Thursday 18th, April 2024
canara news

ತುಳುನಾಡ ರಕ್ಷಣಾ ವೇದಿಕೆಯ ಅಂತರ್‍ರಾಷ್ಟ್ರೀಯ ಘಟಕದ

Published On : 29 Apr 2021   |  Reported By : Rons Bantwal


ಗೌರವಾಧ್ಯಕ್ಷರಾಗಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವಿರೋಧ ಆಯ್ಕೆ

ಮುಂಬಯಿ (ಆರ್‍ಬಿಐ), ಜ.17: ಜನಸೇವೆ ಹಾಗೂ ತುಳುನಾಡ ಭಾಷೆ, ಸಂಸ್ಕೃತಿ ಪರ ಸಂಘಟನೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿರುವ ತುಳುನಾಡ ರಕ್ಷಣಾ ವೇದಿಕೆಯ ಅಂತರ್‍ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷರಾಗಿ ತುಳು ಚಲನಚಿತ್ರ ನಿರ್ಮಾಪಕ, ಸಮಾಜ ಸೇವಕ ದುಬಾಯಿ ಇಲ್ಲಿನ ಪ್ರತಿಷ್ಠಿತ ಉದ್ಯಮಿ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ 5ನೇ ಬಾರಿಗೆ ಅವಿರೋಧ ಆಯ್ಕೆ ಆಗಿದ್ದಾರೆ ಎಂದು ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ತಿಳಿಸಿದ್ದಾರೆ.

ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ಇದೀಗ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಯುವಘಟಕ, ಮಹಿಳಾ ಘಟಕ, ಮಾಲಕರ ಘಟಕ, ಕ್ಷೇತ್ರವಾರು ಘಟಕಗಳನ್ನೊಳಗೊಂಡು ಬಲಿಷ್ಠವಾಗಿ ಬೆಳೆದು ನಿಂತಿದೆ. ಅಲ್ಲದೆ ದುಬೈ ಸಹಿತ ಹೊರರಾಷ್ಟ್ರಗಳಲ್ಲೂ ಸಕ್ರಿಯ ಕಾರ್ಯಕರ್ತರ ತಂಡವನ್ನು ಹೊಂದಿದೆ. ಜಾತಿ, ಮತ, ಧರ್ಮ ಭೇದವಿಲ್ಲದೆ ಸಾವಿರಾರು ಕಾರ್ಯಕರ್ತರು ಈ ಸಂಘಟನೆಯ ಮೂಲಕ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದು, ಓರ್ವ ವಾಗ್ಮಿ, ಸಂಸ್ಕೃತಿ, ಭಾಷೆ ಪ್ರೇಮಿಯಾಗಿರುವ ಫ್ರಾಂಕ್ ಫೆರ್ನಾಂಡಿಸ್ ಇವರು ತುಳು ಭಾಷೆ, ಸಂಸೃತಿಯನ್ನು ಅಂತರ್‍ರಾಷ್ಟ್ರೀಯ ಮಟ್ಟದಲ್ಲಿ ಬೆಳೆಸುವಲ್ಲಿ ಶ್ರಮಿಸುತ್ತಿದ್ದಾರೆ.

ಅಂತರ್ರಾಷ್ಟ್ರೀಯ ತುಳುನಾಡ ರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ಡಾ| ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ ಸಹಕಾರದೊಂದಿಗೆ ದಶಮಾನೋತ್ಸವ ಅಂಗವಾಗಿ ತೌಳವ ಉಚ್ಛಯ ಎಂಬ 3 ದಿನದ ತುಳು ಸಮ್ಮೇಳನವನ್ನು ಮಂಗಳೂರಿನ ಪುರಭವನದಲ್ಲಿ ಆಯೋಜಿಸಿದ್ದು, 3 ದಿನಗಳಲ್ಲಿ ದೇಶವಿದೇಶಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಕೊಡಗುನಲ್ಲಿ ಸಂಭವಿಸಿದ ಜಲಪ್ರವಾಹ ಮತ್ತು ಗುಡ್ಡಕುಸಿತ ಸಂದರ್ಭದಲ್ಲಿ ಸುಮಾರು ರೂಪಾಯಿ 3 ಲಕ್ಷಕ್ಕಿಂತ ಹೆಚ್ಚಿನ ಪಡಿತರ, ಔಷಧಿ, ದಿನನಿತ್ಯದ ಸಾಮಾಗ್ರಿಗಳನ್ನು ವಿತರಿಸಿದೆ. ದುಬಾಯಿಯಲ್ಲೂ ರಕ್ತದಾನ ಶಿಬಿರ: ತುಳುನಾಡ ರಕ್ಷಣಾ ವೇದಿಕೆ ಕಳೆದ 12 ವರ್ಷಗಳಲ್ಲಿ ದುಬಾಯಿ ಲತೀಫಾ ಹಾಸ್ಪಿಟಲ್ ಸೇರಿದಂತೆ ದೇಶ-ವಿದೇಶದ ಹಲವಾರು ಆಸ್ಪತ್ರೆಗಳ ಬ್ಲಡ್‍ಬ್ಯಾಂಕ್ ಸಹಕಾರದೊಂದಿಗೆ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ, ಕ್ಯಾನ್ಸರ್ ಸೇರಿದಂತೆ ಹಲವಾರು ರೀತಿಯ ಖಾಯಿಲೆಗಳಿಗೀಡಾದ ಜನರಿಗೆ ಲಕ್ಷಾಂತರ ರೂಪಾಯಿಗಳ ಸಹಾಯಧನ ಕೂಡಾ ತುಳುನಾಡ ರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿತರಿಸಲಾಗಿತ್ತು. ಕೊರೊನ ಲಾಕ್ಡೌನ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಉಚಿತ ಪಡಿತರ ಕಿಟ್ಟ್‍ಗಳನ್ನು ವಿತರಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆಯು ಅಂತರ್‍ರಾಷ್ಟ್ರೀಯ ಘಟಕದ ಗೌರವಾಧ್ಯಕ್ಷ ಡಾ| ಫ್ರಾಂಕ್ ಫೆರ್ನಾಂಡಿಸ್ ಅವರ ಮಾರ್ಗದರ್ಶನದಲ್ಲಿ, ಅಧ್ಯಕ್ಷ ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಪದಾಧಿಕಾರಿಗಳ ಸರ್ವತೋಮುಖ ಸಹಭಾಗಿತ್ವದಲ್ಲಿ ಇದೀಗ ಯಶಸ್ವಿಯಾಗಿ ಮುನ್ನಡೆಯುತ್ತಿದೆ.

ಡಾ| ಫ್ರಾಂಕ್ ಫೆರ್ನಾಂಡಿಸ್:
ಅವಿಭಜಿತ ದಕ್ಷಿಣ ಕನ್ನಡದ ಉಡುಪಿ ಮಲ್ಪೆ ತೊಟ್ಟಂ ಮೂಲತಃ ಫ್ರಾಂಕ್ ಇವರು ಸಂಸ್ಕೃತ ಶ್ಲೋಕಗಳು ಮತ್ತು ಶ್ಲೋಕಗಳೊಂದಿಗೆ ಸುಲಭವಾಗಿ ಅನುವಾದಿಸಲ್ಪಟ್ಟ ಕೊಂಕಣಿ, ತುಳು, ಕನ್ನಡ, ಇಂಗ್ಲಿಷ್‍ನಲ್ಲಿ ಅವರು ನಿರರ್ಗಳವಾಗಿ ಮಾತನಾಡುವುದನ್ನು ಕೇಳುವುದೇ ಒಂದು ವೈಶಿಷ್ಟ್ಯಮಯ. ಸದ್ಯ ದುಬಾಯಿಯಲ್ಲಿ ವಾಸವಾಗಿದ್ದರೂ ತನ್ನ ಮೂಲವಾದ ತೊಟ್ಟಂನಲ್ಲಿ ತನ್ನ ಬೇರುಗಳನ್ನು ಹೊಂದಿದ್ದಾರೆ. ಮುಂಬಯಿ, ದುಬಾಯಿಯಲ್ಲಿದ್ದರೂ ಅವಿಭಜಿತ ದಕ್ಷಿಣ ಕನ್ನಡದ ಯಾವುದೇ ಸ್ಥಳೀಯ ನಿವಾಸಿಗಳಂತೆ ಭಾವನಾತ್ಮಕ ಸಂಪರ್ಕವು ಬಲವಾದ ಮತ್ತು ಸ್ಥಿರವಾಗಿದೆ ಎಂಬುದನ್ನು ಅವರು ಸ್ಪಷ್ಟವಾಗಿ ತೋರಿಸಿಕೊಟ್ಟಿದ್ದಾರೆ.

ಅವರು ಗೃಹ ಸಹಾಯಕರಾಗಿ ಕೆಲಸ ಮಾಡುತ್ತಿದ್ದ ತನ್ನ ತಂದೆಯೊಂದಿಗೆ ಸೇರಲು ಮುಂಬೈಗೆ ತೆರಳಿದರು. ಆದ್ದರಿಂದ 1967ರಲ್ಲಿ ತನ್ನ 16ನೇ ವಯಸ್ಸಿನಲ್ಲಿ ಕನಸಿನ ನಗರವಾದ ಮುಂಬಯಿ ಸೇರಿದ್ದ ಫ್ರಾಂಕ್ ಫೆರ್ನಾಂಡಿಸ್ ಸಂಕ್ಷಿಪ್ತ-ಟೈಪಿಂಗ್ ಕಲಿಯಲು ಪ್ರಾರಂಭಿಸಿ ಲಾರ್ಸೆನ್ ಮತ್ತು ಟೌಬ್ರೊದಲ್ಲಿ ಮೆಷಿನ್ ಆಪರೇಟರ್ ಆಗಿ ಕೆಲಸ ಹುಡುಕಲು ಪದವಿ ಪಡೆಯುವ ಮೊದಲು ಸ್ವಲ್ಪ ಸಮಯದವರೆಗೆ ಚಾಲಕರಾಗಿ ಕೆಲಸ ಮಾಡಿದರು. 18ರ ವಯಸ್ಸಿಗೆ ಚಾಲನಾ ಪರವಾನಗಿ ಪಡೆದÀು ಮಹೀಂದ್ರಾ ಮತ್ತು ಮಹೀಂದ್ರಾ ಸೇರಿ ವಾಹನಗಳನ್ನು ಉತ್ತರ ರಾಜ್ಯಗಳಿಗೆ ತಲುಪಿಸಲು ಶ್ರಮಿಸಿದರು. ಎಲ್‍ಎಂಡ್‍ಟಿ ನಲ್ಲಿ ಕೆಲಸ ತೊರೆದಾಗ ಅವರ ಅಪಾಯ ತೆಗೆದುಕೊಳ್ಳುವ ಸಾಮರ್ಥ್ಯವು ಮುಂಚೂಣಿಗೆ ಬಂದಿದ್ದು ಅಲ್ಲಿ ಅವರು ಸುಮಾರು ರೂ.350/- ಮತ್ತು ಮುಂಬಯಿನ ಪ್ರಮುಖ ನಿರ್ಮಾಣ ಸಂಸ್ಥೆಯಾದ ಶಪೂರ್ಜಿ ಪಲ್ಲೂಂಜಿ ಅವರಲ್ಲಿ ರೂ.150/-. ಕೆಲಸ ಮಾಡಿ ಅಮೂಲ್ಯವಾದ ಅನುಭವ ಗಳಿಸಿದ್ದ ಫ್ರಾಂಕ್ ಇಂದು ಜಾಗತಿಕವಾಗಿ ಪ್ರಸಿದ್ಧರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here