Thursday 28th, March 2024
canara news

ಅಪರೇಷನ್ ಸಾರಂಗ್-ಗಲ್ಫ್ ಕನ್ನಡಿಗರ ಒಕ್ಕೂಟದಿಂದ ಮಾನವೀಯತೆಯ ಕಾರ್ಯಾಚರಣೆ

Published On : 02 Apr 2021   |  Reported By : Rons Bantwal


ಅಪದ್ಭಂವರಾಗಿ ಶ್ರಮಿಸಿದ ಸುರೇಶ್ ರಾವ್ ನೇರಂಬಳ್ಳಿ - ಗಲ್ಫ್ ಕನ್ನಡಿಗರ ಒಕ್ಕೂಟ

ಮುಂಬಯಿ (ಆರ್‍ಬಿಐ), ಎ.01: ಕಳೆದ 30 ವರ್ಷಗಳಿಂದಸೌದಿಅರೇಬಿಯಾದಲ್ಲಿಎಸಿ ಟೆಕ್ನೀಷಿಯನ್ ಆಗಿ ದುಡಿಯು -ತ್ತಿದ್ದು, ಅಲ್ಲಿಯವರನ್ನು ತಂಪಾಗಿ ಇಡುತ್ತಿದ್ದ ಕುಂದಾಪುರದ ಮೇಲ್ಖಾರ್ವಿಕೇರಿ ನಿವಾಸಿ ಚಂದ್ರಶೇಖರ್ ಪಾಂಡುರಂಗ ಸಾರಂಗ ಅವರ ಬದುಕಿನಲ್ಲಿ ಬಿಸಿ ಬಿರುಗಾಳಿಯ ಹೊಡೆತ. ಕಳೆದ 3 ತಿಂಗಳಿನಿಂದ ಪಾರ್ಶ್ವವಾಯು ಪೀಡಿತರಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಆಘಾತದ ವಿಷಯ ಅವರ ಸಹೋದ್ಯೋಗಿಗಳು ಕುಟುಂಬದವರಿಗೆ ವಿಷಯ ತಿಳಿಸಿದ್ದು, ನಂತರ ಪಾರ್ಶ್ವವಾಯುವಿನಿಂದ ಮಾತನಾಡಲಿಕ್ಕೂ ಆಗದೆ, ಆಸ್ಪತ್ರೆಯವರು ಮೊಬೈಲ್ ನಿಷೇಧಿಸಿದ್ದರಿಂದ ಪರಿಸ್ಥಿತಿ ತಿಳಿಯಲಾರದೆ ಅವರ ಮಗನು ಕುವೈಟ್‍ನಲ್ಲಿರುವ ಮೂಲತ: ಕೋಟೇಶ್ವರದ ಸುರೇಶ್ ರಾವ್ ನೇರಂಬಳ್ಳಿ ಅವರನ್ನು ಸಂಪರ್ಕಿಸಿ ತಂದೆಯನ್ನು ಭಾರತಕ್ಕೆ ಕರೆತರುವ ಸಹಾಯಕ್ಕಾಗಿ ಕೇಳಿಕೊಂಡರು. ಸುರೇಶ್ ರಾವ್ ತಕ್ಷಣ ಕಾರ್ಯಪ್ರವೃತ್ತರಾಗಿ ಅವರ ಬಗ್ಗೆ, ಕಂಪೆನಿ ಮತ್ತು ಮಾಲೀಕರ ಬಗ್ಗೆ ವಿವರ ಪಡೆದುಕೊಂಡು ಅವರ ಪರಿಸ್ಥಿತಿ ಬಗ್ಗೆ ತಿಳಿಯಲಿಕೋಸ್ಕರ ಸೌದಿಯಲ್ಲಿ ಅವರಿಗೆ ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯ ನರ್ಸ್ ಒಬ್ಬರ ಸಹಾಯದಿಂದ ಅವರದೆ ಮೊಬೈಲ್‍ನಿಂದ ವಿಡಿಯೋ ಕಾಲ್ ಮೂಲಕ ಕುಟುಂಬದ ಸಂಪರ್ಕ ಸಾಧಿಸಿದರು.

ದುರಾದೃಷ್ಟವೆಂದರೆ, ರೋಗಿಯು ಪಾರ್ಶ್ವವಾಯು ಪೀಡಿತರಾದ್ದರಿಂದ ಮಾತನಾಡಲು ಆಗದೆ, ಬರಿಯ ಕೈ, ತಲೆ ಅಲುಗಾಡಿಸುವುದರಿಂದ ಮನೆಯವರೊಂದಿಗೆ ಸಂವಹನ ನೆಡೆಸಿ ಸಮಾಧಾನ ಪಡಿಸಬೇಕಾಯಿತು. ಸುರೇಶ್ ರಾವ್ ಕುವೈಟ್‍ನಿಂದ ತಾವು ಪ್ರತಿನಿಧಿಸುತ್ತಿದ್ದ ತಮ್ಮ ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ ಪ್ರತಿನಿಧಿಗಳಾದ ಅಬುಧಾಬಿಯ ಸರ್ವೋತ್ತಮ ಶೆಟ್ಟಿ ಹಾಗೂ ದುಬಾಯಿಯ ಹೆಸರಾಂತ ಸಮಾಜ ಸೇವಕ ಪ್ರವೀಣ್‍ಕುಮಾರ್ ಶೆಟ್ಟಿ ವಾಕ್ವಾಡಿ, ದೀಪಕ್ ಸೋಮಶೇಖರ್ ಅವರ ಜೊತೆ ಸಮಾಲೋಚಿಸಿ, ಸಂಘದ ಸೌದಿ ಅರೇಬಿಯಾದ ಪ್ರತಿನಿಧಿಯೂ ಸೌದಿಯಲ್ಲಿ ಭಾರತೀಯ ರಾಯಭಾರಿ ಕಚೇರಿಯ ಅಂಗೀಕೃತ ಸಮಾಜ ಸೇವಕರೂ ಆದ ಮಂಗಳೂರು ಗಣೇಶಪುರ ಪ್ರಸನ್ನ ರಾವ್ ಮತ್ತು ಸೌದಿಯ ಕೆಎಂಸಿ ಆಸ್ಪತ್ರೆ ನಡೆಸುತ್ತಿರುವ ಆರ್.ಡಿ ಸಂತೋಷಕುಮಾರ್ ಶೆಟ್ಟಿ ಹಾಗೂ ಅವರ ಪತ್ನಿ ಡಾ| ವಾಣಿಶ್ರೀ ಶೆಟ್ಟಿ ಅವರನ್ನು ಸಂಪರ್ಕಿಸಿದರು.

ಹಾಗೆಯೆ ಭಟ್ಕಳದಲ್ಲಿರುವ ಡಾ| ಜಹೀರ್ ಅವರ ಮೂಲಕ ಸೌದಿಯಲ್ಲಿರುವ ಫೌಜನಿ ಬಡ್ಚೋಲು ಮುರ್ಡೇಶ್ವರ ಸಂಪರ್ಕಿಸಿ ಸಹಾಯ ಪಡೆದು ಆಸ್ಪತ್ರೆಗೆ ಭೇಟಿ ಮಾಡಿಸಲಾಗಿ ಸಾರಂಗ ಅವರು ತನ್ನ ನಡುಗುವ ಕೈಯಿಂದ ಹಿಡಿದು ನನ್ನನ್ನು ಊರಿಗೆ ಕಳುಹಿಸುತ್ತೀರಾ ಎಂದು ಸಂಜ್ಞೆಯಿಂದಲೆ ಕೇಳಿಕೊಂಡಿದ್ದು, ಈ ಮಧ್ಯೆ ಸಾರಂಗರ ಸೌದಿಯ ಮಾಲೀಕ ಅಬ್ದುಲ್ಲಾ ಅವರನ್ನು ಸಂಪರ್ಕಿಸಿ, ಸೌದಿಯ ಸರಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಚಿನ್ನದಂತಹ ವ್ಯಕ್ತಿತ್ವದ ಅಬ್ದುಲ್ಲಾ ಅವರು, ತಾವೇ ಸ್ವತÀ: ಎರೆಡೆರೆಡು ಬಾರಿ ಟಿಕೇಟ್ ಮಾಡಿಸಿದ್ದರೂ, ಭಾರತಕ್ಕೆ ಕಳಿಸಬೇಕೆಂದಿದ್ದರೂ ಭಾರತೀಯ ರಾಯಭಾರಿ ಕಚೇರಿಯಿಂದ ಕೆಲವು ಕಾಗದಪತ್ರಗಳು ಬೇಕಿದ್ದು ಮತ್ತು ರೋಗಿಯು ಮಲಗಿರುವ ಸ್ಥಿತಿಯಲ್ಲೆ ಇದ್ದು, ಪ್ರಸ್ತುತ ಕೋವಿಡ್ ಪರಿಸ್ಥಿತಿಯಲ್ಲಿ ಸ್ಟ್ರೆಚರ್ ವ್ಯವಸ್ಥೆಯಿರುವ ದೊಡ್ಡ ವಿಮಾನಗಳ ಹಾರಾಟವಿರದೆ, ಈಗಿರುವ ಚಾರ್ಟಡ್ ವಿಮಾನಗಳು, ವಂದೇ ಭಾರತ್ ಮಿಷನ್ ಅಡಿಯಲ್ಲಿರುವ ವಿಮಾನಗಳು ಚಿಕ್ಕದಾಗಿದ್ದು ಸ್ಟ್ರೆಚರ್‍ನ ವ್ಯವಸ್ಥೆ ಇಲ್ಲದೆ ಎರೆಡೆರೆಡು ಬಾರಿ ಟಿಕೇಟ್ ಮಾಡಿಸಿ ರದ್ದಾಗಿರುವ ಬಗ್ಗೆ ತಿಳಿಸಿ ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದರು. ಪ್ರಸನ್ನ ರಾವ್ ಮೂಲಕ ರಾಯಭಾರಿ ಕಚೇರಿಯಿಂದ ದಾಖಲೆಗಳನ್ನು ಮಾಡಿಸಿಕೊಂಡು, ಸಾರಂಗ ಅವರ 2 ತಿಂಗಳ ಹಿಂದೆಯೇ ಅವಧಿ ಮೀರಿದ ಪಾಸ್‍ಪೆÇೀರ್ಟ್‍ನ್ನು ಉರ್ಜಿತ ಗೊಳಿಸಿ 3ನೇ ಬಾರಿಗೆ ಮಾ.16ರಂದು ದಮಾಮ್ ಮಂಗಳೂರು ಟಿಕೇಟ್ ಮಾಡಲಾಯಿತಾದರೂ ಆಸ್ಪತ್ರೆಯವರು ರೋಗಿಯ ಜೊತೆ ಸಹ ಪ್ರಯಾಣಿಕರಾಗಿ ಒರ್ವ ಡಾಕ್ಟರ್ ಯಾ ನರ್ಸ್ ವ್ಯವಸ್ಥೆ ಮಾಡುವುದಾದರೆ ಮಾತ್ರ ಅನುಮತಿಪತ್ರ ನೀಡಿ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರಿಂದ ಮತ್ತೊಮ್ಮೆ ಪ್ರಯಾಣ ಕಾರ್ಯಾಚರಣೆಗೆ ಹಿನ್ನಡೆಯಾಯಿತು. ಹೀಗೆ ಅವರನ್ನು ತಾಯ್ನಾಡಿಗೆ ಕರೆತರುವ ಕಾರ್ಯಾಚರಣೆಯ ಹಲವಾರು ಪ್ರಯತ್ನಗಳು ವಿಫಲವಾಗಿ ಕಳೆದ 15ದಿನಗಳಿಂದ ಛಲಬಿಡದೆ ಪ್ರಯತ್ನಿಸಿ, 4ನೇ ಬಾರಿಗೆ ಮಾ.24ರದು ಟಿಕೇಟ್ ಮಾಡಿಸಿ, ರೋಗಿಯನ್ನು ಆಂಬ್ಯುಲೆನ್ಸ್ ಮೂಲಕ ದಮಾಮ್‍ಗೆ ಕರೆತರಲಾಯಿತು.

ಇನ್ನೊಂದು ಅಡ್ಡಿ! ಮತ್ತೊಂದು ವಾಹನದಲ್ಲಿ ಹಿಂಬಾಲಿಸುತ್ತಿರುವ ಪ್ರಸನ್ನ ರಾವ್ ಅವರು ಸಾರಂಗ ಅವರ ಬ್ಯಾಗ್‍ಗಳನ್ನು ಕೊಟ್ಟ ಅವರ ರೂಂಮೇಟ್ ಹೇಳಿದ ಮಾತಿನಂತೆ ಪಾಸ್‍ಪೆÇೀರ್ಟ್ ಬ್ಯಾಗಿನಲ್ಲಿದೆ ಎಂದು ನಂಬಿಕೊಂಡು ಬಂದರೆ, ಪಾಸ್‍ಪೆÇೀರ್ಟ್ ರೂಮ್‍ನಲ್ಲೆ ಉಳಿದಿದ್ದು ಅರ್ಧದಾರಿಯಿಂದ ಹಿಂತಿರುಗಿ ಹೋಗಿ ತರಬೇಕಾದ ಪ್ರಸಂಗವೂ ನೆಡೆಯಿತು. ಇಷ್ಟೆಲ್ಲಾ ಅಡ್ಡಿ-ಆತಂಕಗಳನ್ನು ನಿವಾರಿಸಿಕೊಂಡು ಬಂದರೆ ದಮಾಮ್‍ನಲ್ಲಿ ಇವರು ಪ್ರಯಾಣಿಸುವ ಏರ್ ಇಂಡಿಯಾ ಎಕ್ಸ್‍ಪ್ರೆಸ್ ಸಿಬ್ಬಂದಿಗಳಿಂದ ಇವರಿಗೆ ಪ್ರಯಾಣಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂಬ ಕಿರಿಕಿರಿ. ಡಾ| ಶೈಲೇಂದ್ರನಾಥ್ ಬೇಕಲ್ ತಾನು ಡಾಕ್ಟರ್ ಆಗಿದ್ದು ಅವರಿಗೆ ಸಹ ಪ್ರಯಾಣಿಕನಾಗಿ ಸ್ಪಂದಿಸುತ್ತಾ ಅವರ ಸಂಪೂರ್ಣ ಜವಾಬ್ದಾರಿ ತನ್ನದು ಎಂದು ಹೇಳಿದ ನಂತರ ಅನುಮತಿ ದೊರೆಯಿತು.

ಕಾರ್ಯಾಚರಣೆಯ ಅಂಗವಾಗಿ ಅವರು ಬಂದಿಳಿದ ನಂತರ ಮಂಗಳೂರು ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಯಾವುದೇ ತೊಂದರೆ, ಅಡಚಣೆಯಿಲ್ಲದೆ ಶೀಘ್ರವಾಗಿ ಹೊರಬರಲು ಸುರೇಶ್ ರಾವ್ ಸಂಬಂಧಪಟ್ಟ ಅಧಿಕಾರಿಗಳಿಗೆ, ಶಾಸಕರು-ಸಂಸದರಿಗೆ ಪೆÇೀನ್ ಮೂಲಕ ಹಾಗೂ ಪ್ರಧಾನಮಂತ್ರಿ ಅವರಿಗೆ ಕೂಡಾ ಟ್ವೀಟ್ ಮೂಲಕ ವಿನಂತಿಸಿ ಕೊಂಡಿದ್ದರು. ಸಾರಂಗರವರ ಕ್ಷೇಮವಾಗಿ ತಲುಪುವಿಕೆ ಗೋಸ್ಕರ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರ್ಥನೆಗಾಗಿ ವಿನಂತಿಸಿ ಕೊಳ್ಳಲಾಗಿತ್ತು. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಡೆ ಗಲ್ಫ್ ಕನ್ನಡಿಗರ ಒಕ್ಕೂಟದ ವತಿಯಿಂದ ಗಲ್ಫ್ ಕನ್ನಡಿಗರ ಒಕ್ಕೂಟದ ದುಬಾಯಿ ಪ್ರತಿನಿಧಿ ಸಾಧನಾ ಶಿರೂರು ಅವರು ಅಂಬ್ಯುಲೆನ್ಸ್ ಕೂಡಾ ಸರ್ವಸನ್ನದ್ಧ ಸ್ಥಿತಿಯಲ್ಲಿ ಕಾದಿರಿಸುವ ವ್ಯವಸ್ಥೆಮಾಡಿಸಿದ್ದು, ಕೊನೆಗೂ ಸಾರಂಗ್ ದಮಾಮ್‍ನಿಂದ ಸುಖಕರವಾಗಿ ಪ್ರಯಾಣಿಸಿ ಮಂಗಳೂರಿನ ಅಂತರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಮಾ.25ರ ಬೆಳಗಿನ ಜಾವ ಕ್ಷೇಮವಾಗಿ ತಲುಪಿ, ಅಲ್ಲಿಂದ ಆಂಬ್ಯುಲೆನ್ಸ್‍ನಲ್ಲಿ ಪ್ರಯಾಣಿಸಿ ಪ್ರಾಥಮಿಕ ತಪಾಸಣೆಯನ್ನು ಮಂಗಳೂರಿನ ಎ.ಜೆ ಆಸ್ಪತ್ರೆಯಲ್ಲಿ ಮುಗಿಸಿ ಸಂಜೆ ಮನೆ ತಲುಪಿ ಕುಟುಂಬದವರನ್ನು ಕೂಡಿಕೊಂಡಿದ್ದಾರೆ.

ಕೊನೆಗೂ ಫಲಪ್ರದವಾದ ಈ ಸಂಪೂರ್ಣ ಕಾರ್ಯಾಚರಣೆಯ ಬಗ್ಗೆ ಕುವೈಟ್‍ನಿಂದ ಸುರೇಶ್ ರಾವ್ ನೇರಂಬಳ್ಳಿ ಅವರು ಇದು ನಮ್ಮೆಲ್ಲರ ಅಳಿಲುಸೇವೆ, ನಿಮ್ಮೆಲ್ಲರ ಪ್ರಾರ್ಥನೆ, ಆ ಭಗವಂತನ ಅನುಗ್ರಹ ಅವರನ್ನು ಕಾಪಾಡಿದೆ. ಈ ಕಾರ್ಯದಲ್ಲಿ ಭಾಗಿಯಾದ ಗಲ್ಫ್ ಕನ್ನಡಿಗರ ಒಕ್ಕೂಟದ ಎಲ್ಲಾ ಗಲ್ಫ್ ರಾಷ್ಟ್ರಗಳ ಪ್ರತಿನಿಧಿಗಳು, ಸಲಹೆ, ಸಹಕಾರ ನೀಡಿದ ಸರ್ವೋತ್ತಮಶೆಟ್ಟಿ ಅಬುಧಾಬಿ, ದೀಪಕ್ ಸೋಮಶೇಖರ್ ದುಬಾಯಿ ಮತ್ತಿತರರ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರ್ಯಾಚರಣೆಯಲ್ಲಿ ಭಾಗಿಯಾದವರ, ಸೌದಿ ಅರೇಬಿಯಾದ ರಾಜಾಡಳಿತ, ಸೌದಿಯಲ್ಲಿನ ಅವರ ಮಾಲೀಕರಾದ ಅಬ್ದುಲ್ಲಾರ, ಸಹೋದ್ಯೋಗಿಗಳು, ರಿಯಾದ್ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು, ಸೌದಿಯ ಭಾರತೀಯ ರಾಯಭಾರಿ ಮತ್ತು ರಾಯಭಾರಿ ಕಛೇರಿ ಸಿಬ್ಬಂದಿಗಳು, ಸೌದಿಯಲ್ಲಿ ಆಂಬ್ಯುಲೆನ್ಸ್ ಸಿಬ್ಬಂದಿಗಳು, ಸೌದಿ ಗಫ್ ಕನ್ನಡಿಗರ ಒಕ್ಕೂಟದ ಸದಸ್ಯರಾದ ಆರ್.ಡಿ ಸಂತೋಷ್ ಶೆಟ್ಟಿ, ಡಾ| ವಾಣಿಶ್ರೀ ಎಸ್.ಶೆಟ್ಟಿ, ಗಣೇಶಪುರ ಪ್ರಸನ್ನರಾವ್, ಮಂಗಳೂರು ಇವರುಗಳ ಜೊತೆಯಲ್ಲಿ ಸೌದಿಯಲ್ಲಿರುವ ಫೌಜನಿ ಬಡ್ಚೋಲು ಮುರ್ಡೇಶ್ವರ, ಡಾ| ವಾಸೀಮ್, ಡಾ| ಉದಯ್ ನಾಯಕ್, ಡಾ| ಜಹೀರ್ ಬೆಂಗಳೂರು, ಡಾ| ಶೈಲೇಂದ್ರನಾಥ್ ಬೇಕಲ್, ಟೀಮ್ ಹೆಲ್ತ್‍ಕೇರ್ ಪೆÇಲಿಕ್ಲಿನಿಕ್ ಹಾಗೂ ಭಟ್ಕಳದಲ್ಲಿರುವ ಡಾ| ಜಹೀರ್, ಕುಂದಾಪುರದಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ ಗಲ್ಫ್ ಕನ್ನಡಿಗ ಒಕ್ಕೂಟದ ದುಬಾಯಿ ಸದಸ್ಯರಾದ ಸಾಧನಾ ಶಿರೂರು ಹಾಗೂ ಪ್ರಾಥಿರ್üಸಿದ ತಮಗೆಲ್ಲರಿಗೂ ಕೃತಜ್ಞತೆಗಳು ಹಾಗೂ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ:
ಕಳೆದ 20 ವರ್ಷಗಳಿಂದ ಕುವೈಟ್‍ನಲ್ಲಿ ಉದ್ಯೋಗದಲ್ಲಿರುವ ಕೋಟೇಶ್ವರ ಮೂಲದ ಸುರೇಶ್ ಶ್ಯಾಮ್ ರಾವ್ ನೇರಂಬಳ್ಳಿ ಇವರು ಹಲವಾರು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಸಮಾಜ ಸೇವಕರು, ಹವ್ಯಾಸಿ ಪತ್ರಕರ್ತರು ಆಗಿದ್ದು, ಹಲವಾರು ಮಾಧ್ಯಮಗಳಿಗೆ ಕುವೈತ್ ವರದಿಗಾರರು ಮತ್ತು ಭಾಷಾಂತರ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶ್ರೀಯುತರು ಹೊರನಾಡು ಕನ್ನಡಿಗ ಹಾಗೂ ಸಮಾಜ ಸೇವೆ ವಿಭಾಗ ಗಳಲ್ಲಿ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here