Monday 10th, May 2021
canara news

ಸಂವಿಧಾನ ಶಿಲ್ಪಿ ಡಾ| ಬಿ.ಆರ್ ಅಂಬೇಡ್ಕರ್ ಜನ್ಮೋತ್ಸವದಲ್ಲಿ ಸಂಸದ ಗೋಪಾಲ್ ಸಿ.ಶೆಟ್ಟಿ

Published On : 14 Apr 2021   |  Reported By : Rons Bantwal


ಕಷ್ಟ ಸಹಿಷ್ಣುಹಿ ಡಾ| ಅಂಬೇಡ್ಕರ್‍ರ ಸಾಮಾಜಿಕ ಸುಧಾರಣೆ ಮಾದರಿ ಆಗಿಸೋಣ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಎ.14: ಕಾಂದಿವಿಲಿಪಶ್ಚಿಮದ ಫತೇಹ್ ಭಾಗ್ ಇಲ್ಲಿನ ಶತಾಬ್ದಿ ಆಸ್ಪತ್ರೆಯಲ್ಲಿ ಇಂದಿಲ್ಲಿ ಬೆಳಿಗ್ಗೆಭಾರತದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ| ಬಿ.ಆರ್ ಅಂಬೇಡ್ಕರ್ (ಬಾಬಾ ಸಾಹೇಬ್ ರಾಮಜಿ ಅಂಬೇಡ್ಕರ) ಅವರ 130ನೇ ಜನ್ಮೋತ್ಸವ ಆಚರಿಸಲಾಗಿದ್ದು ಉತ್ತರ ಮುಂಬಯಿ (ಬೋರಿವಿಲಿ) ಲೋಕಸಭಾ ಕ್ಷೇತ್ರದ ಸಂಸದ ಗೋಪಾಲ್ ಸಿ.ಶೆಟ್ಟಿ ಪಾಲ್ಗೊಂಡು ಆವರಣದಲ್ಲಿನ ಡಾ| ಬಿ.ಆರ್ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆಗೈದು ನಮಿಸಿದರು.

ಶಾಸಕ ಸುನೀಲ್ ರಾಣೆ, ಉತ್ತರ ಮುಂಬಯಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಗಣೇಶ್ ಕಾಂಕರ್, ಉಪಾಧ್ಯಕ್ಷ ಎರ್ಮಾಳ್ ಹರೀಶ್ ಶೆಟ್ಟಿ, ವಿನೋದ್ ಶ್ಹೆಲಾರ್, ಬಂಟ್ಸ್ ಸಂಘ ಮುಂಬಯಿ ಜತೆ ಕೋಶಾಧಿಕಾರಿ ಮುಂಡಪ್ಪ ಎಸ್.ಪಯ್ಯಡೆÀ, ಇಂಡಿಯನ್ ಹೊಟೇಲ್ ಎಂಡ್ ರೆಸ್ಟೋರೆಂಟ್ ಅಸೋಸಿಯೇಶನ್ (ಆಹಾರ್) ವಲಯ 10ರ ಕಾರ್ಯಾಧ್ಯಕ್ಷ ಡಾ| ಸತೀಶ್ ಶೆಟ್ಟಿ ಉಪಸ್ಥಿತರಿದ್ದು ಆಹಾರ್) ವಲಯ 10ರ ಮಾಜಿ ಕಾರ್ಯಾಧ್ಯಕ್ಷ ರವೀಂದ್ರ ಎಸ್.ಶೆಟ್ಟಿ ಕರ್ನಿರೆ ಇವರಿಗೆ `ಧೈರ್ಯವಂತ ಸಾಧಕ ಮೆಚ್ಚುಗೆ ಗೌರವ' ಪ್ರದಾನಿಸಿ ಸನ್ಮಾನಿಸಿ ಅಭಿನಂದಿಸಿದರು.

ಇತ್ತೀಚೆಗೆ ದಹಿಸರ್‍ನ ಹೊಟೇಲ್‍ಗೆ ನುಗ್ಗಿ ಹೊಟೇಲು ಮಾಲೀಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಕರ್ತವ್ಯ ಲೋಪವೆಸಗಿದ ಪಾನಮತ್ತ ಪೆÇೀಲಿಸ್ ಮೇಲೆ ಕ್ರಮಕೈಗೊಂಡ ಧೈರ್ಯಶಾಲಿಗಳಾದ ರವೀಂದ್ರ ಎಸ್.ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ ಇವರಂತಹ ಪರಾಕ್ರಮಿಗಳ ಸಾಧನೆ ಸ್ತುತ್ಯಾರ್ಹ. ಭವ್ಯ ರಾಷ್ಟ್ರ ನಿರ್ಮಾಣಕ್ಕಾಗಿ ಡಾ| ಅಂಬೇಡ್ಕರ್ ಅವರೂ ಕಷ್ಟ ಸಹಿಷ್ಣುಹಿಯಾಗಿ ಶ್ರಮಿಸಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸಿದ ಕಾರಣ ನಾವು ಇಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅಸ್ಪೃಶ್ಯತೆ ಮುಕ್ತರಾಗಿ ಸ್ವತಂತ್ರ್ಯರಾಗಿ ಬದುಕುತ್ತಿದ್ದೇವೆ. ಉದ್ಯಮ, ವೈಯಕ್ತಿಕ ಅಥವಾ ಸಾಮಾಜಿಕ ನ್ಯಾಯಕ್ಕಾಗಿ ಎಂದೂ ಹೆದರದೆ ಧೈರ್ಯಶಾಲಿಗಳಾಗಿ ದಿಟ್ಟತನದಿಂದ ಹೋರಾಡಿ ಅದಕ್ಕೆ ಪರಿಹಾರ ಕಂಡುಕೊಳ್ಳಲು ಯಾವತ್ತೂ ಹಿಂಜರಿಯಬಾರದು. ವಿಷಯ ತಥ್ಯವಾಗಿದ್ದರೆ ಸತ್ಯವನ್ನು ಎಂದೂ ಮುಚ್ಚಿಡದೆ ಅದನ್ನು ಸಹಿಸಿ ಸುಮ್ಮಲಾಗಬಾರದು. ನ್ಯಾಯಕ್ಕಾಗಿ ನಿರ್ಭೀತರಾಗಿ ಎದೆಗಾರಿಕೆಯಿಂದ ಪ್ರತಿಭಟಿಸಿ ನ್ಯಾಯಕ್ಕಾಗಿ ಹೋರಾಟ ನಡೆಸಿದಾಗ ಮಾತ್ರ ಗೆಲುವು ಸಾಧಿಸುವುದು ಎಂದು ಗೋಪಾಲ್ ಶೆಟ್ಟಿ ತಿಳಿಸಿದರು.

ಅಧಿಕಾರಸ್ಥರ ಕರ್ತವ್ಯಗಳನ್ನು ಪ್ರಾಮಾಣಿಕರಾಗಿ ನಡೆಸಲು ಜನತೆ ಸಹಕರಿಸಬೇಕೇ ಹೊರತು ಜನರ ಮೇಲೆ ನಿಯಂತ್ರಣವಿಡಲು ಅಧಿಕಾರಿಗಳಿಗೆ ಅವಕಾಶ ನೀಡಬಾರದು. ಇದರಿಂದ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವ -ಣೆಗಳನ್ನು ತರಲು ಸುಲಭವಾಗುವುದು. ಪೂಜ್ಯ ಅಂಬೇಡ್ಕರ್ ಅವರಿಗೆ ಭಾರತದ ಪರಮೋಚ್ಛ ನಾಗರಿಕ ಪುರಸ್ಕಾರ ಭಾರತ ರತ್ನ ನೀಡಿ ಗೌರವಿಸಿದಂತೆ ನಮ್ಮ ಅಸುಪಾಸಿನಲ್ಲಿ ಸಾಮಾಜಿಕ ಕಾಳಜಿಯೊಂದಿಗೆ ತಮ್ಮಿಂದಾದ ಸಾಧನೆಗೈದ ಸಾಧಕರಿಗೂ ಸ್ಥಾನೀಯ ಜಿಲ್ಲಾಡಳಿತ, ಜನಪ್ರತಿನಿಧಿಗಳು ಗೌರವ ಪ್ರಾಪ್ತಿಸಿದಾಗ ಅವರಲ್ಲಿ ಸೇವಾ ಉತ್ಸಾಹ ಇಮ್ಮಡಿಗೊಂಡು ಅವರು ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರಕವಾಗುವುದು. ಭಾರತದಲ್ಲಿ ಜಾತಿ ಪದ್ಧತಿ, ಸ್ವತಂತ್ರ ಕಾರ್ಮಿಕ ವರ್ಗದ ಸಂವಿಧಾನಾತ್ಮಕ ನಿಯಮಗಳನ್ನು ರಚಿಸಲು ಅಂಬೇಡ್ಕರ್ ಅವರು ಸಮರ್ಥರಾಗಿ ಶ್ರಮಿಸಿದ ಪರಿಣಾಮವಾಗಿ ನಾವು ಇಂದು ನೆಮ್ಮದಿಯಿಂದ ಬಾಳಲು ಸಾಧ್ಯವಾಗುತ್ತಿದೆ ಎಂದೂ ಸಂಸದ ಶೆಟ್ಟಿ ತಿಳಿಸಿದರು.

 
More News

 ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಲಾಕ್‍ಡೌನ್ ಸಮಯದಲ್ಲಿಯೂ ಅಶಕ್ತರಿಗೆ ನೆರವಾಗುತ್ತಿರುವ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ : ಮಮತಾ ಶೆಟ್ಟಿ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ
ಮಂಗಳೂರು  ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಆರ್‍ಟಿ-ಪಿಸಿಆರ್ ವಿನÀಃ ಹೊರೆಗೆ ಬಿಡಲಾಗುವುದಿಲ್ಲ

Comment Here