Friday 19th, April 2024
canara news

ಎನ್‍ಕೆಇಎಸ್ ಶಾಲಾ 1965 ಬ್ಯಾಚ್‍ನ ಸಹಪಾಠಿಗಳ ಒಗ್ಗೂಡುವಿಕೆಗೆ ಆಹ್ವಾನ

Published On : 05 Jun 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜೂ.01: ಮುಂಬಯಿ ಮಹಾನಗರದ ವಡಲಾ ಇಲ್ಲಿ ಸುಮಾರು ಎಂಟು ದಶಕಗಳ ಹಿಂದೆ ಮೈಸೂರು ಅಸೋಸಿಯೇಶನ್ ಮುಂಬಯಿ ಸಂಸ್ಥೆ ಸ್ಥಾಪಿಸಿದ ಏಕಮಾತ್ರ ಕನ್ನಡ ಶಾಲೆ ಅಂದರೆ ಅದು ನೇಶನಲ್ ಕನ್ನಡ ಎಜ್ಯುಕೇಶನ್ ಸೊಸೈಟಿ ಹೈಸ್ಕೂಲ್ (ಎನ್‍ಕೆಇಎಸ್). ಜಗತ್ಪ್ರದ್ಧ ಇಂಜಿನಿಯರ್ ಡಾ| ಮೋಕ್ಷಗುಂಡಂ ವಿಶ್ವೇಶ್ವರ ಅವರ 100 ವರ್ಷದ ಹುಟ್ಟುಹಬ್ಬ ಸಂಭ್ರಮಿಸಿದ ಹಿರಿಮೆ ಈ ಶಾಲೆಯದ್ದಾಗಿದ್ದು ಇದೂ ಇತಿಹಾಸ ಪ್ರಸಿದ್ಧ. ಈ ಶಾಲೆಯ ರಜತ ಮಹೋತ್ಸವ (1965) ವರ್ಷದಲ್ಲಿ ಎಸ್‍ಎಸ್‍ಸಿ ಪರೀಕ್ಷೆಗೆ ಹಾಜರಾದ ವಿದ್ಯಾಥಿರ್s ಜೀವನವೇ ವೈಶಿಷ್ಟ ್ಯಮಯ.ಇದೊಂದು ಬಹಳ ಅಪರೂಪದ ತಂಡ (ಬ್ಯಾಚ್).

ಈ ಬ್ಯಾಚ್‍ನ ಸಹಪಾಠಿಗಳÀನ್ನು ಒಟ್ಟುಗೂಡಿಸಿ ಹಳೇ ಅನುಭವವನ್ನು ಹಂಚಿಕೊಳ್ಳಲು ಪ್ರಯತ್ನಿಸÀಲು ಒಂದು ಪ್ರಯತ್ನ ನಡೆಸಲಾಗಿದ್ದು, ಸದ್ಯ ಬೆಂಗಳೂರುನಲ್ಲಿ ನೆಲೆಯಾದ ಪ್ರಸಿದ್ಧ ವೈದ್ಯ ಡಾ| ವಸಂತ ಶೆಟ್ಟಿ ಪ್ರಯತ್ನ ಮಾಡುತ್ತಿರುವಂತೆ ಮುಂಬಯಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾದ ಕಬಡ್ಡಿಪಟು ಜಯ ಎ.ಶೆಟ್ಟಿ, ಅಥಲೇಟ್ ಕವಿತಾ ಉಚ್ಚಿಲ್, ಜಯಾನಂದ ಪುತ್ರನ್, ವಾಸುದೇವ ಶೆಟ್ಟಿ, ರಘುರಾಮ ಶೆಟ್ಟಿ, ದಾಮೋದರ ಸಾಲ್ಯಾನ್, ಶಶಿಕಲಾ ಗೋಪಾಲ ಶೆಟ್ಟಿ, ಉಮಾ ರಾವ್ ಜೊತೆ ಗೂಡಿದರು.

ಈ ಬ್ಯಾಚ್‍ನ ಕ್ರೀಯಾಶೀಲ ಸಹಪಾಠಿಗಳಾದ ಬೋವಿ ಸಮಾಜದ ಅಧ್ಯಕ್ಷ ದಿನೇಶ್ ಉಚ್ಚಿಲ್, ಹೋಟೆಲ್ ಉದ್ಯಮಿ ಭಾಸ್ಕರ್ ಅಮೀನ್, ಆನಂದಿ ಈಗಾಗಲೇ ದೇವರ ಪಾದ ಸೇರಿರುವುದನ್ನು ಸ್ಮರಿಸುತ್ತೇವೆ. ಆದರೆ ಉಳಿದ ಸಹಪಾಠಿಗಳಲ್ಲಿ ವಿನಂತಿ ಏನೆಂದರೆ ವಿದೇಶ, ದೇಶದ ಎಲ್ಲಿಯೂ ವಾಸವಾಗಿದ್ದ್ದರೂ ತಾವೂ ನಮ್ಮೊಂದಿಗೆ ಜೊತೆಗೂಡಿ ನಮ್ಮ ಹಳೆ ಬಾಂಧವ್ಯತೆಯನ್ನು ಮತ್ತೆ ಚಿಗುರಿಸಿ ಒಂದಾಗಲು ನಮ್ಮ ಆಶಯವಾಗಿದೆ. ಹೆಚ್ಚುವರಿ ಮಾಹಿತಿಗಾಗಿ ಡಾ| ವಸಂತ ಶೆಟ್ಟಿ (9845013383), ಜಯ ಎ.ಶೆಟ್ಟಿ (9323579427), ಉಮಾ ರಾವ್ (9880380656), ಕವಿತಾ ಉಚ್ಚಿಲ್ ( 9819044557) ಇವರನ್ನು ತಕ್ಷಣವೇ ಸಂಪರ್ಕಿಸಲು ವಿನಂತಿ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here