Friday 19th, April 2024
canara news

ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ) ಸರಕಾರದ ಜನಸ್ಪಂದನೆ

Published On : 09 May 2021   |  Reported By : Rons Bantwal


ಮಹಾ ಸಿಎಂ ಉದ್ಧಾವ್ ಠಾಕ್ರೆ ಅವರ ಕೋವಿಡ್ ಕ್ರಮ ಶ್ಲಾಘಿಸಿದ ಪ್ರಧಾನಿ ಮೋದಿ

ಮುಂಬಯಿ (ಆರ್‍ಬಿಐ), ಮೇ.08: ಕೊರೋನಾ ವೈರಸ್ ವಿರುದ್ಧದ ಮಹಾರಾಷ್ಟ್ರದ ಯುದ್ಧದ ಅವಲೋಕನ ಪಡೆಯಲು ಇಂದಿಲ್ಲಿ ಶನಿವಾರ ವರ್ಚುವಲ್ ಮೀಟಿಂಗ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮಹಾರಾಷ್ಟ್ರ ರಾಜ್ಯದ (ಮಹಾ ವಿಕಾಸ್ ಅಘಾಡಿ ಸರಕಾರದ) ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಲ್ಲಿ ಸಂಭಾಷಣೆ ನಡೆಸಿದರು.

ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ಮೋದಿ ಅವರು ಉದ್ಧಾವ್ ಠಾಕ್ರೆ ಅವರ ಪ್ರಯತ್ನಗಳನ್ನು ಶ್ಲಾಘಿಸಿದರು ಮತ್ತು ಕೋವಿಡ್-19ರ ಎರಡನೇ ತರಂಗದಲ್ಲಿ ರಾಜ್ಯವು ಉತ್ತಮ ಹೋರಾಟವನ್ನು ಮಾಡಿದೆ ಎಂದು ಮನವರಿಸಿದರು. ಪ್ರಶಂಸೆಗಾಗಿ ಮೋದಿ ಅವರಿಗೆ ಉದ್ಧವ್ ಕೃತಜ್ಞತೆ ತಿಳಿಸಿ ಸಾಂಕ್ರಮಿಕದ ಆರಂಭದಿಂದಲೂ ರಾಜ್ಯದ ಕೋವಿಡ್ ಯುದ್ಧದಲ್ಲಿ ಕೇಂದ್ರದ ಮಾರ್ಗದರ್ಶನ ಮತ್ತು ಮಹಾರಾಷ್ಟ್ರ ನೀಡಿದ ಕೆಲವು ಸಲಹೆಗಳನ್ನು ಕೇಂದ್ರವು ಹೇಗೆ ಸ್ವೀಕರಿಸಿದೆ ಎಂದು ಶ್ಲಾಘಿಸಿದರು.

ಆಮ್ಲಜನಕದಂತಹ ನಿರ್ಣಾಯಕ ಅಗತ್ಯತೆಗಳ ವಿಷಯದಲ್ಲಿ ಹೆಚ್ಚಿನ ಕೇಂದ್ರ ಸಹಾಯ ಮತ್ತು ಬೆಂಬಲಕ್ಕಾಗಿ ಠಾಕ್ರೆ ಅವಕಾಶ ಪಡೆದÀು ಕೇಂದ್ರದ ಸಹಯೋಗ ಆಶಿಸಿದರು. ಮತ್ತೆ ಶೀಘ್ರದಲ್ಲೇ ಆರಂಭದ ನಿರೀಕ್ಷೆಯ ಕೋವಿಡ್ ಮೂರನೇ ಅಲೆಯನ್ನು ನಿಭಾಯಿಸುವ ರಾಜ್ಯದ ಯೋಜನೆಯ ಬಗ್ಗೆ ಪ್ರಧಾನಿಗೆ ಮಾಹಿತಿ ಒದಗಿಸಿದರು.

ಸಾಂಕ್ರಾಮಿಕ ರೋಗ ಹರಡಿದ ನಂತರ ಟರ್ಕಿ ರಾಷ್ಟ್ರದ ಸೋಂಕನ್ನು ಮೀರಿದ 49,96,758 ಕ್ಯಾಸೆಲೋಡ್ ನೊಂದಿಗೆ ಮಹಾರಾಷ್ಟ್ರವು ದೇಶದ ಅತಿ ಹೆಚ್ಚು ಹಾನಿಗೊಳಗಾದ ರಾಜ್ಯವಾಗಿ ಹೊರಹೊಮ್ಮಿತ್ತು. ಒಟ್ಟು 74,413 ಸಾವುಗಳು ಇಲ್ಲಿಯವರೆಗೆ ದಾಖಲಾಗಿದ್ದು, 6,54,788 ಸಕ್ರಿಯ ಪ್ರಕರಣಗಳು ಕಾಣಿಸಿ ಕೊಂಡಿದ್ದವು. ಅವುಗಳಲ್ಲಿ ಕೇವಲ 8,23,825 ಫ್ರಾನ್ಸ್‍ನ ಸಕ್ರಿಯ ಪ್ರಕರಣಗಳಾಗಿದ್ದವು.

2019 ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ನಂತರ ಶಿವಸೇನೆ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳ ಒಗ್ಗೂಡುವಿಕೆಯಲ್ಲಿ ರಚಿತ ಮಹಾ ವಿಕಾಸ್ ಅಘಾಡಿ (ಎಂವಿಎ ಮೈತ್ರಿ ಸರಕಾರ)ದ ಕಾರ್ಯಯೋಜನೆಗಳ ಬಗ್ಗೆ ಎಂದೂ ಧ್ವನಿಗೂಡಿಸದ ಪ್ರಧಾನಮಂತ್ರಿ ಈಗಲಾದರೂ ಸರಕಾರದ ಜನ ಸ್ಪಂದನೆಯನ್ನು ಪ್ರಶಂಸಿಸಿದ್ದು ಕೇವಲ ಮಹಾರಾಷ್ಟ್ರದ ಮಾತ್ರವಲ್ಲ ರಾಷ್ಟ್ರದ ಗಮನ ಸೆಳೆದಿದೆ ಎನ್ನಲಾಗಿದೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here