Sunday 13th, June 2021
canara news

ಜೈನ ತೀರ್ಥ-ಶ್ರದ್ದಾ ಕೇಂದ್ರಗಳ ರಕ್ಷಿಸಿದ ಮಹಾನಾಯಕ ನಿರ್ಮಲ ಕುಮಾರ್

Published On : 07 May 2021   |  Reported By : Rons Bantwal


ಅ.ಭಾ.ದಿ ಜೈನ್ ಮಹಾಸಭಾ ಅಧ್ಯಕ್ಷ ಸೇಠಿ ನಿಧನಕ್ಕೆ ಅಂತಾರಾಷ್ಟ್ರೀಯ ಶ್ರದ್ದಾಂಜಲಿ


ಮುಂಬಯಿ (ಆರ್‍ಬಿಐ), ಮೇ.06: ಅಖಿಲ ಭಾರತ ದಿಗಂಬರ ಜೈನ್ ಮಹಾಸಭಾ ಅಧ್ಯಕ್ಷ ನಿರ್ಮಲ ಕುಮಾರ್ ಸೇಠಿ ಇವರು ಇತ್ತೀಚಿಗೆ (ಎ.27) ಸ್ವರ್ಗಸ್ಥರಾಗಿದ್ದು ಅಗಲಿದ ದಿವ್ಯಾತ್ಮದ ಸದ್ಗತಿಗಾಗಿ ಕಳೆದ ಬುಧವಾರ ವರ್ಚುವಲ್ ಮೀಟಿಂಗ್ ಮೂಲಕ ಗೌರವಾನ್ವಿತ ಮುನಿಗಳ, ಭಟ್ಟಾರಕರ ಉಪಸ್ಥಿತಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಶ್ರದ್ದಾಂಜಲಿ ಸಭೆ ದೇಶದ ವಿವಿಧ ಸಂಘಟನೆಗಳ ಮೂಲಕ ಜರುಗಿತು. ಆಚಾರ್ಯ 108 ಪ್ರಗ್ಯಾ ಸಾಗರ್, ಆಚಾರ್ಯ ದೇವ ನಂದಿ, ಗುಣದರ ನಂದಿ,108 ಅಮಿತ್ ಸಾಗರ ಮುನಿ, ಡಾ| ಪ್ರಗ್ಯಾ ಸಾಗರ ನಿರಂಜನ್ ಸಾಗರ, ಅನುಮಾನ ಸಾಗರ, ಜಗದ್ಗುರು ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ, ಜೈನ ಕಾಶಿ ಮೂಡುಬಿದಿರೆ, ರವೀಂದ್ರ ಕೀರ್ತಿ ಹಸ್ತಿನಪುರ, ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಎಂ.ಕೆ ಜೈನ್ ಚೆನ್ನೈ, ಅಶೋಕ್ ಸೇಠಿ ಬೆಂಗಳೂರು, ಸೋಹನ್ ಲಾಲ್ ಪಾಂಡಿಚೇರಿ, ಮಹೇಂದ್ರ ಜೈನ್ ಕೊಚ್ಚಿನ್ ಕೇರಳ, ಸುಮೆರ್ ಪಾಂಡ್ಯ ಹೈದೆರಾಬಾದ್, ಮಹಾವೀರ ಸಿಲ್ಚಾರ್ ಅಸ್ಸಾಂ, ರಾಜ್ ಕುಮಾರ್ ಸೇಠಿ ಕಲ್ಕತ್ತಾ, ಉದಯ್ ಬಾನ್ ಜೈಪುರ್, ಜೆ.ಎನ್ ಹಪಾವತ್, ಮಣಿಂದ್ರ ಜೈನ್, ಸಾಹು ಅಖಿಲೇಶ್ ಜೈನ್, ಜ್ಞಾನ ಪೀಠ ಫೌಂಡೇಶನ್ ದೆಹಲಿ ಇದರ ನಿವೃತ್ತ ನ್ಯಾಯಾಧೀಶ ಪಾನಲಾಲ್, ಅನಿಲ್ ಜೈನ್, ಮತ್ತಿತರ ಸಾಧು ಸಂತರು ಗಣ್ಯ ಪ್ರಮುಖರು ಪಾಲ್ಗೊಂಡು ಶ್ರೀ ನಿರ್ಮಲ್ ಕುಮಾರ್ ಸೇಠಿ ಗುಣಗಾನ ಗೈದರು.

108 ಅಮಿತ್ ಸಾಗರ ಮಹಾರಾಜ್ ಆಶೀರ್ವಚನಗೈದು ಇಡೀ ರಾಷ್ಟ್ರದಲ್ಲಿ ಜೈನ್ ಪ್ರಮುಖ ತೀರ್ಥಗಳ ದರ್ಶನ ಮಾಡಿ ಶ್ರದ್ದಾ ಕೇಂದ್ರಗಳ ರಕ್ಷಣೆ ಮಾಡಿದ ಮಹಾನಾಯಕ ನಿರ್ಮಲ ಕುಮಾರ್ ಆಗಿದ್ದರು ಎಂದರು.

ದೇಶ ಹಾಗೂ ವಿದೇಶದ ಜೈನ ಪುರಾತತತ್ವ ಸಂಬಂಧ ಅನೇಕ ಅಂತರಾಷ್ಟ್ರೀಯ ಸೆಮಿನಾರ್‍ಗಳನ್ನು ಅನೇಕ ಸಂಶೋದ ನಾತ್ಮಕ ಪುಸ್ತಿಕೆಗಳನ್ನು ಪ್ರಕಾಶನ ಪಡಿಸಿದವರು. ಸದಾ ಸಾಧು ಸಂತರ ಸೇವೆ ಧಾರ್ಮಿಕ ಕ್ರಿಯಾ ಕಲಾಪಗಳಲ್ಲಿ ತಮ್ಮ ನ್ನು ತಾವು ಸಮರ್ಪಿಸಿ ಕೊಂಡವರು. ಅನೇಕ ಕ್ಷೇತ್ರಗಳ ಯಶಸ್ವೀ ಪಂಚಕಲ್ಯಾಣ ಪೂಜೆ ಪ್ರತಿಷ್ಠೆಗಳಿಗೆ ನೇತೃತ್ವ ವಹಿಸಿ ಯಶಸ್ವೀಯಾಗಲು ಸಹಕರಿಸಿದವರು ಎಂದು ಮೂಡುಬಿದಿರೆ ಸ್ವಾಮೀಜಿ ತಮ್ಮ ಪ್ರಾರ್ಥನೆಯಲ್ಲಿ ನುಡಿದರು.

ಕಳೆದ 40 ವರ್ಷಗಳಿಂದ ರಾಷ್ಟ್ರೀಯ ಅಧ್ಯಕ್ಷ ರಾಗಿ ದಾಖಲೆಯ ಸಮಯ ಮಹಾಸಭೆ ಯನ್ನು ಮುನ್ನಡೆಸಿದ ಕೀರ್ತಿ ನಿರ್ಮಲ ಕುಮಾರ್‍ರದ್ದು ಶತಮಾನದ ಇತಿಹಾಸ ಇರುವ ಉತ್ತರ ಪ್ರದೇಶ ಕೇಂದ್ರ ಕಛೇರಿವುಳ್ಳ ಈ ಸಂಸ್ಥೆಯ ಅಧ್ಯಕ್ಷರಾಗಿ 1940ರ ಕಾಲದಲ್ಲಿ ಮೂಡುಬಿದಿರೆಯ ಜಗದ್ಗುರು ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಅವರು ಕೆಲಕಾಲ ಕಾರ್ಯನಿರ್ವಹಿಸಿದ್ದರು ಎಂಬುದನ್ನು ನೆನಪಿಸ ಬಹುದು ಎಂದೂ ಸ್ವಸ್ತಿಶ್ರೀ ಡಾ| ಚಾರುಕೀರ್ತಿ ಭಟ್ಟಾರಕರು ತಿಳಿಸಿದರು.

ಶ್ರದ್ದಾಂಜಲಿ ಸಭೆಯ ಅಧ್ಯಕ್ಷತೆ ರಾಷ್ಟ್ರೀಯ ಪತ್ರಕಾರ ಸಂಘದ ಅಧ್ಯಕ್ಷ ರಮೇಶ್ ಜೈನ್ ತಿಜಾರ ವಹಿಸಿದ್ದರು. ಇದೆ ಸಂದರ್ಭದಲ್ಲಿ ಆಕಸ್ಮಿಕ ನಿಧನರಾದ ಮಧ್ಯ ಪ್ರದೇಶ ಮಾಜಿ ಸಚಿವ ಕಪೂರ್‍ಚಂದ್ ಗೋವಾರ ಹಾಗೂ ಪತ್ರಕರ್ತ ಕೈಲಾಶ್ ಚಂದ್ ಝಾನ್ಸಿ, ಬ್ರ. ವೃಷಭ್, ಬ್ರ.ರಾಜೇಶ್ ಇವರ ಆತ್ಮಗಳಿಗೂ ಸದ್ಗತಿ ಕೋರಲಾಯಿತು. ಕೇಂದ್ರ ಮಾಜಿ ಸಚಿವ ಪ್ರದೀಪ್ ಜೈನ್ ಉಪಸ್ಥಿತರಿದ್ದರು ವಿವಿಧ ರಾಷ್ಟ್ರೀಯ ಅಂತಾರಾಷ್ಟ್ರೀಯ ಶ್ರದ್ದಾಂಜಲಿ ಸಭೆಯಲ್ಲಿ ಮೂಡುಬಿದಿರೆ ಶ್ರೀಗಳವರು ಭಾಗವಹಿಸಿ ಣಮೋಕಾರ ಮಂತ್ರ, ಸಿದ್ಧಭಕ್ತಿ ಪಠಿಸಿ ಆತ್ಮಕ್ಕೆ ಸದ್ಗತಿ ಕೋರಿದರು.

 
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here