Sunday 13th, June 2021
canara news

ಕರ್ಣಾಟಕ ಬ್ಯಾಂಕ್ ನಿರ್ದೇಶಕ ಡಿ.ಸುರೇಂದ್ರ ಕುಮಾರ್ ಜನ್ಮದಿನ

Published On : 05 Jun 2021   |  Reported By : Rons Bantwal

ಶುಭಾಶಯ ಅರ್ಪಿಸಿದ ಬ್ಯಾಂಕ್‍ನ ಸಿಇಒ ಮಹಾಬಲೇಶ್ವರ ರಾವ್

ಮುಂಬಯಿ (ಆರ್‍ಬಿಐ), ಜೂ.03: ಕರ್ಣಾಟಕ ಬ್ಯಾಂಕ್‍ನ ನಿರ್ದೇಶಕರಾದ ಡಿ.ಸುರೇಂದ್ರ ಕುಮಾರ್ ಅವರ ಜನ್ಮದಿನದ ನಿಮಿತ್ತ ಧರ್ಮಸ್ಥಳದಲ್ಲಿ ಬ್ಯಾಂಕ್‍ನ ಸಿಇಒ ಮಹಾಬಲೇಶ್ವರ ರಾವ್ ಅವರು ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಅರ್ಪಿಸಿ ಶುಭಾಶಯ ಸಲ್ಲಿಸಿದರು.

ಬ್ಯಾಂಕ್‍ನ ಪ್ರಗತಿ ಮತ್ತು ಸಾಧನೆಯಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಮತ್ತು ಪೆÇ್ರೀತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಹಾಗೂ ಇದೇ ಶೌಭಾವಸರದಲ್ಲಿ ಬ್ಯಾಂಕ್‍ನ ನಿರ್ದೇಶಕರಾಗಿ ಸಹಕರಿಸಿದ ಡಿ. ಸುರೇಂದ್ರ ಕುಮಾರ್ ಅವರನ್ನೂ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಬ್ಯಾಂಕ್‍ನ ಕಂಪೆನಿ ಕಾರ್ಯದರ್ಶಿ ಪ್ರಸನ್ನ ಪಾಟೀಲ್, ಶ್ರದ್ಧಾ ಅಮಿತ್, ಶ್ರುತಾ ಜಿತೇಶ್, ನಂದೀಶ್ ಮತ್ತು ಮೈತ್ರಿ ನಂದೀಶ್ ಉಪಸ್ಥಿತರಿದ್ದು ಸುರೇಂದ್ರ ಕುಮಾರ್ ಅವರಿಗೆ ಹುಟ್ಟುಹಬ್ಬದ ಅಭಿನಂದನೆಗಳನ್ನು ಸಲ್ಲಿಸಿದರು.

More News

ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ

Comment Here