Sunday 13th, June 2021
canara news

ಪತ್ರಕರ್ತನಿಗೆ ಕಲ್ಲಂಗಡಿ ಬೆಲ್ಲ ಉತ್ಪನ್ನ ಪಾಠ ಕಲಿಸಿದ ಕೊರೋನಾ

Published On : 29 May 2021   |  Reported By : Rons Bantwal


ಮುಂಬಯಿಯಲ್ಲಿನ ಪತ್ರಿಕೆ-ಹೊಟೇಲು ಉದ್ಯಮಕ್ಕೆ ವಿರಾಮವಿತ್ತ ಜಯರಾಮ
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮೇ.27: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಇಲ್ಲಿನ ಸಂಪದಮನೆ ನಾಗಯ್ಯ ಕೆ.ಶೆಟ್ಟಿ (ಸ್ವರ್ಗೀಯರು) ಇವರ ಸುಪುತ್ರ, ಕÀನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಇದರ ಜೊತೆ ಕಾರ್ಯದರ್ಶಿ ಜಯರಾಮ ಎನ್.ಶೆಟ್ಟಿ, ಮುಂಬಯಿನಲ್ಲಿ ಯಶಸ್ವಿ ವ್ಯಕ್ತಿ ಮಾಸಿಕ ನಡೆಸುತಿದ್ದ ಉದಯೋನ್ಮುಖ ಪತ್ರಕರ್ತ. ಜೊತೆಗೆ ಮಹಾನಗರದಲ್ಲಿ ತನ್ನ ಸಹೋದರ ಸದರಾಮ ಎನ್.ಶೆಟ್ಟಿ ಅವರ ಶ್ರೀ ಚಿತ್ತಾರಿ ಹಾಸ್ಪಿಟಾಲಿಟಿ ಸರ್ವಿಸಸ್ ಎಲ್‍ಎಲ್‍ಪಿ ಸಂಸ್ಥೆಯ ಉಸ್ತುವಾರಿ ನೋಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕೊರೋನಾ ಲಾಕ್‍ಡೌನ್ ಕಾಲಾವಧಿ ಈ ಯುವ ಪ್ರತಿಭೆಯ ಪತ್ರಿಕೆ, ಹೊಟೇಲು ಉದ್ಯಮಕ್ಕೆ ವಿರಾಮಿಸುವಂತೆ ಮಾಡಿದ್ದು ಸದ್ಯ ಮುಂಬಯಿಗೆ ವಿದಾಯವನ್ನೇಳಿದ ಜಯರಾಮ ಶೆಟ್ಟಿ ತವರೂರಲ್ಲಿ ಕಲ್ಲಂಗಡಿ ಬೆಲ್ಲ ಉತ್ಪನ್ನ ಮಾಡಿ ಸ್ವಉದ್ಯಮಿ ಆಗುವ ಕನಸು ಕಂಡಿದ್ದಾರೆ.

ಶಿವಮೊಗ್ಗ ಮಲೆನಾಡು ಪ್ರದೇಶದಲ್ಲಿನ ಕೃಷಿಕರು ತಮ್ಮ ಜಮೀನನ್ನು ಹಡಿಲುಭೂಮಿಯನ್ನಾಗಿಸುವ ಬದಲು ಸುಮಾರು ಒಂದು ಸಾವಿರ ಎಕರೆ ಜಮೀನಿನಲ್ಲಿ ಸಾವಿರಾರು ಟನ್ ಕರಗುಂಜೆ (ಕಲ್ಲಂಗಡಿ) ಬೆಳೆಸಿರುವರು. ಹಗಲಿರುಳು ಬೆವರಿಳಿಸಿ ಬೆಳೆಸಿದ ಕರಗುಂಜೆಗೆ ಮಾರುಕಟ್ಟೆಯಲ್ಲಿ ಬೇದಿಕೆ ಇಲ್ಲದೆ ಸೂಕ್ತ ಬೆಲೆಯೂ ಇಲ್ಲದೆ ಗದ್ದೆಯಲ್ಲೇ ಕೊಳೆತು ಹೋಗುತ್ತಿದ್ದು ಇದರಿಂದ ಬೆಳೆ ಬೆಳೆದೂ ಪ್ರಯೋಜನ ಇಲ್ಲದಂತಾಗಿದೆ. ನೀರಿದ್ದವರು ಬೆಳೆಸುವ ತಮ್ಮ ಬೆಳೆಯನ್ನು ಗದ್ದೆಯಲ್ಲೇ ಬಿಟ್ಟು ಕೊಳೆಯುವುದನ್ನು ಕಂಡು ಕಣ್ಣೀರು ಹಾಕುವಂತಾಗಿದೆ. ಆ ಪೈಕಿ ನಾನೂ ಒಬ್ಬನಾಗಿರುವೆ ಎಂದು ಜಯರಾಮ ಶೆಟ್ಟಿ ಹೇಳುತ್ತಿದ್ದಾರೆ.

ಪ್ರಾಚೀನ ಕಾಲದಿಂದಲೂ ಬೆಲ್ಲದ ಉಪಯೋಗ ಚಾಲ್ತಿಯಲ್ಲಿದ್ದು ಭಾರತೀಯರ ಆಹಾರ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಬೆಲ್ಲವು ಅಪಾರ ಆರೋಗ್ಯ ಪ್ರಯೋಜನಗಳ ತಿನಿಸುವಾಗಿದೆ. ಕಬ್ಬು, ತೆಂಗಿನಕಾಯಿ, ತಾಳೆಹಣ್ಣು ಇತ್ಯಾದಿಗಳಿಂದ ಮಾತ್ರ ಸಿದ್ಧಪಡಿಸಲಾಗುತ್ತಿದೆÀ. ಆ ಪೈಕಿ ಕಬ್ಬುನಿಂದ ತಯಾರಿಸಿದ ಬೆಲ್ಲವು ಹೆಚ್ಚು ಜನಪ್ರಿಯವೇ ಸರಿ. ವಾಸ್ತವವಾಗಿ, ಆಯುರ್ಫಾರ್ಮ್ ಅಧ್ಯಯನದಂತೆ, ಬೆಲ್ಲವನ್ನು ಚಿಕಿತ್ಸಕ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತಿದೆ. ಸಕ್ಕರೆಗೆ ಹೋಲಿಸಿದರೆ ಬೆಲ್ಲವು ನೈಸರ್ಗಿಕ ಮತ್ತು ಆರೋಗ್ಯಕರ ಸಿಹಿಕಾರಕ ಮಾತ್ರವಲ್ಲ, ಅದರ ಖನಿಜಾಂಶಗಳ ಉಪಯುಕ್ತತೆ ದೇಹಕ್ಕೆ ಅನುಕೂಲಕರ. ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಪೆÇಟ್ಯಾಸಿಯಂ ಮತ್ತು ರಂಜಕಗಳಿಂದ ತುಂಬಿರುವ ಬೆಲ್ಲವು ಸತು, ತಾಮ್ರ, ಥಯಾಮಿನ್, ರಿಬೋಫ್ಲಾವಿನ್ ಮತ್ತು ನಿಯಾಸಿನ್‍ಗಳ ಪ್ರಮಾಣವನ್ನೂ ಹೊಂದಿರುತ್ತದೆ. ಬೆಲ್ಲದಲ್ಲಿ ಬಿ ಜೀವಸತ್ವಗಳು, ಕೆಲವು ಪ್ರಮಾಣದ ಸಸ್ಯ ಪೆÇ್ರೀಟೀನ್‍ಗಳು ಮತ್ತು ಫೈಟೊಕೆಮಿಕಲ್ಸ್ ಮತ್ತು ಉತ್ಕರ್ಷಣ ನಿರೋಧಕಗಳು ಇವೆ ಎಂದು ಅಧ್ಯಯನಗಳ ಅನುಭವ. ಚಳಿಗಾಲದಲ್ಲಿ ವಿಶೇಷವಾಗಿ ತಿನ್ನ ಬಯಸುವ ಇಡೀ ದೇಹವನ್ನು ಶುದ್ಧ ಗೊಳಿಸಬಲ್ಲ, ಜೀರ್ಣಕ್ರಿಯೆ, ರಕ್ತಹೀನತೆ ತಡೆಯುವ, ರೋಗನಿರೋಧಕ ಕಾರ್ಯ ಸುಧಾರಣಾ, ಗ್ಲೂಕೋಸ್ ನಿಯಂತ್ರಣ ಮತ್ತು ತೂಕ ತಡೆಯಂತಹ ಅನೇಕ ಉಪಯುಕ್ತತೆಯ ಬೆಲ್ಲವು ಅನೇಕ ಸಂಭಾವ್ಯ ಪ್ರಯೋಜನಗಳನ್ನು ಹೊಂದಿದೆ ಅನ್ನುವುದು ವಾಸ್ತವ. ಇದನ್ನೆಲ್ಲಾ ಮನವರಿಸಿಕೊಂಡು ತಾನು ಬೆಳೆಸಿದ ಕಲ್ಲಂಗಡಿಗೆ ಮಾರುಕಟ್ಟೆಯಲ್ಲೂ ಬೇಡಿಕೆಯಿಲ್ಲದ ಕಾರಣ ಕನಿಷ್ಠ ಬೆಲ್ಲವನ್ನಾದರೂ ಮಾಡಿ ನೋಡೋಣ ಅಂದು ಅಲೋಚಿಸಿ ಕರಗುಂಜೆ ಬೆಲ್ಲದ (ವಾಟರ್‍ಮೆಲನ್ ಜ್ಯಾಗರಿ) ಬಗೆಗಿನ ಸಾಧಕ, ಬಾಧಕಗಳ ಅಧ್ಯಯನ ನಡೆಸಿ ಬೆಲ್ಲ ತಯಾರಿಕೆಗೆ ಬೇಕಾಗುವ ಯಂತ್ರೋಪಕರಣ, ಕೆಲಸಗಾರರು, ಖರ್ಚುವೆಚ್ಚ ಇತ್ಯಾದಿ ಸಿದ್ಧತೆ ಮಾಡಿಕೊಂಡು ಪ್ರಯತ್ನಕ್ಕಿಳಿದೆ.

ಸ್ವತಃ ಬೆಳೆಸಿದ ಕಲ್ಲಂಗಡಿ ಶೇಖರಿಸಿ ಕಳೆದ ಬುಧವಾರ ರಸಹಿಂಡಿ ಮನೆಯಲ್ಲೇ ಕೊಪ್ಪರಿಯಲ್ಲಿ ಕುದಿಸಿ ಸುಮಾರು ಹತ್ತು ಡಬ್ಬಗಳಷ್ಟು ಅಂದರೆ 250 ಕಿಲೋಗಳಷ್ಟು ಬೆಲ್ಲ ಮಾಡಿರುವೆ. ಮೂರು ಟನ್ ಕರಗುಂಜೆ ಹಣ್ಣುಗಳಿಂದ ಬರೇ 10% ದಷ್ಟು ಮಾತ್ರ ಬೆಲ್ಲ ಫಲಿಸಿತು. ಉತ್ಪಾದಿಸುವ ಬೆಲ್ಲಕ್ಕೆ ಹೆಚ್ಚುವರಿಯಾಗಿ ಶೂನ್ಯದಷ್ಟೂ ಏನೂ (ಸುಣ್ಣ, ಬಣ್ಣ, ರಾಸಾಯನಿಕ) ಬೆರೆಸಿಲ್ಲ. ಬರೇ ಕರಗುಂಜೆ ರಸದಿಂದ ಶುದ್ಧ ಆಯುರ್ವೇದತಾ ಬೆಲ್ಲ ಸಿದ್ಧಪಡಿಸಿರುವೆ. ನೋ ವೇಸ್ಟ್... ಅದೇ ಟೇಸ್ಟ್... ಇದೂ ಕಬ್ಬು ಬೆಲ್ಲದಂತೆಯೇ ಸ್ವಾಧಿಷ್ಟ, ಪರಿಮಳವಾಗಿರುತ್ತದೆ. ಸರಕಾರ, ಕೃಷಿ ಇಲಾಖೆಗಳು ಬೀಜ ವಿತರಣಾ ವೇಳೆ ನೀಡುವ ಮಾರ್ಗದರ್ಶನದಂತೆಯೇ ನಾವು ಕಲ್ಲಂಗಡಿ ಬೆಳೆಸುವಾಗಲೂ ಏನೊಂದೂ ರಾಸಾಯನಿಕ ಹಾಕದೆನೇ ಬೆಳೆಸುವುದರಿಂದ ಬರೇ ಸಾವಯವಬರಿತ ಕರಗುಂಜೆ ಬೆಲ್ಲವೂ ಜೀವಕ್ಕೂ ಆರೋಗ್ಯಕರ ಮತ್ತು ಇದರಿಂದ ಅಡ್ಡಪರಿಣಾಮಗಳು ಕಾಣಿಸದು. ಸಹಜ ಬೆಲ್ಲತಿನ್ನುವಷ್ಟೇ ಸ್ವಾಧಿಷ್ಟ, ಆಹ್ಲಾದವಾಗಿದೆ. ನಾವೂ ಕಳೆದ ಅನೇಕ ತಿಂಗಳುಗಳಿಂದ ತಿನ್ನುತ್ತಾ ಚ್ಹಾ, ಕಾಫಿಗೂ ಉಪಯೋಗಿಸುತ್ತಿದ್ದು ಇದು ಸಕ್ಕರೆ ಕಾಯಿಲೆಯವರೂ ಸವಿಯಬಹುದಾಗಿದೆ.

ಲಾಕ್‍ಡೌನ್‍ನಿಂದ ಊರಿಗೆ ತೆರಳಿದ್ದು ತವರೂರಲ್ಲೂ ಮಾಡಿದ ಹೊಟೇಲು ಕೂಡಾ ಸರಕಾರದ ಆದೇಸದಂತೆ ಬಂದ್ ಮಾಡಿದ್ದು ಕೃಷಿಯಲ್ಲಿ ಆಸಕ್ತನಾಗಿ ಕರಗುಂಜೆ ಬೆಳೆಸಲು ಆಸಕ್ತನಾಗಿದ್ದೆನೆ. ನಮ್ಮಲ್ಲಿ ಸುಮಾರು 8 ಜನ ಉದ್ಯೋಗಿಗಳಿದ್ದು ಅವರೆಲ್ಲಾ ಉತ್ತರ ಪ್ರದೇಶ, ಬಿಹಾರಿಗಳು ಆಗಿದ್ದಾರೆ. ಅವರು ಮತ್ತೆ ಅವರಊರಿಗೆ ತೆರಳಿದರೆ ಮರಳಿ ಬರುವಹಾಗಿಲ್ಲ. ಹಾಗಾಗಿ ಅವರನ್ನೆಲ್ಲಾ ಒಗ್ಗೂಡಿಸಿ ಈ ಬೆಳೆ ಬೆಳೆಸಿರುವೆ. ಬೆಳೆಯನ್ನು ಗದ್ದೆಯಲ್ಲೇ ಬಿಟ್ಟು ಕೊಳೆಸುವುದಕ್ಕಿಂತ ಬೆಲ್ಲವನ್ನಾದರೂ ಮಾಡಿ ಲಾಭದಾಯಕ ಬೆಲೆ ಆಗಿಸಬಹುದು. ಕರಗುಂಜೆ ಬೆಳೆಸಿದಕ್ಕಾಗಿ ಬೆಲ್ಲಕ್ಕೆ ಕನಿಷ್ಠ ಕಿಲೋವೊಂದಕ್ಕೆ ರೂಪಾಯಿ 275/- ಲಭಿಸಿದರೂ ಇದೊಂದು ಲಾಭದಾಯಕ ಉದ್ಯಮ ಆಗಿಸಲು ಸಾಧ್ಯ ಅನ್ನುವುದನ್ನು ನನ್ನ ಅಭಿಮತ ಎಂದು ಜಯರಾಮ ಶೆಟ್ಟಿ ಹೇಳುತ್ತಿದ್ದಾರೆ.

ಕಲ್ಲಂಗಡಿ ಸಿಪ್ಪೆ, ಬೀಜ ಒಣಗಿಸಿಟ್ಟರೆ ಅದನ್ನೂ ಪುಡಿಮಾಡಿ ಪಶುಗಳ ಹಿಂಡಿಗೂ ಉಪಯೋಗಿಸಬಹುದು. ಉಳಿದ ಕರಗುಂಜೆಗಳನ್ನು ಅಪ್ರಯೋಜಕವಾಗಿ ತ್ಯಾಜ್ಯವಾಗಿಸಿ ಗದ್ದೆಯಲ್ಲೇ ಬಿಟ್ಟರೂ ಅದೂ ಗದ್ದೆಗೆ ಗೊಬ್ಬರವಾಗಿ ಉಪಯುಕ್ತ. ಆದರೆ ಬೆಳೆದ ಬೆಳೆ ಹೀಗೇ ಗದ್ದೆಯಲ್ಲೇ ಕೊಳೆತು ಬಿಡುವುದೆಂದರೆ ತೀರಾ ದುಖಃದಾಯಕ ಸಂಗತಿ. ಕನಿಷ್ಠ ಕಿಲೋವೊಂದಕ್ಕೆ ಆರೇಳು ರೂಪಾಯಿ ಸಿಕ್ಕಿದರೂ ಈ ಬೆಳೆ ಲಾಭದಾಯಕ ಆಗಿರುತ್ತದೆ. ಆದರೆ ಮಧ್ಯವರ್ತಿಗಳು ಬಂದು ಪ್ರಥಮ ದರ್ಜೆಯ (ಫಸ್ಟ್ ಕ್ವಾಲಿಟಿ) ಬೆಳೆಗೆ ಕಿಲೋವೊಂದಕ್ಕೆ ಬರೇ ಒಂದು ರೂಪಾಯಿಗೆ ನೀಡುವುದಾಗಿ ಹೇಳಿದರೆ ದ್ವಿತೀಯ, ತೃತೀಯ ದರ್ಜೆಯ ಬೆಳೆಗೆ ಕಿಲೋವೊಂದಕ್ಕೆ ಪೈಸೆಗಳಂತೆ ಕೇಳುತ್ತಾರೆ. ಅದರೆ ಇದೇ ಕಲ್ಲಂಗಡಿ ಮಾರುಕಟ್ಟೆಯಲ್ಲಿ ಕಿಲೋವೊಂದಕ್ಕೆ 25 ರೂಪಾಯಿ ಬೆಲೆಗೆ ಮಾರಲ್ಪಡುತ್ತದೆ. ಬೆಳೆಯಲ್ಲೂ 20%ನಷ್ಟು ಮಾತ್ರ ಪ್ರಥಮ ದರ್ಜೆಯದ್ದಾಗಿದ್ದು ಉಳಿದ 40%ನಷ್ಟು ದ್ವಿತೀಯ ದರ್ಜೆಯ ಬೆಳೆ ಸಿಗುವುದು.

ಆದ್ದರಿಂದ ಸರಕಾರ, ಕೃಷಿ, ತೋಟಗಾರಿಕಾ ಸಚಿವರು, ಸಚಿವಾಲಯ ಎರಡು ವಿಧಗಳಲ್ಲಿ ಈ ಬಗ್ಗೆ ಅಲೋಚನೆ ಮಾಡಿ ಬೆಳೆಗಾರರಿಂದಲೇ ಕಲ್ಲಂಗಡಿಯನ್ನು ಸರಕಾರ ಸ್ವತಃ ಮಾರುಕಟ್ಟೆಗೆ ತರಿಸಿಕೊಳ್ಳುವ ಮುಕ್ತ ಅವಕಾಶ ಒದಗಿಸಬೇಕು. ಇಲ್ಲಂದ್ರೆ ಈ ಬೆಳೆಯಿಂದ ಏನಾದರೂ ವಸ್ತು, ಗೊಬ್ಬರ ಸಿದ್ಧಪಡಿಸಲು ಬೆಳೆಗಾರರಿಗೆ ಪೆÇ್ರತ್ಸಾಹಿಸಬೇಕು ಎಂದು ಜಯರಾಮ ಶೆಟ್ಟಿ ಕರ್ನಾಟಕ ಸರಕಾರಕ್ಕೆ ಮನವಿ ಮಾಡಿದ್ದಾರೆ.
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here