Sunday 13th, June 2021
canara news

ಬಜಾಲ್ ಪಕಲಡ್ಕದ ಸಂಕಷ್ಟದಲ್ಲಿನ ರಿಕ್ಷಾ ಚಾಲಕರಿಗೆ ಸಹಾಯಧನ ವಿತರಣೆ

Published On : 05 Jun 2021   |  Reported By : Rons Bantwal


ಲಾಕ್ಡೌನ್‍ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ : ಅನ್ವರ್ ಬಜಾಲ್ 

ಮುಂಬಯಿ (ಆರ್‍ಬಿಐ), ಜೂ.04: ಕೊರೊನಾ ಎರಡನೇ ಅಲೆಯಿಂದಾಗಿ ಸರಕಾರ ಹೇರಿರುವ ಲಾಕ್ಡೌನ್ ನಿಂದ ರಿಕ್ಷಾ ಚಾಲಕರ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ಕನಿಷ್ಠ ಸಹಾಯವನ್ನು ಮಾಡುವ ಉದ್ದೇಶದಿಂದ ಸಹಾಯಧನವನ್ನು ವಿತರಿಸಲಾಗಿದೆ ಎಂದು ಸಮಾಜ ಸೇವಕ ಅನ್ವರ್ ಬಜಾಲ್ ಹೇಳಿದರು.

ಕೆ.ಪಿ ಅಬೂಬಕರ್ ಸ್ಮರಣಾರ್ಥ ಉದ್ಯಮಿಗಳಾದ ಬಿಪಿನ್ ರೈ ಮತ್ತು ಅನ್ವರ್ ಬಜಾಲ್ ನೇತೃತ್ವದಲ್ಲಿ ಲಾಕ್ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಎಲ್ಲಾ ವರ್ಗದ ರಿಕ್ಷಾ ಚಾಲಕರಿಗೆ ಬಜಾಲ್ ಪಕಲಡ್ಕದಲ್ಲಿ ಬುಧವಾರ ತಲಾ ರೂಪಾಯಿ 2,000 ಸಹಾಯಧನ ವಿತರಿಸಿ ಅನ್ವರ್ ಮಾತನಾಡಿದರು.

ಲಾಕ್ಡೌನ್‍ನಿಂದ ಬಹಳಷ್ಟು ಮಂದಿ ಸಂಕಷ್ಟದಲ್ಲಿದ್ದು, ಅವರ ಬದುಕಿನಲ್ಲಿ ಯಶಸ್ವಿಯಾಗಿ ಮುಂದುವರಿಯಲು ಆತ್ಮವಿಶ್ವಾಸ ಬೇಕಿದೆ. ಅದನ್ನು ಮೂಡಿಸುವ ಕಾರ್ಯ ಸಂಘ ಸಂಸ್ಥೆಗಳಿಂದ ಆಗಬೇಕಿದೆ. ಹಿಂದಿನ ಲಾಕ್ಢೌನ್ ಸಂದರ್ಭದಲ್ಲಿಯೂ 300 ಆಹಾರದ ಕಿಟ್ ಗಳನ್ನು ನೀಡಿ ಸಹಕರಿಸಲಾಗಿತ್ತು. ಇಂದು 150 ಮಂದಿ ರಿಕ್ಷಾ ಚಾಲಕರಿಗೆ ಸಹಾಯಧನ ವಿತರಿಸಿದ್ದೇವೆ. ಇದರಿಂದ ಇತರೆ ಸಂಘ ಸಂಸ್ಥೆಗಳು ಪೆÇ್ರೀತ್ಸಾಹಿತರಾಗಿ ಸಂಕಷ್ಟಕ್ಕೆ ಒಳಗಾದವರಿಗೆ ಸಹಕರಿಸಲಿ ಎಂದರು.

ಬದುಕು ಸಂಕಷ್ಟದಲ್ಲಿದೆ. ನೂರಾರು ಮಂದಿ ರಿಕ್ಷಾವನ್ನೇ ಅವಲಂಬಿಸಿ ಬದುಕು ನಡೆಸುವವರಿದ್ದಾರೆ. ಅವರಿಗೆ ಸಹಕರಿಸುವ ಮೂಲಕ ಅನ್ವರ್ ಮತ್ತು ಬಿಪಿನ್ ರೈ ಅವರು ಮಾನವೀಯತೆಯನ್ನು ಎತ್ತಿ ಹಿಡಿದಿದ್ದಾರೆ. ಈ ಹಿಂದೆಯೂ ಜನರ ಸಂಕಷ್ಟಕ್ಕೆ ಸಹಕರಿಸುವ ಮೂಲಕ ಜನರ ಕಷ್ಟದಲ್ಲಿ ಕೈ ಜೋಡಿಸಿದ್ದಾರೆ ಎಂದು ರಿಕ್ಷಾ ಚಾಲಕ ಬಶೀರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಕಲಡ್ಕ ರಿಕ್ಷಾ ಪಾಕ್9ನಲ್ಲಿ ಹಲವು ರಿಕ್ಷಾ ಚಾಲಕರಿದ್ದು, ಲಾಕ್ಡೌನ್ ನಂತರ ಜೀವನ ಸಾಗಿಸಲು ಕಷ್ಟಕರ ವಾಗಿತ್ತು. ಇದಕ್ಕೆ ಅನ್ವರ್ ಬಜಾಲ್ ನೇತೃತ್ವದಲ್ಲಿ ಸಹಕರಿಸುವ ಕಾರ್ಯವಾಗಿದೆ. ಅದರಂತೆ ಇತರೆಡೆಯೂ ಸಂಕಷ್ಟದಲ್ಲಿರುವ ಜನರಿಗೆ ಇತರರು ಸಹಕರಿಸುವ ಕಾರ್ಯಗಳಾಗಲಿ ಎಂದÀು ಸಾಮಾಜಿಕ ಕಾರ್ಯಕರ್ತ ಫೈರೂಝ್ ಮಂಗಳೂರು ತಿಳಿಸಿದರು.

ಈ ಸಂದರ್ಭ ಮಂಗಳೂರು ನಗರ ಪಾಲಿಕೆ ಸದಸ್ಯ ಪ್ರವೀಣ್‍ಚಂದ್ರ ಆಳ್ವ, ಬಜಾಲ್ ಪಕಲಡ್ಕ ಮೊಯುದ್ದೀನ್ ಜುಮಾ ಮಸೀದಿಯ ಖತೀಬ್ ಬಶೀರ್ ವಆಬಿ, ಜಾನಪದ ಪರಿಷತ್‍ನ ಪಮ್ಮಿ ಕೋಡಿಯಾಲ್ ಬೈಲ್, ಮೊಯ್ಯುದ್ದೀನ್ ಜುಮಾ ಮಸೀದಿಯ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಅಲ್ತಾಫ್ , ರಿಫಾಯಿಯ್ಯಾ ದಫ್ ಕಮಿಟಿಯ ಪ್ರ.ಕಾರ್ಯದರ್ಶಿ ಶಬೀರ್ ಅಹ್ಮದ್ ಉಪಸ್ಥಿತರಿದ್ದರು.

 

 
More News

ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಐಲೇಸಾ ದ ವಾಯ್ಸ್ ಆಫ್ ಒಶಿಯನ್ ಡಿಜಿಟಲ್ ವೇದಿಕೆಯಲ್ಲಿ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಕೊರೋನಾ ಪೀಡಿತರಿಗೆ ಕಾಂಗ್ರೆಸ್ ಸೇವಕರು ಆದ್ಯತೆ ನೀಡಬೇಕು-ಮಾಜಿ ಸಚಿವ ಸೂರಕೆ
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು
ಅಗಲಿದ ದಿವ್ಯ ಚೇತನಕ್ಕೆ ಅಶ್ರುತಾರ್ಪಣೆ ಸಲ್ಲಿಸಿದ ಕನ್ನಡ ಸಾಹಿತ್ಯ ಪರಿಷತ್ತು

Comment Here