ ಕೆಲಸ ಆಗ ಬೇಕಾಗಿದೆ. ಸರಕಾರ ಕೊರತೆಗಳನ್ನು ಪರಿಹರಿಸಿ ಅವುಗಳನ್ನು ಸಬಲೀಕರಣಗೊಳಿಸಬೇಕಾಗಿದೆ ಎಂದು ಜಯಕರ ಶೆಟ್ಟಿ ಹೇಳಿದರು.

ವಾರ್ತಾಭಾರತಿ ಇದರ ಸತ್ಯಾ.ಕೆ, ಸುದ್ಧಿ ಚಾನಲ್‍ನ ದುರ್ಗಾಕುಮಾರ್ ನಾಯರ್‍ಕೆರೆ ಮತ್ತು ವ್ಯಂಗ್ಯ ಚಿತ್ರಕಾರ ಬದರಿ ಪುರೋಹಿತ್ ಕೊಪ್ಪಳ ಈ ಮೂವರು ಪತ್ರಕರ್ತರಿಗೆ ರಾಜೇಶ ಶಿಬಾಜೆ ಮಾಧ್ಯಮ ಪ್ರಶಸ್ತಿ ಪ್ರದಾನಿಸಿ ಅತಿಥಿüಗಳು ಗೌರವಿಸಿದರು.

ಡಾ| ಅಜೆಕಾರು ಅಧ್ಯಕ್ಷತೆ ವಹಿಸಿ ನಾವು ಪತ್ರಕರ್ತರನ್ನು ಗುರುತಿಸುವಾಗ ಯಾವ ಸಂಘಟನೆಯವರು, ಯಾವ ಪತ್ರಿಕೆ-ಮಾಧ್ಯಮದವರು ಎಂದು ಖಂಡಿತಾ ನೋಡುವುದಿಲ್ಲ. ರಾಜೇಶನ ಹಾದಿಯಲ್ಲಿ ಮುಂದಡಿಯಿಡುವುದು ಮಾತ್ರ ನಮಗೆ ಮುಖ್ಯ ಎಂದರು.

ರೂಪಾ ವಸುಂಧರಾ ಆಚಾರ್ಯ ಅವರ ಉಡುಪಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ನಡೆದ ಏಕವ್ಯಕ್ತಿ ಪುಷ್ಟಾಂಜಲಿ ಕಲಾಪ್ರದರ್ಶನವನ್ನು ಅಂತಾರಾಷ್ಟ್ರಿಯ ಕಲಾವಿದ ಪಿ.ಎನ್ ಆಚಾರ್ಯ ಉದ್ಘಾಟಿಸಿ ರಾಷ್ಟ್ರ ಮತ್ತು ವಿದೇಶಗಳಲ್ಲಿ ಕಲಿಸಿದ ಶಿಕ್ಷಕಿ, ಪ್ರದರ್ಶನ ನೀಡಿದ ಸಾಧಕಿ ರೂಪ ಎಂದು ಶುಭ ಹಾರೈಸಿದರು.

10 ವರ್ಷಗಳ ಕಾಲ ಪತ್ರಿಕೋಧ್ಯಮ ಮಾಡಿ ತಂದೆಯವರ ಸಲಹೆಯಂತೆ ದೇಗುಲಗಳ ನಿರ್ಮಾಣವನ್ನು ಆರಂಭಿಸಿ ಸೇವೆ ಸಲ್ಲಿಸುತ್ತಿದ್ದು ಟ್ರಸ್ಟ್ ಒಂದನ್ನು ಕೂಡಾ ನಡೆಸುತ್ತಿದ್ದೇನೆ. ಪತ್ರಕರ್ತರ ಸಂಸ್ಮರಣೆ ಗೌರವ ಪ್ರದಾನಕ್ಕೆ ಭಾಗವಹಿಸುವುದು ಕರ್ತವ್ಯ ಎಂದು ಆಗಮಿಸಿದ್ದೇನೆ ಎಂದು ಮರವಂತೆ ರಾಜಶೇಖರ ಹೆಬ್ಬಾರ್ ಅಭಿಪ್ರಾಯಪಟ್ಟರು.

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಎ, ಮಕ್ಕಳ ವಿಭಾಗದ ಸುನಿಧಿ ಮತ್ತು ಸುನಿಜ ಉಪಸ್ಥಿತರಿದ್ದು ಕರ್ನಾಟಕ ಯುವ ಸಾಹಿತ್ಯ ಸಮ್ಮೇಳನದ ಗೌರವವನ್ನು ಡಾ| ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ಪ್ರಾಂಶುಪಾಲ ಅಶೋಕ್ ಕುಮಾರ್ ಕಾಸರಗೋಡು ಅವರನ್ನು ಹರಿಕೃಷ್ಣ ಪುನರೂರು ಗೌರವಿಸಿದರು.
ಕಾರ್ಮಿಕ ಸಾಹಿತಿ ಈರಣ್ಣ ಕುರುವತ್ತಿ ಗೌಡರ್ ಸ್ವಾಗತಿಸಿದರು. ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಬಾಗದ ಮುಖ್ಯಸ್ಥ ಬೊರ್ಗಲ್‍ಗುಡ್ಡೆ ಮಂಜುನಾಥ ಕಾಮತ್ ಅಭಿನಂದನಾ ಭಾಷಣ ಮಾಡಿದರು. ಯುವ ಸಾಧಕಿ ಕಾವ್ಯ ಕಣಂಜಾರು ಕಾರ್ಯಕ್ರಮ ನಿರೂಪಿಸಿದರು. ಕವಯತ್ರಿ ರೇಷ್ಮಾ ಶೆಟ್ಟಿ ಗೋರೂರು ವಂದಿಸಿದರು.

ಪುಟಾಣಿ ವಂಡರ್ ಶೋದದಲ್ಲಿ 6 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಸುನಿಜ ಎಸ್.ಅಜೆಕಾರು, ಸಾನ್ನಿಧ್ಯ ಕವತ್ತಾರು, ತನಿಶಾ ಕಾರ್ಕಳ, ಆದ್ಯ ಕಾರ್ಕಳ, ಸುನಿಧಿ ಎಸ್.ಅಜೆಕಾರು ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ್ದು ಮಜಾಭಾರತ ಖ್ಯಾತಿಯ ಆರಾಧನಾ ಭಟ್ ಕಾರ್ಯಕ್ರಮ ನಿರೂಪಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here