Friday 19th, April 2024
canara news

35ವರ್ಷಗಳ ಕಾಲ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ

Published On : 04 Jun 2021   |  Reported By : Rons Bantwal


ಮುಂಬಯಿ (ಆರ್‌ಬಿಐ), ಜೂ.01: ಆಕಾಶವಾಣಿ ಕಲಬುರಗಿ ಕೇಂದ್ರದ ಸಂಗೀತಾ ಕಿಣಗಿ ಆಕಾಶವಾಣಿಯಲ್ಲಿ ಸುದೀರ್ಘ 35ವರ್ಷಗಳ ಕಾಲ ಗ್ರಂಥ ಪಾಲಕರಾಗಿ ಸೇವೆ ಸಲ್ಲಿಸಿ ಮೇ 31 ರಂದು ನಿವೃತ್ತಿ ಹೊಂದಿದರು.1961,ಜೂನ್ ಒಂದರಂದು ಇಂ ಸಂಗೀತಾ ಕಿಣಗಿ ಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಜನಿಸಿದ್ದರು. ಒಂದರಿಂದ ರಿಂದ 10ನೇ ತರಗತಿ ವರೆಗೆ ಸ್ವಗ್ರಾಮದಲ್ಲಿ ಯೆ ಶಿಕ್ಷಣ.ನಂತರ ಪಿಯುಸಿ ಯಿಂದ ಬಿಎ ಪದವಿ ವರೆಗೂ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ವ್ಯಾಸಂಗ. ತದನಂತರ ಎಂಎ, ಗ್ರಂಥ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಕರ್ಣಾಟಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದರು. 1986 ಡಿಸೆಂಬರ್ 24ರಂದು ಆಕಾಶವಾಣಿ ಕೇಂದ್ರ ಕಲಬುರ್ಗಿಯಲ್ಲಿ ಗ್ರಂಥ ಪಾಲಕರ ಸಹಾಯಕ ಹುದ್ದೆಗೆ ಸೇರ್ಪಡೆ. ಅಂದಿನಿಂದ ಒಟ್ಟು 34 ವರ್ಷ 5 ತಿಂಗಳು ಕಲಬುರಗಿ ಆಕಾಶವಾಣಿಯಲ್ಲಿ ಗ್ರಂಥ ಪಾಲಕರ ಹುದ್ದೆಯಲ್ಲಿ ಸೇವೆ ಸಲ್ಲಿಸಿ ಮೇ.31ರಂದು ನಿವೃತ್ತ ರಾದರು.

ಕಾರ್ಯಕ್ರಮ ಮುಖ್ಯಸ್ಥರಾದ ರಾಜೇಂದ್ರ ಆರ್ ಕುಲಕರ್ಣಿ, ಕಾರ್ಯಕ್ರಮ ನಿರ್ವಾಹಕರಾದ ಡಾ. ಸದನದ ಪೆರ್ಲ, ಅನಿಲ್ ಕುಮಾರ್ ಎಚ್ ಎನ್, ಸೋಮಶೇಖರ ರುಳಿ, ಅನೌನ್ಸರ್ ಶಾರದಾ ಜಂಬಲದಿನ್ನಿ, ಎಂ ಎ ರೌಫ್, ಅಶೋಕ್ ಕುಮಾರ್, ಸುರೇಶ್ ರಾಂಪುರೆ,ಶ್ರೀಮಂತ ನಾಲ್ವಾರ್ಕಾರ್ಯಕ್ರಮ ಸಹಾಯಕರಾದ ವೀಣಾ, ಮಧು ದೇಶಮುಖ್, ಆರಾಧನಾ,ಮೀನಾಕ್ಷಿ ಮತ್ತಿತರರು ಇದ್ದu. ಡಾ ಸದಾನಂದ ಪೆರ್ಲ ಶಾಲು ಹಾಗೂ ಕೃತಿ ನೀಡಿ ಸನ್ಮಾನಿಸಿದರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here