Friday 30th, July 2021
canara news

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ವತಿಯಿಂದ ಕನ್ನಡ ಪತ್ರಿಕಾ ದಿನಾಚರಣೆ

Published On : 03 Jul 2021   |  Reported By : Rons Bantwal


ಪತ್ರಿಕಾ ಮಿತ್ರ ಸಮಾಜ ಸೇವಕ ಬಾಲಕೃಷ್ಣ ಅಗ್ಗಿತ್ತಾಯ ಅವರಿಗೆ ಗೌರವಾರ್ಪಣೆ

ಮುಂಬಯಿ (ಆರ್‍ಬಿಐ), ಜು.01: ಜೀವನದುದ್ದಕ್ಕೂ ಪತ್ರಿಕೆಯೊಂದಿಗೆ ಅನಿನಾಭಾವ ಸಂಬಂಧ ಹೊಂದಿರುವ ಅಗ್ಗಿತ್ತಾಯರು ಬರಹಗಾರನಾಗಿಯೂ, ಪತ್ರಿಕೆಯ ಓದುಗರಾಗಿಯೂ ಅನುಭವ ಹಾಗೂ ಅರಿವಿನ ಖಜಾನೆಯನ್ನೇ ಹೊಂದಿರುವವರು. ಪತ್ರಿಕಾ ಮಿತ್ರರಾಗಿರುಗ ಇವರು ಒಳ್ಳೆಯ ಓದುಗ ಹಾಗೂ ಪತ್ರಿಕೆಗಳಿಗೆ ಸಕಾಲದಲ್ಲಿ ವರದಿಗಳನ್ನು ತಲುಪಿಸುವ ಕಾರ್ಯವನ್ನೂ ಮಾಡುತ್ತಿದ್ದರು. ಆದುದರಿಂದ ಅವರನ್ನು ಸನ್ನಾನಿಸಿ ಗೌರವಿಸುವ ಮೂಲಕ ಪತ್ರಿಕಾ ದಿನಾಚರಣೆ ಸಂಪನ್ನವಾಯಿತು ಎಂದು ಪತ್ರಕರ್ತ ವೀಜಿ ಕಾಸರಗೋಡು ಅಭಿಪ್ರಾಯಪಟ್ಟರು.

ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಜರಗಿದ ಪತ್ರಿಕಾ ದಿನಾಚರಣಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಿಕಾ ಮಿತ್ರ, ಸಮಾಜ ಸೇವಕ ಬಾಲಕೃಷ್ಣ ಅಗ್ಗಿತ್ತಾಯ ಮಧೂರು ಅವರಿಗೆ ಗೌರವಾರ್ಪಣೆ ಸಲ್ಲಿಸಿ ವೀಜಿ ಮಾತನಾಡಿದರು.

ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಉಪಾಧ್ಯಕ್ಷರಾದ ಪೆÇ್ರ| ಶ್ರೀನಾಥ್ ಕಾಸರಗೋಡು ಇವರ ಅಧ್ಯಕ್ಷತೆಯಲ್ಲಿ ಜರುಗಿದ ಸರಳ ಕಾರ್ಯಕ್ರಮದಲ್ಲಿ ಗಡಿನಾಡ ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷರಾದ ಎ ಆರ್ ಸುಬ್ಬಯ್ಯಕಟ್ಟೆ ಶುಭಾಶಂಸನೆ ಗೈದರು.

ಈ ಸಂದರ್ಭ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾರ್ಯದರ್ಶಿ,ಪತ್ರಕರ್ತ ಅಖಿಲೇಶ್ ನಗುಮುಗಂ ಮಲಯಾಳ ಸಿನಿಮಾ ನಿರ್ದೇಶಕ ಕೃಷ್ಣಕುಮಾರ್ ಬದಿಯಡ್ಕ, ಬಾಲಕೃಷ್ಣ ಅಗ್ಗಿತ್ತಾಯ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

 
More News

ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ
ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ
ಅಯುಷ್ ಅನುರಾಧ್ ಶೆಟ್ಟಿಗೆ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶೇಕಡಾ 85.40 ಅಂಕಗಳು
ಅಯುಷ್ ಅನುರಾಧ್ ಶೆಟ್ಟಿಗೆ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶೇಕಡಾ 85.40 ಅಂಕಗಳು
ನವಿ ಮುಂಬಯಿಯಲ್ಲಿ ಒಡಿಯೂರುಶ್ರೀ ಷಷ್ಠ ್ಯಬ್ದಿಯ ಜ್ಞಾನವಾಹಿನಿ-2021ರ 42ನೇ ಕಾರ್ಯಕ್ರಮ
ನವಿ ಮುಂಬಯಿಯಲ್ಲಿ ಒಡಿಯೂರುಶ್ರೀ ಷಷ್ಠ ್ಯಬ್ದಿಯ ಜ್ಞಾನವಾಹಿನಿ-2021ರ 42ನೇ ಕಾರ್ಯಕ್ರಮ

Comment Here