Sunday 13th, June 2021
canara news

ಎನ್‌ಕೌಂಟರ್ ಸ್ಪೆಶಿಯಲಿಸ್ಟ್ ಪೋಲಿಸ್ ದಯಾ ನಾಯಕ್ ವರ್ಗಾವಣೆಗೆ ತಡೆ

Published On : 14 May 2021   |  Reported By : Rons Bantwal


ಮುಂಬಯಿ (ಆರ್‌ಬಿಐ), ಮೇ.12: ಬೃಹನ್ಮುಬಯಿ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಇಲಾಖೆಯಲ್ಲಿ ಸೇವಾ ನಿರತ ಎನ್‌ಕೌಂಟರ್ ಫೇಮ್ ಪೋಲಿಸ್ ಅಧಿಕಾರಿ ದಯಾ ನಾಯಕ್ ಇವರನ್ನು ಗೃಹ ಇಲಾಖೆಯು ನಾಗ್ಪುರಾ ವಿಭಾಗೀಯ ಗೊಂಡಿಯಾ ಪೋಲಿಸ್ ಠಾಣೆಗೆ ವರ್ಗಾವಣೆ ಮಾಡಲಾಗಿದ್ದು ಸದ್ಯ ವರ್ಗಾವಣಾ ಆದೇಶ ತಡೆಹಿಡಿಯಲಾಗಿದ್ದು, ನಾಯಕ್ ಅವರು ನಿರಾಳರಾಗಿದ್ದಾರೆ.

ವಾರದ ಹಿಂದೆಯಷ್ಟೇ ದಯಾ ನಾಯಕ್ ಸೇರಿದಂತೆ ನಾಲ್ವರು ಇನ್ಸ್‌ಪೆಕ್ಟರ್‌ಗಳನ್ನು ಮುಂಯಿನಿಂದ ಹೊರ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿ ರಾಜ್ಯದ ಹೆಚ್ಚುವರಿ ಮಹಾನಿರ್ದೇಶಕರ (ಅಧಿಷ್ಠಾನ) ಕಚೇರಿ ಅಧಿಕೃತ ಆದೇಶ ಹೊರಡಿಸಿತ್ತು. ನಾಯಕ್ ಗೊಂಡಿಯಾ ಪೋಲಿಸ್ ಇಲಾಖಾ ಜಾತಿ ಪ್ರಮಾಣ ಪತ್ರದ ಉಪ ವಿಭಾಗೀಯ ಕಾರ್ಯಾಲಯಕ್ಕೆ ವರ್ಗಾಹಿಸಲಾಗಿತ್ತು.

ಕ್ರೈಮ್ ಬ್ರಾಂಚ್ ಅವಧಿಯಲ್ಲಿ ಎನ್‌ಕೌಂಟರ್‌ಗಳಲ್ಲಿ ೮೦ಕ್ಕೂ ಹೆಚ್ಚು ಅಪರಾಧಿಗಳನ್ನು ನಿರ್ಮೂಲನೆ ಮಾಡಿ ನಾಯಕ್ ಪ್ರಸಿದ್ಧರಾಗಿದ್ದರು. ಮ್ಯಾಟ್‌ನಿಂದ ಸ್ಥಗಿತಗೊಳಿಸಿದೆ. ಆದ್ದರಿಂದ ನಾಯಕ್ ಎಟಿಎಸ್ ಇಲಾಖೆಯ ಲ್ಲೇ ಮುಂದುವರಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here