Sunday 13th, June 2021
canara news

ಬಿಲ್ಲವರ ಸೇವಾಸಂಘ (ರಿ) ಸಂತೆಕಟ್ಟೆ ವತಿಯಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

Published On : 07 Jun 2021   |  Reported By : Rons Bantwal


ಮುಂಬಯಿ (ಆರ್ ಬಿಐ), ಜೂ.06: ಬಿಲ್ಲವರ ಸೇವಾಸಂಘ (ರಿ) ಸಂತೆಕಟ್ಟೆ ವತಿಯಿಂದಆಹಾರ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮ ಇಂದು ರವಿವಾರ ನಡೆಸಲಾಯಿತು.

ಸಂಘದ ವ್ಯಾಪ್ತಿಯಲ್ಲಿ ಸಂಕಷ್ಟದಲ್ಲಿರುವ ಸಮಾಜ ಬಾಂದವರಿಗೆ ನಮ್ಮ ಸಂಘದ ಸಮಾಜ ಸೇವಾ ಮಾಣಿಕ್ಯ ದಾತರ ಸಹಕಾರದಿಂದ ಸಂತೆಕಟ್ಟೆ ಬಿಲ್ಲವ ಸಂಘ ಹೆಲ್ಪ್ ಲೈನ್ ಶೀರ್ಷಿಕೆಯಡಿಯಲ್ಲಿ ದಿನನಿತ್ಯ ಬಳಕೆಯ 14 ಬಗೆಯ ಆಹಾರ ಸಾಮಾಗ್ರಿಗಳ ಕಿಟ್ ನೀಡಲಾಯಿತು.


ವಿತರಣಾ ಕಾರ್ಯಕ್ರಮಕ್ಕೆ ಉದ್ಯಮಿ ಹೇಮರಾಜ್ ಡಿ.ಅಮೀನ್ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಘದ ಅಭಿವೃದ್ಧಿ ಸಮಿತಿ ಅದ್ಯಕ್ಷ ಟಿ.ರಾಮ ಪೂಜಾರಿ, ಸಂಘದ ಹೆಲ್ಪ್ ಲೈನ್ ನ ಮುಂದಾಳತ್ವ ವಹಿಸಿದ ಶೇಕರ್ ಬೈಕಾಡಿ, ಬಿಲ್ಲವ ಸಮಾಜ ಸೇವಾ ಮಾಣಿಕ್ಯದಾತ ಭಾಸ್ಕರ್ ಕೆ.ಜತ್ತನ್, ಜಗನ್ನಾಥ ಕೆ., ಉಮೇಶ್ ಪೂಜಾರಿ, ಶೇಕರ್ ಬಿ.ಪೂಜಾರಿ, ನವೀನ್ ತೋನ್ಸೆ, ಮುರಳಿಧರ್ ಸುವರ್ಣ, ಭುಜಂಗ ಪೂಜಾರಿ, ಸುಧಾಕರ್ ನಯಂಪಳ್ಳಿ, ಸುರೇಶ್ ಗರಡಿ ಮಜಲು, ಸದನ್ ಅಲ್ಲದೆ ಭಜನಾ ಪೂಜೆಯ ಉಸ್ತುವಾರಿಗಳಾದ ಉಮೇಶ್ ಜತ್ತನ್, ಸುರೇಶ್ ಜತ್ತನ್, ಗೋಪಾಲ ಪೂಜಾರಿ ಮತ್ತು ಸಂಘದ ಪದಾಧಿಕಾರಿಗಳಾದ ಭಾಸ್ಕರ್ ಸುವರ್ಣ, ಗಂಗಾಧರ್ ಮೂಡುಬೆಟ್ಟು, ನಾಗರಾಜ್ ನಯಂಪಳ್ಳಿ, ರಾಕೇಶ್ ನಯಂಪಳ್ಳಿ ಹಾಗೂ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಗೀತಾ ನಿರಂಜನ್, ಸದಸ್ಯೆಯರಾದ ಶಕುಂತಲಾ ಕಲ್ಯಾಣಪುರ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.

ವರ ಸೇವಾಸಂಘ (ರಿ), ಸಂತೆಕಟ್ಟೆ ಅಧ್ಯಕ್ಷ ಶೇಕರ್ ಗುಜ್ಜರ್ ಬೆಟ್ಟು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಗದೀಶ್ ಕೆಮ್ಮಣ್ಣು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
More News

ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ಬಂಟ್ವಾಳ ಬಾಂಬಿಲಪದವು ಮೂಲದ ಯಮರೂಪಿ ಮಹಿಳೆಯ ಹೀನಾಯ ಕೃತ್ಯ ಸಾಹುಕಾರನ ಸೂರನ್ನೇ ಸೂತಕದ ನಿವಾಸ ಮಾಡಲೆತ್ನಿಸಿದ ಸೂಲಗಿತ್ತಿ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ರಾಜ್ಯಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ-ಪ್ರಸಿದ್ಧ ಕವಿ ಸಿದ್ದಲಿಂಗಯ್ಯ ವಿಧಿವಶ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ
ಡಾ| ಅಬ್ದುಲ್ ರಝಾಕ್ ಕಾಪು ಇವರಿಗೆ ಅಮೇರಿಕನ್ ಎಫ್‍ಎಸಿಸಿ ಪದವಿ ಪ್ರದಾನ

Comment Here