Sunday 13th, June 2021
canara news

ಕರ್ನಾಟಕ ಸಂಘ ವಿರಾರ್-ನಲಾಸೋಪರಾ ಇದರ ಅಧ್ಯಕ್ಷ

Published On : 29 May 2021   |  Reported By : Rons Bantwal


ತೆರೆಮರೆಯ ಸಮಾಜ ಸೇವಕ-ಅಪದ್ಭಾಂದವ ಸದಾಶಿವ ಎ.ಕರ್ಕೇರ

ಶಿವನೇ ಪರಬ್ರಹ್ಮ ಅಂತಾರೆ. ಸೃಷ್ಟಿ ಮಾಡುವುದು ಬ್ರಹ್ಮನ ಕೆಲಸವಾದರೆ, ಆ ಸೃಷ್ಟಿಯಾದ ಆಕರಗಳಿಗೆ (ಜೀವಿಗಳಿಗೆ) ಸ್ಥಿತಿ ಕೊಡುವುದು ವಿಷ್ಣುವಿನ ಕೆಲಸ. ಈ ರೀತಿ ಸೃಷ್ಟಿ, ಸ್ಥಿತಿ ಪಡೆದ ಆಕರಗಳಿಗೆ ಲಯ (ಕೊನೆ) ಕಾಣಿಸುವವನು ಶಿವ ಅಂತಾರೆ. ಇಂತಹ ಶಿವ ಶಬ್ದಕ್ಕೆ ಅನ್ವರ್ಥ ಎಂಬಂತೆ ಇಲ್ಲೊರ್ವ ಸದಾ ಸೇವಾ ನಿರತ ಶಿವ ಅಪದ್ಭಂದವರಾಗಿ ಸೇವಾನಿರತರಾಗಿದ್ದು, ಇವರೇ ಸದಾಶಿವ ಎ.ಕರ್ಕೇರ. ಮಾದರಿಯಾಗುವ ಸಮಾಜ ಸೇವಾಕಾರ್ಯ ಮಾಡುತ್ತಿರುವ ಸದಾಶಿವ ಅವರ ಕಾರ್ಯವೈಖರಿ ಆಶ್ಚರ್ಯ ತರುತ್ತಿದೆ. ಅರ್ಹ ಜನರಿಗೆ ಈ ರೀತಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ನಿಮಗೆ ನಾನಿದ್ದೇವೆ ಎಂಬ ಅಭಯವನ್ನು ನೀಡುವ ಮುಖಾಂತರ ಇವರು ಆಥಿರ್üಕ ನೆರವು (ದಾನಿಗಳಿಂದ ಸಂಗ್ರಹಿಸಿ) ನೀಡುತ್ತಿರುವುದು ಮಾನವೀಯ ಕ್ರಮವಾಗಿದೆ. ಇದು ಯುವಜನಾಂಗಕ್ಕೆ ಮಾದರಿ ಅನ್ನುವುದರಲ್ಲಿ ಸಂಶಯವಿಲ್ಲ.

ಉಡುಪಿ ಜಿಲ್ಲೆಯ ಪಡುಬಿದ್ರೆ ಉಚ್ಚಿಲ ಇಲ್ಲಿನ ಓಂಕಾರ್ ಹೌಸ್ ನಿವಾಸಿಗಳಾ ಅಂಗಾರ ಚಂದು ಪೂಜಾರಿ ಮತ್ತು ರಮಣಿ ಪೂಜಾರ್ತಿ ದಂಪತಿ ಸುಪುತ್ರ ಆಗಿರುವ ಉಚ್ಚಿಲ ಸದಾಶಿವ ಎ ಕರ್ಕೇರ (ನಲಸೊಪರ) ಇವರು ಮೂಳೂರು ಇಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ, ಅದಮಾರು ಜೂನಿಯರ್ ಕಾಲೇಜ್‍ನಲ್ಲಿ ಪದವಿಪೂರ್ವ ಶಿಕ್ಷಣ, ಸಿದ್ಧಾರ್ಥ್ ಕಾಲೇಜ್ ವಿಟಿ-ಮುಂ¨ಯಿ ಇಲ್ಲಿ ಪದವಿ ಶಿಕ್ಷಣ ಪೂರೈಸಿದ ಇವರು ಕ್ರಿಕೆಟ್, ವಾಲಿಬಾಲ್‍ಗಳಲ್ಲಿ ಅಗ್ರಗಣ್ಯರಾಗಿದ್ದು ಶೈಕ್ಷಣಿಕ ದಿನಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸಿದ ಅಪ್ರತಿಮ ಕ್ರೀಡಾಪಟು. 1983ರಲ್ಲಿ ಉದರ ಪೆÇೀಷಣೆ ಅರಸಿ ದೆಹಲಿಗೆ ತೆರಳಿ 3 ವರ್ಷಗಳ ಕಾಲ ಸಣ್ಣಪುಟ್ಟ ಕೆಲಸಗಳನ್ನು ಮಾಡುತ್ತಾ 1986ರಲ್ಲಿ ಮುಂ¨ಯಿಗೆ ಆಗಮಿಸಿ ತನ್ನ ಅಜ್ಜನಾದ ಸೂರು ಕರ್ಕೇರ (ಸ್ವರ್ಗೀಯರು) ಅವರ ನೆರಳಲ್ಲಿ ಬಾಳಿದÀರು. ಇಲ್ಲೂ ವಿವಿಧ ಕಡೆ ಹೊಟೇಲು, ಸಣ್ಣಪುಟ್ಟ ಕಛೇರಿಗಳಲ್ಲಿ ದುಡಿದುಕೊಂಡು, 1993ರಲ್ಲಿ ಭಾರತ್ ಬ್ಯಾಂಕ್‍ನ ಉದ್ಯೋಗಿಯಾಗಿ ಫೆÇೀರ್ಟ್ ಶಾಖೆಯಲ್ಲಿ ಸೇರಿದರು. ಸುಮಾರು 28 ವರ್ಷಗಳಿಂದ ಭಾರತ್ ಬ್ಯಾಂಕ್‍ನ ವಿವಿಧ ಶಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದು ಸದ್ಯ ವಸಾಯಿ ಶಾಖೆಯಲ್ಲಿ ಸಹಾಯಕ ಪ್ರಬಂಧಕÀ ಆಗಿರುತ್ತಾರೆ.

ಬಾಲ್ಯದಿಂದಲೇ ನಾಯಕತ್ವದ ಗುಣ ಹೊಂದಿದ್ದು, ಸಂಘಟನಾಶೀಲ ತತ್ವಗಳನ್ನು ಅನುಸರಿಸಿಕೊಂಡು ಬಾಳುತ್ತಾ, ತನ್ನ ವೃತ್ತಿಜೀವನದ ಜೊತೆಗೆ ನಿತ್ಯಾನಂದ ಡಿ.ಕೋಟ್ಯಾನ್ ಪರಿಚಯದಿಂದ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಮುಖೇನ ಸ್ವಸಮಾಜಪರ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿರುವರು. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಆದರ್ಶವಾಗಿರಿಸಿ ಅಸೋಸಿಯೇಶÀನ್‍ನ ಯುವ ವಿಭಾಗದ ಸಂಯೋಜಕನಾಗಿ ಸಕ್ರೀಯರು. ಅಸೋಸಿಯೇಶÀನ್‍ನ ವಸಾಯಿ ಸಮಿತಿಗೆ ಅತ್ಯಾಧಿಕ ನಿಧಿ ಸಂಗ್ರಹಕ್ಕಾಗಿನ, ಅನುಪಮ ಸೇವೆಗಾಗಿ ಬಿಲ್ಲವಕುಲ ಶಿರೋಮಣಿ ಜಯ ಸಿ.ಸುವರ್ಣ ಅವರ ದಿವ್ಯಹಸ್ತದಿಂದ ಸನ್ಮಾನಿಸಲ್ಪಟ್ಟ ಹಿರಿಮೆ ಇವರದ್ದು.

ಬೃಹನ್ಮುಂಬಯಿಯ ಉಪನಗರ ವಸಾಯಿ ತಾಲೂಕಿನಾದ್ಯಂತ ಕರ್ಕೇರ ಎಂದೇ ಪ್ರಸಿದ್ಧ ಆಗಿರುವ ಇವರಲ್ಲಿ ಯಾರೇ ಸಹಾಯ ಕೋರಿ ಬಂದಾಗ ಬರೀ ಕೈಯಲ್ಲಿ ಹಿಂತಿರುಗಿಸದ ಹೃದಯಶೀಲತಾಮಯಿ. ವೈದ್ಯಕೀಯ ಮತ್ತು ಶೈಕ್ಷಣಿಕ ನೆರವಿಗೆ ಇವರದ್ದು ಅಭಯಸ್ತ. ಆಥಿರ್üಕ ಅಸಹಾಯಕರಿಗೆ ಒಪೆÇ್ಪತ್ತಿನ ಮಾತ್ರವಲ್ಲ ಎರಡೊತ್ತಿನ ಊಟಕ್ಕೂ ಇವರ ತೆರೆಮರೆಯ ನೆರವಿನ ಹಸ್ತ ಅನುಪಮವಾದದ್ದು. ಇನ್ನೂ ಅದೆಷ್ಟೋ ಸೇವಾ ಉದಾಹರಣೆಗಳು ಬೆಳಕಿಗೆ ಬಾರದಂತಿವೆ. ನಲಾಸೋಪರಾ ಇಲ್ಲಿನÀ ಓರ್ವ ವಿಧವೆಗೆÉ ಪುನಃರ್ ಕಂಕಭಾಗ್ಯ ಕಲ್ಪಿಸಿ ಕೊಟ್ಟಿರುವರು. ಅನಾಥೆಯಾಗಿದ್ದ ಆ ಮಹಿಳೆಗೆ ಹರೀಶ್ ಶೆಟ್ಟಿ ಗುರ್ಮೆ ಇವರ ಸಂಪೂರ್ಣ ಸಹಕಾರದಿಂದ ಸ್ವತಃ ತನ್ನ ಮನೆಯಿಂದ ಮೆಹಂದಿ ಕಾರ್ಯಕ್ರಮ ನೆರವೇರಿಸಿ, ದಿಬ್ಬಣ ಹಮ್ಮಿಕೊಂಡುಸಿ ಮದುವೆ ಮಾಡಿಸಿ ಸುಖಮಯ ಜೀವನ ನಡೆಸುವಲ್ಲಿ ಕಾರಣಿಭೂತರಾಗಿರುವರು. ಅಯ್ಯಪ್ಪ ಸ್ವಾಮಿ ಪರಮ ಭಕ್ತರಾದ ಇವರು ಸತತ 27 ವರ್ಷದಿಂದ ಶಬರಿಮಲೆ ಯಾತ್ರೆಕೈಗೊಂಡು ಧಾರ್ಮಿಕ ಶ್ರದ್ಧಾಳು ಆಗಿದ್ದಾರೆ.


ಮುಂಬಯಿಯಲ್ಲಿನ ಹೆಸರಾಂತ ಉದ್ಯಮಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಶಂಕರ್ ಶೆಟ್ಟಿ ವಿರಾರ್ ಇವರೊಂದಿಗೆ (2005) ಕರ್ನಾಟಕ ಸಂಘ ವಿರಾರ್-ನಲಾಸೋಪರಾ ಸ್ಥಾಪಿಸಲು ಕಾರಣಿಭೂತರಾಗಿ ಸ್ಥಾಪಕ ಗೌರವ ಕಾರ್ಯದರ್ಶಿ, ಶಿಕ್ಷಣ ಸಮಿತಿ ಕಾರ್ಯಧ್ಯಕ್ಷ, ಉಪಾಧ್ಯಕ್ಷ ಆಗಿ ಹೆಜ್ಜೆಯ ಮೇಲೆ ಹೆಜ್ಜೆಗಳನ್ನಿರಿಸಿ ಸಂಘದಲ್ಲಿ ಸಕ್ರೀಯರಾಗಿ ಪ್ರಸ್ತುತ ಅಧ್ಯಕ್ಷ ಪದೋನ್ನತ ಸದಾಶಿವ ಕರ್ಕೇರ ಸೇವೆ ಅನನ್ಯವಾದುದು. ತನ್ನ ಸಾರಥ್ಯದ ಕಾಲಾವಧಿಯಲ್ಲಿ ಅನೇಕ ಜನಪರ ಕೆಲಸಗಳನ್ನು ಮಾಡಿ ಅಪ್ಪಟ ಸಮಾಜ ಸೇವಕನಾಗಿ ಮೂಡಿದÀ ಯುವಕ. ಕೊರೋನ ಎಂಬ ಮಹಾಮಾರಿಯು ಇಡೀ ಭೂಲೋಕವನ್ನೇ ತಲ್ಲಣ ಗೊಳಿಸಿರುವ ಸಂಧಿಗ್ದ ಕಾಲದಲ್ಲಿ ಉಪನಗರ ಥಾಣೆ ಜಿಲ್ಲೆ, ವಿರಾರ್, ವಸಾಯಿ, ನಲಾಸೋಪರಾ ಮತ್ತು ಅಸುಪಾಸಿನಾದ್ಯಂತ ಒಪೆÇ್ಪತ್ತಿನ ಹಸಿವು ನೀಗಿಸಲು ಮತ್ತು ವೈದ್ಯಕೀಯ ನೆರವಿಗೆ ಕೂಗಾಟ ಆರಂಭವಾದಾಗ ಸದಾಶಿವ ಸ್ವತಃ ಅಖಾಡಾಕ್ಕಿಳಿದು ಸಾವಿರಾರು ಜನರಿಗೆ ಅನ್ನದಾತರಾಗಿ ಮೂಡಿಬಂದರು. ಶಂಕರ್ ಬಿ.ಶೆಟ್ಟಿ ವಿರಾರ್, ಜಗನ್ನಾಥ್ ಎನ್.ರೈ, ಮೋಹನ್ ವಿ.ಶೆಟ್ಟಿ, ರವಿ ಶೆಟ್ಟಿ ಕಿಲ್ಪಾಡಿ, ಜಗನ್ನಾಥ್ ಡಿ.ಶೆಟ್ಟಿ, ವಿಜಯ ಚೌವ್ಹಾಣ್, ಹರೀಶ್ ಶೆಟ್ಟಿ ಗುರ್ಮೆ, ಶ್ರೀನಿವಾಸ್ ನಾಯ್ಡು, ಮೋಹನ್ ಬಿ.ಶೆಟ್ಟಿ, ದಯಾನಂದ ಜಿ.ಬೊಂಟ್ರ ಮುಂತಾದ ಗಣ್ಯರÀ ಅಭಯಾಸ್ತ, ಸಹಯೋಗದೊಂದಿಗೆ ಅದೇಷ್ಟೋ ಜನತೆಯ ಸೇವೆಯಲ್ಲಿ ತೊಡಗಿಸಿ ಕೊಂಡರು. ಜೊತೆಗೆ ಆಥಿರ್üಕವಾಗಿ ಹಿಂದುಳಿದ ಮಕ್ಕಳ ಶಾಲಾ ಶುಲ್ಕವನ್ನೂ ಭರಿಸಿರುವರು. ಸ್ವತಃ ತಾನೇ ಕೋವಿಡ್ ಕಾಯಿಲೆಗೆ ಒಳಗಾದರೂ ಜೀವದ ಹಂಗನ್ನು ತೊರೆದು ಜನತಾಸೇವೆಯಲ್ಲಿ ತೊಡಗಿಸಿಕೊಂಡÀರು. ತುಳು ಕನ್ನಡಿಗರ ಅಚ್ಚುಮೆಚ್ಚಿನ ಉತ್ತರ ಮುಂಬಯಿ ಲೋಕಸಭಾ ಸದಸ್ಯ ಗೋಪಾಲ್ ಸಿ.ಶೆಟ್ಟಿ ಅವರ ಇತ್ತೀಚಿನ ಕನಸಿನ 5000 ಬಾಟಲಿ ರಕ್ತ ಸಂಗ್ರಹಣಾ ಸೇವೆಯಲ್ಲೂ ಅಲ್ಲದೆ ನಲಾಸೋಪರಾ ಶಾಸಕ ಕ್ಷಿತಿಜ್ ಹಿತೇಂದ್ರ ಠಾಕೂರ್ ಇವರ ಸಹಕಾರ ಮತ್ತು ಸಮಾಜ ಸೇವಕ ಶ್ರೀನಿವಾಸ್ ನಾಯ್ಡು ಇವರೊಂದಿಗೆ ಸೇರಿ ಸುಮಾರು 100 ಬಾಟಲು ರಕ್ತ ಸಂಗ್ರಹಿಸುವಲ್ಲಿ ತುಂಬಾ ಸಹಕರಿಸಿರಿವರು. ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಸುಮಾರು 150 ಜನಕ್ಕಿಂತ ಹೆಚ್ಚಿನ ತುಳು ಕನ್ನಡಿಗರಿಗೆ ವಾಕ್ಸಿನೇಷನ್ ನೀಡುವಲ್ಲಿ ಯಶಸ್ವಿ ಗಳಿಸಿರುವರು.

ಸದಾಶಿವ ಅನೇಕ ಸಂಸ್ಥೆಗಳಿಂದ ಗುರುತಿಸಿದ್ದು ಇವರ ಸಮಾಜಪರ ಕಾಳಜಿ ಗಮನಿಸಿ ಕೆಲವು ಸಂಸ್ಥೆಗಳು ಸಮಾಜ ಚಿಂತಕ, ತುಳುವ ಸಿರಿ ಬಿರುದುಗಳನ್ನಿತ್ತು ಗೌರವಿಸಿದೆ. ಮಹಾರಾಷ್ಟ್ರದಲ್ಲಿನ ಪ್ರತಿಷ್ಠಿತ ಸಂಸ್ಥೆ ಪೀಪಲ್'ಸ್ ಆರ್ಟ್ ಸೆಂಟರ್ ಕೋವಿಡ್-19 ವಾರಿಯರ್ ಪ್ರಶಸ್ತಿ ಪ್ರದಾನಿಸಿದ್ದು, ಮಹಾರಾಷ್ಟ್ರದ ವಿಧಾನ ಪರಿಷತ್‍ನ ವಿರೋಧ ಪಕ್ಷದ ನಾಯಕ ಪ್ರವೀಣ್ ಧರೆಕರ್, ಬೃಹನ್ಮುಂಬಯಿ ಮೇಯರ್ ಕಿಶೋರಿ ಪೆಡ್ನೇಕರ್ ಮತ್ತು ಡೊಂಬಿವಲಿ ಕಲ್ಯಾಣ್ ಮೇಯರ್ ವಿನೀತಾ ರಾಣೆ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಬಿಲ್ಲವರ ಅಸೋಸಿಯೇಶÀನ್ ಮುಂಬಯಿ ಇದರ ಗೌರವ ಜತೆ ಕೋಶಾಧಿಕಾರಿ, ಯುವಾಭ್ಯುದಯ ಉಪ ಸಮಿತಿಯ ಸದಸ್ಯ, ಅಸೋಸಿಯೇಶನ್‍ನ ವಸಾಯಿ ಸ್ಥಳೀಯ ಸಮಿತಿಗೆ ಕೇಂದ್ರ ಸಮಿತಿ ಪ್ರತಿನಿಧಿ ಆಗಿ, ಕರ್ನಾಟಕ ಸಂಘ ವಿರಾರ್-ನಲಾಸೋಪರಾ ಇದರ ಅಧ್ಯಕ್ಷ, ಕನ್ನಡ ಸೇವಾ ಸಂಘ ಭಯಂದರ್ ಇದರ ಕಾರ್ಯಕಾರಿ ಸಮಿತಿ ಸದಸ್ಯ, ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಸದಸ್ಯ ಆಗಿರುವ 56ರ ಸದಾಶಿವ ಇವರು ಪತ್ನಿ ದೇವಕಿ ಸದಾಶಿವ್, ಸುಪುತ್ರ ಪ್ರತೀಕ್, ಅವಳಿ ಹೆಣ್ಣುಮಕ್ಕಳಾದ ಪ್ರೀಯ ಮತ್ತು ಪ್ರಾಚೀ ಇವರೊಂದಿಗಿನ ಸಂತುಷ್ಟ ಸಂಸಾರಿಕ ಬಾಳಿನೊಂದಿಗೆ ನಲಾಸೋಪರಾ ನೆಲೆಯಾಗಿರುವರು.

 
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here