Friday 29th, March 2024
canara news

ಮಕ್ಕಳ ತಜ್ಞ ಡಾ| ಯೋಗೇಶ್ ಆಚಾರ್ಯ ಮಂಗಳೂರು ನಿಧನ

Published On : 17 Mar 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಮಾ.17: ಪ್ರತಿಷ್ಠಿತ ಮತ್ತು ಹೆಸರಾಂತ ಮಕ್ಕಳ ತಜ್ಞ, ಜಿಎಸ್‍ಬಿ ಮಂಡಳಿ ಡೊಂಬಿವಿಲಿ ಇದರ ಮಾಜಿ ಅಧ್ಯಕ್ಷ ಡಾ| ಯೋಗೇಶ್ ಆಚಾರ್ಯ (80.) ಇಂದಿಲ್ಲಿ ಬುಧವಾರ ಮುಂಜಾನೆ ಹೃದಯಾಘಾತದಿಂದ ಉಪನಗರ ಡೊಂಬಿವಿಲಿ ಇಲ್ಲಿನ ತನ್ನದೇ ಆದ ಜೀವನ್ ಜ್ಯೋತ್ ಆಸತ್ರೆಯÀಲ್ಲಿ ನಿಧನರಾದರು.

ಇಂಡಿಯಾನ್ ಮೆಡಿಕಲ್ ಅಸೋಸಿಯೇಶನ್ ಇದರ (2001-2002) ಅಧ್ಯಕ್ಷರಾಗಿ, ಐಎಪಿ ಇದರ ಡೊಂಬಿವ್ಲಿ ಉಲ್ಲಾಸ್‍ನಗರ ವಿಭಾಗದ ಸಂಸ್ಥಾಪಕ ಅಧ್ಯಕ್ಷರಾಗಿ, ಡಾ| ಅಥಾವಾಲೆ ಫೌಂಡೇಶನ್ ಆಫ್ ಪೀಡಿಯಾಟ್ರಿಕ್ಸ್ ಸಯಾನ್ ಇದರ ಅಧ್ಯಕ್ಷರಾಗಿ, ಮಹಾ ಪೆಡಿ ಕಾನ್ ಇದರ ಅಧ್ಯಕ್ಷರಾಗಿ, ಜಿಎಸ್‍ಬಿ ಟ್ರಸ್ಟ್‍ನ ಸೀತಾರಾಮ್ ಎ.ಪೈ ಸ್ಮಾರಕ ಶಾಲೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿ, ವಿನೀತಾ ಎಜ್ಯುಕೇಶನ್ ಟ್ರಸ್ಟ್‍ನ ಸಂಚಾಲಕತ್ವದ ಆದರ್ಶ್ ಇಂಗ್ಲಿಷ್ ಶಾಲೆಯ ಅಧ್ಯಕ್ಷರಾಗಿ, ಬಿರ್ಲಾ ಕಾಲೇಜು ಮತ್ತು ಬಿರ್ಲಾ ಅಂತರರಾಷ್ಟ್ರೀಯ ಶಾಲೆಯ ಟ್ರಸ್ಟಿ ಆಗಿ ವಿವಿಧ ಕ್ಷೇತ್ರಗಳಲ್ಲಿ ಅನುಪಮ ಸೇವೆÉ ಸಲ್ಲಿಸಿದ್ದರು. ಐಎಪಿ ಇದರ ಮಹಾರಾಷ್ಟ್ರ ರಾಜ್ಯ ಅಧ್ಯಕ್ಷರಾಗಿ ಕೆಡಿಎಂಸಿಯಲ್ಲಿ ಲೀಡ್ ಪಲ್ಸ್ ಪೆÇೀಲಿಯೊ ಅಭಿಯಾನ ನಡೆಸಿ ಅಪ್ರತಿಮ ಸಾಧಕರೆಣಿಸಿದ್ದರು.

ಟೆರ್ನಾ ಮೆಡಿಕಲ್ ಕಾಲೇಜಿನಲ್ಲಿ ಪೀಡಿಯಾಟ್ರಿಕ್ಸ್ ಶಿಕ್ಷಕರಾಗಿ, ಮಹಾನಗರದಲ್ಲಿನ ಹೆಸರಾಂತ ವಾಡಿಯಾ ಆಸ್ಪತ್ರೆಯಲ್ಲಿ ಬೋಧನೆ ನೀಡಿರುವರು. ಪೀಡಿಯಾಟ್ರಿಕ್ ಕ್ಲಿನಿಕ್ಸ್ ಆಫ್ ಇಂಡಿಯಾ ಮಾಸಿಕದ ಪ್ರಧಾನ ಸಂಪಾದಕರಾಗಿ ಶ್ರಮಿಸಿದ್ದರು.

ಡೊಂಬಿವಿಲಿ ಶಿಕ್ಷಣ ಪ್ರಸಾರಕ್ ಮಂಡಳಿಯ ಸ್ಥಾಪಕ ಟ್ರಸ್ಟಿ, ಪೆಂಧರ್ಕರ್ ಕಾಲೇಜು, ಸೋದರಿ ನಿವೇದಿತಾ ಶಾಲೆ, ಪ್ರಭಾಕರ್ ದೇಸಾಯಿ ಇಂಟರ್‍ನ್ಯಾಷನಲ್ ಸ್ಕೂಲ್, ವನಿತಾ ಮದರ್ ಟಚ್ ಡೇ ಕೇರ್ ಸೆಂಟರ್ ಇವುಗಳ ಆಸ್ತಿತ್ವಕ್ಕೆ ಕಾರಣಕರ್ತರಾಗಿದ್ದರು. ಡೊಂಬಿವಿಲಿ ಜಿಮ್ಖಾನಾದ ಸ್ಥಾಪಕ ಸದಸ್ಯ, ಡೊಂಬಿವಿಲಿ ಜಿಮ್ಖಾನಾದಲ್ಲಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರು ಉತ್ಸವ್' ಆಚರಣೆಯನ್ನು ಪ್ರಾರಂಭಿಸಿದ್ದರು. ಡೊಂಬಿವಿಲಿ ರೋಟರಿ ಅಧ್ಯಕ್ಷರಾಗಿ ಕಿವುಡ ಮಕ್ಕಳಿಗಾಗಿ ರೋಟರಿ ವೃತ್ತಿಪರ ಕೇಂದ್ರ, ಕಿವುಡ ಮತ್ತು ಮೂಕ ಮಕ್ಕಳಿಗಾಗಿ ರೋಟರಿ ಶಾಲೆಯನ್ನು ಪ್ರಾರಂಭಿಸಿ ವೈದ್ಯಕೀಯದ ಶ್ರೇಷ್ಠತೆಯ ಜೊತೆಗೆ ಸಾಮಾಜಿಕ ಕಲ್ಯಾಣ ಮತ್ತು ಸಮುದಾಯದ ಸುಧಾರಣೆಗೆ ನೀಡಿದ ಅಪಾರ ಕೊಡುಗೆಗೆ ಹೆಸರುವಾಸಿ ಆಗಿದ್ದ ಡಾ| ಯೋಗೇಶ್ ಕೆಲವು ನಾಕ್ಷತ್ರಿಕ ಸಂಸ್ಥೆಗಳನ್ನು ಸ್ಥಾಪಿಸಿ ನಾಡಿನ ಜನತೆಗೆ ಪ್ರೇರಕಶಕ್ತಿಯಾಗಿದ್ದರು.

ಅವಿಭಜಿತ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆಯ (ಉಡುಪಿ) ಉದ್ಯಾವರ ಮೂಲತಃ ಡಾ| ಯೋಗೇಶ್ ಓರ್ವ ಧಾರ್ಮಿಕ ಶ್ರದ್ಧಾಳುವಾಗಿದ್ದು ಗುರುಪುರದಲ್ಲಿ ಸ್ವಾಮಿ ನಾರಾಯಣ್ ದೇವಾಲಯ ನಿರ್ಮಿಸಿದ್ದಾರೆ. ಶಿಕ್ಷಣಾಭಿಮಾಗಿ ಆಗಿದ್ದು ಆಥಿರ್üಕವಾಗಿ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮಕ್ಕಳಿಗೆ ವಿದ್ಯಾಥಿರ್üವೇತನಕ್ಕಾಗಿ ಮುಖ್ಯ ಪ್ರಾಯೋಜಕರಾಗಿದ್ದಾರೆ. ಸಾಮಾಜಿಕ ಕಲ್ಯಾಣಕ್ಕಾಗಿ ಅವರು ನೀಡಿದ ಕೊಡುಗೆಗಾಗಿ ಕರ್ನಾಟಕ ಸರ್ಕಾರದ ಪ್ರಶಸ್ತಿಗೆ ಭಾಜನರಾಗಿದ್ದರು. ಬ್ರಾಹ್ಮಣ ಸಭಾ ಡೊಂಬಿವಿಲಿ ಸಂಸ್ಥೆಯಿಂದ ಧನ್ವಂತರಿ ಪ್ರಶಸ್ತಿ, ಮಕ್ಕಳ ವೈದ್ಯಕೀಯ ಉಪಚಾರಶಾಸ್ತ್ರ (ಪೀಡಿಯಾಟ್ರಿಕ್ಸ್) ಕ್ಷೇತ್ರದಲ್ಲಿ ನೀಡಿದ ಕೊಡುಗೆಗಾಗಿ ಥಾಣೆ ಐಎಪಿಯಿಂದ ವಿಶೇಷ ಗುರುತಿಸುವಿಕೆ ಪ್ರಶಸ್ತಿ ಸೇರಿದಂತೆ ಹತ್ತುಹಲವು ಗೌರವಗಳಿಗೆ ಪಾತ್ರರಾಗಿರುವರು.

ಮೃತರು ಒಂದು ಗಂಡು ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

 




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here