Friday 30th, July 2021
canara news

ಮುಂಬಯಿ ಖಾರ್ ಪಶ್ಚಿಮದಲ್ಲಿ ಸಲೂನ್-ಶಿವಾ'ಸ್ ಸ್ಯಾಲ್ಯೂಟ್‍ಸೇವಾರಂಭ

Published On : 17 Jul 2021   |  Reported By : Rons Bantwal


ಕೇಶ ರಕ್ಷಣೆ ಸೌಂದರ್ಯದ ಪ್ರತಿಷ್ಠೆಯಾಗಿದೆ : ನಿವೃತ್ತ ಕಮಾಂಡರ್ ಸಿ.ಕೆ ದಾವರ್
(ಚಿತ್ರ / ಮಾಹಿತಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜು.15: ಕೇಶವಿನ್ಯಾಸ ವೃತ್ತಿ ಸೌಂದರ್ಯಕ್ಕೆ ಪೂರಕವಾಗಿದ್ದು ಇದು ಮನುಕುಲದ ಸೊಗಸನ್ನು ಇಮ್ಮಡಿಗೊಳಿಸುತ್ತದೆ. ಸದ್ಯ ಕೇಶ ಸಂರಕ್ಷಣೆ ಬರೇ ಪೆÇೀಷಣೆ ಆಗಿರದೆ ಜೀವನದ ಪ್ರತಿಷ್ಠೆ ರೂಪಿಸುವಲ್ಲೂ ಮಹತ್ತರವಾದ ಪಾತ್ರ ವಹಿಸುತ್ತಿದೆ. ಅಂತಹದರಲ್ಲಿ ಅಂತರಾಷ್ಟ್ರೀಯ ಪ್ರಸಿದ್ಧಿಯ ಶಿವರಾಮ ಭಂಡಾರಿ ಕೇಶವಿನ್ಯಾಸ ತಜ್ಞರೆಣಿಸಿ ವೈಶಿಷ್ಟ್ಯಮಯ ಉದ್ದೇಶವಿರಿಸಿ ಯುವ ಜನಾಂಗಕ್ಕೆ ಸೈನಿಕರ ಸೇವೆಯ ಮಹತ್ವ ಸಾರುತ್ತಿರುವುದು ಅಭಿನಂದನೀಯ. ಯೋಧರನ್ನು ಅಭಿವಂದಿಸಿ ರಾಷ್ಟ್ರಪ್ರೇಮ ಸಾರುವ ಪ್ರಯತ್ನವಾಗಿಸಿ ಯೋಧರ ಸೇವಾ ಸನ್ಮಾನಾರ್ಥವಾಗಿ ವಿಭಿನ್ನವಾಗಿ ರೂಪಿಸಿರುವ ಸಲೂನ್-ಶಿವಾ'ಸ್ ಸ್ಯಾಲ್ಯೂಟ್ ಎಲ್ಲರಿಗೂ ಮಾದರಿ ಎಂದು ಭಾರತೀಯ ನೌಕಪಡೆಯ ನಿವೃತ್ತ ಯೋಧ ಕಮಾಂಡರ್ ಸಿ.ಕೆ ದಾವರ್ ತಿಳಿಸಿದರು.

ಬಾಲಿವುಡ್ ರಂಗದಲ್ಲಿ ಹೇರ್ ಸ್ಟೈಲೋ ಮೂಲಕ ಸೆಲೆಬ್ರಟಿ ನಾಮಾಂಕಿತ ಹೇರ್ ಎಕ್ಸ್‍ಪರ್ಟ್ ಪ್ರಸಿದ್ದ ಡಾ| ಶಿವರಾಮ ಕೃಷ್ಣ ಭಂಡಾರಿ ಕಾರ್ಕಳ ಆಡಳಿತ್ವದ ಶಿವಾ'ಸ್ ಹೇರ್ ಡಿಝೈನರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ತನ್ನ 22ನೇ ಶಾಖೆಯನ್ನು ಇಂದಿಲ್ಲಿ ಗುರುವಾರ ಮುಂಬಯಿ ಖಾರ್ ಪಶ್ಚಿಮದ ಸೂರ್ಯಲೋಕ್ ಕಟ್ಟಡದಲ್ಲಿ ಸಲೂನ್-ಶಿವಾ'ಸ್ ಸ್ಯಾಲ್ಯೂಟ್ ಹೆಸರಲ್ಲಿ ಸೇವಾರಂಭಿಸಿದ್ದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿüಯಾಗಿದ್ದ್ದು ದಾವರ್ ತಿಳಿಸಿದರು.

ಪಾರ್ಲೇ ತಿಲಕ್ ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಅನುರಾಧಾ ವಿ.ವಿಷ್ಣು ಗೋರೆ (ಭಾರತ ಪಾಕಿಸ್ತಾನ ಯುದ್ಧದಲ್ಲಿ ಮಡಿದ ಧೀರ ಹುತಾತ್ಮ ಯೋಧ ಕ್ಯಾಪ್ಟನ್ ವಿನಾಯಕ್ ವಿಷ್ಣು ಗೋರೆ ಇವರ ಮಾತಶ್ರೀ) ಇವರು ರಿಬ್ಬನ್ ಕತ್ತರಿಸಿ ಸಲೂನ್-ಶಿವಾ'ಸ್ ಸ್ಯಾಲ್ಯೂಟ್ ಉದ್ಘಾಟಿಸಿ ಮಾತನಾಡಿ ಸಮಯಗಳು ಬದಲಾಗುತ್ತಿದ್ದಂತೆ ಮಾನವನ ಜೀವನ ಶೈಲಿ ಜೊತೆಗೆ ಕೇಶವಿನ್ಯಾಸವೂ ಸಹ ಬದಲಾಗಿದೆ. ಆ ಪೈಕಿ ಕೇಶ ಪೆÇೀಷಣೆಯೂ ಮನುಕುಲದ ಬದುಕಿನ ಒಂದು ಅಂಗವಾಗಿಯೇ ಆಧುನಿಕ ರೂಪ ಪಡೆಯುವ ಧಾವಂತದಲ್ಲಿದೆ. ಹೇರ್ ಸ್ಟೈಲ್ ಕ್ರೇಜ್ ಪುರುಷ-ಮಹಿಳೆಯರಿಗೆ ದೊಡ್ದ ಸವಾಲಾಗಿದೆ. ಕೂದಲಿನ ಶೈಲಿಯ ಮೂಲಕ ತಮ್ಮ ವ್ಯಕ್ತಿತ್ವವನ್ನು ಇತರರ ಮುಂದೆ ಪ್ರದರ್ಶಿಸಲು ಮಹತ್ವದ ಪಾತ್ರವಹಿಸುವ ಪ್ರವೃತ್ತಿ ಇದಾಗಿದೆ ಎಂದರು.

ಶಿವಾ ನನ್ನ ಆಪ್ತಮಿತ್ರ ಮಾತ್ರವಲ್ಲ ಅವರೋರ್ವ ಬಂಧು ಆಗಿದ್ದಾರೆ. ನನ್ನ ಫಿಲ್ಮ್‍ಗಳಲ್ಲೂ ಅಭಿನಯಿಸಿದ್ದಾರೆ. ಅವರೋರ್ವ ಸಹೃದಯಿ ವ್ಯಕ್ತಿತ್ವವುಳ್ಳ ಸಜ್ಜನ ವ್ಯಕ್ತಿ. ಅವರ ಕೆಲಸವೇ ಅವರ ಸದೃಯತೆ, ಪ್ರತಿಷ್ಠೆಯನ್ನು ತಿಳಿಸುತ್ತದೆ. ಸಿನೇಮಾ, ರಾಜಕೀಯ, ಕ್ರೀಡಾ ಮತ್ತಿತರರಂಗದ ದಿಗ್ಗಜರ ಕೇಶವಿನ್ಯಾಸಗೈದ ಹಿರಿಮೆ ಇವರನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಬಾಲಿವುಡ್ ನಿರ್ದೇಶಕ ಮಧುರ್ ಭಂಡಾರ್ಕರ್ ಶುಭಹಾರೈಸಿದರು.

ವಿದ್ವಾನ್ ಶ್ರೀ ಕೆ.ಕೃಷ್ಣರಾಜ್ ತಂತ್ರಿ ಬೋರಿವಲಿ ಅವರು ವಾಸ್ತುಪೂಜೆ, ಸತ್ಯನಾರಾಯಣ ಮಹಾಪೂಜೆ, ನೆರವೇರಿಸಿದರು. ಕೃಷ್ಣ ಭಟ್, ರಾಮದಾಸ ಭಟ್, ಕುಶ ತಿವಾರಿ, ಪ್ರಸಾದ್ ಭಟ್ ಪೂಜಾಧಿಗಳಲ್ಲಿ ಸಹಭಾಗಿಯಾಗಿ ನೆರೆದ ಜನತೆಗೆ ತೀರ್ಥಪ್ರಸಾದ ವಿತರಿಸಿ ಹರಸಿದರು. ರಾಘವ ವಿ.ಭಂಡಾರಿ ಮತ್ತು ಶ್ವೇತಾ ಆರ್.ಭಂಡಾರಿ ಹಾಗೂ ಶಿವರಾಮ ಕೆ.ಭಂಡಾರಿ ಮತ್ತು ಅನುಶ್ರೀ ಎಸ್.ಭಂಡಾರಿ ದಂಪತಿ ಪೂಜಾಧಿಗಳ ಯಜಮಾನತ್ವ ವಹಿಸಿದ್ದು, ಮಕ್ಕಳಾದ ಮಾ| ರೋಹಿಲ್ ಭಂಡಾರಿ ಹಾಗೂ ಕು| ಆರಾಧ್ಯ ಭಂಡಾರಿ ಪಾಲ್ಗೊಂಡರು. ಕುಲದೇವರಾದ ಶ್ರೀ ಕಚ್ಚೂರು ನಾಗೇಶ್ವರ ದೇವರಿಗೆ ಆರತಿ ಬೆಳಗಿಸಿ, ತನ್ನ ಈ ಮಟ್ಟದ ಬೆಳವಣಿಗೆಗೆ ಧೀಶಕ್ತಿಯಾಗಿದ್ದು ಇತ್ತೀಚೆಗೆ ಸ್ವರ್ಗಸ್ಥರಾದ ಮಾತೆ ಗುಲಾಬಿ ಕೆ.ಭಂಡಾರಿ ಅವರನ್ನು ಸ್ಮರಿಸುತ್ತಾ ಸೇವೆಗೆ ಚಾಲನೆ ನೀಡಲಾಯಿತು.

ಭಾರತೀಯ ರಕ್ಷಣಾಪಡೆಗಳಿಂದ ಪ್ರೇರಿತವಾದ ಮೊದಲ ಸಲೂನ್ ಅಂದುಕೊಂಡಿರುವೆ. ಇದು ರಾಷ್ಟ್ರ ರಕ್ಷಣಾ ಸೈನಿಕ, ಯೋಧರ ಶೌರ್ಯ ಮತ್ತು ತ್ಯಾಗದ ಸೇವೆಗಾಗಿ ಸಮರ್ಪಿಸಿರುವೆÉ. ಭಾರತೀಯರು ಸಮವಸ್ತ್ರದಲ್ಲಿರುವ ನಮ್ಮ ಸೇನಾನಿಗಳಿಗೆ ತೋರುವ ಅಪಾರ ಕೃತಜ್ಞತೆಯೇ ಸ್ಯಾಲ್ಯೂಟ್ ನಾಮಕರಣದ ಉದ್ದೇಶ.ಇದಿಷ್ಟು ಸಾಲದು. ನಮ್ಮ ಹೃನ್ಮಣಗಳÀಲ್ಲಿ ಶಾಶ್ವತವಾಗಿರುವುದನ್ನು ತಿಳಿಸಲು ಇಷ್ಟಪಟ್ಟ ಒಂದು ಸಣ್ಣ ಪ್ರಯತ್ನವಾಗಿದೆ. ಈ ಸಲೂನ್‍ನಲ್ಲಿ ಮಿಲಿಟರಿ ಕ್ಷೌರ ಮಾಡುವ ಪರಿಣತ ಕೇಶ ವಿನ್ಯಾಸಕರು ಇದ್ದು ಸೈನಿಕರ ನೋಟ, ಶೈಲಿಗಳು, ಆಲೋಚನೆಗಳ ಬಗ್ಗೆ ವಿಶೇಷವಾಗಿ ತರಬೇತಿ ಪಡೆದಿದ್ದಾರೆ. ಸೈನ್ಯವು ಯಾವಾಗಲೂ 24x7 ಹೇಗಿರುತ್ತದೆ ಎಂದು ಯುವಜನತೆಗೆ ನೆನಪಿಸುವ ಪ್ರಯತ್ನವಷ್ಟೇ ನಮ್ಮದು. ರಾಷ್ಟ್ರದ ಗಡಿಗಳನ್ನು ರಕ್ಷಿಸಲು ಮಾತ್ರವಲ್ಲದೆ ಎಲ್ಲಾ ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಭಾರತದ ಜನರಿಗೆ ಅಮೂಲ್ಯವಾದ ಸೇವೆಗೆ ಬದ್ಧರಾದ ಯೋಧರಿಗೆ ನಮ್ಮದೊಂದು ಸಲಾಂ ಅನ್ನುತ್ತಾ ಸಲೂನ್-ಶಿವಾ'ಸ್ ಸ್ಯಾಲ್ಯೂಟ್ ಸೇವೆ ಸಲ್ಲಿಸಲಿದೆ. ಕೋವಿಡ್‍ನ ಈ ಸಂಧಿಗ್ಧ ಕಾಲದಲ್ಲಿ ಸರ್ಕಾರದ ಆದೇಶದಂತೆ ಸೂಕ್ತ ಪೆÇ್ರೀಟೋಕಾಲ್‍ಗಳನ್ನು ಅನುಸರಿಸಲಾಗುತ್ತದೆ ಎಂದು ಶಿವರಾಮ ಭಂಡಾರಿ ತಿಳಿಸಿದರು.

ಇಂದು ಕೂದಲಿನಿಂದಲೇ ಸೌದರ್ಯ, ಇದರಿಂದಲೇ ಜೀವನ ಅಂದುಕೊಂಡು ಮಾಧ್ಯಮಗಳಲ್ಲಿ ಬರುವ ಜಾಹೀರಾತುಗಳಿಗೆ ಮೊರೆಹೋಗಿ ರೌಂಡ್‍ಫೇಸ್, ಹಾರ್ಟ್‍ಫೇಸ್, ಒವಲ್‍ಫೇಸ್, ಡೈಮಂಡ್‍ಫೇಸ್ ಶೇಪ್ ಅಂತೇಳಿ ನೂರಾರು ತರದ ಹೇರ್ ಸ್ಟೈಲ್‍ಗಳನ್ನು ಆಯ್ಕೆಮಾಡಿ ತಮ್ಮಿಷ್ಟದಂತ್ ಮಕ್ಕಳು, ಯುವಕರು ಯಾಕೆ ಮುದುಕರೂ ಮನಾಕರ್ಷಣೆಯಾಗಿ ಹೇರ್‍ಸ್ಟೈಲಿಂಗ್ ಮಾಡುವ ಮುಂಚೂಣಿಯಲ್ಲಿದ್ದಾರೆ. ನಾರಿಯರಂತೂ ಬಟ್ಟೆ, ಚಪ್ಪಾಲು, ಉಗುರುಗಳ ಬಣ್ಣಕ್ಕಾನುಗುಣವಾಗಿ ಕೂದಲ ಬಣ್ಣವನ್ನು ಬದಲಾಯಿಸಿ ಶೋಭಿಸುವ ವರ್ಣಮಯ ಕಾಲ ಇದಾಗಿದೆ. ಇತರರನ್ನು ಮೆಚ್ಚಿಸಲು ಸೊಗಸಾದ ಕೂದಲಿನ ನೋಟವನ್ನು ಬಯಸುವ ಆಧುನಿಕ ಜನತೆಯ ಇಷ್ಟಾನುಸಾರ ಕೇಶವೃತ್ತಿ ನಡೆಸಿ ಪ್ರತಿಯೊಬ್ಬರಲ್ಲೂ ಸ್ಟೈಲಿಶ್ ಹೇರ್ ಲುಕ್ ಮೂಡಿಸಲು ಇದೊಂದು ಪ್ರಯತ್ನವಾಗಿದೆ ಎಂದೂ ಶಿವರಾಮ ಭಂಡಾರಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ನಟ ಅರ್ಜನ್ ಬಜ್ವಾ, ಮುಂಬಯಿ ದಕ್ಷಿಣ ಮಧ್ಯ ಲೋಕಸಭಾ ಕ್ಷೇತ್ರದ ಸಂಸದ ರಾಹುಲ್ ಆರ್.ಶೆವಾಲೆ, ಸಲೂನ್‍ನ ನಿರೂಪಕ ರಾಜು ಖಂಡಲ್ವಾರ್, ಡಿಸಿಪಿ ಸಂಜಯ್ ಶಿತ್ರೆ, ಎಸಿಪಿಗಳಾದ ಸಂದೀಪ್ ಕಾರ್ಣಿಕ್, ವಿಲಾಸ್ ಸಿಂಗ್ ಸಂಜಯ್, ಬ್ರೈಟ್ ಪಬ್ಲಿಸಿಟಿ ಇದರ ಆಡಳಿತ ನಿರ್ದೇಶಕ ಯೋಗೇಶ್ ಲಕಾನಿ, ಅನಿಲ್ ಕುಮಾರ್ ಶರ್ಮಾ, ಮಾಜಿ ಛಾಯಾಗ್ರಾಹಕ ಗೋಪಾಲ ಶೆಟ್ಟಿ, ಅಶೋಕ್ ಧಮಣ್ಕರ್, ರಾಖಿ ಜುನ್‍ಜುನ್‍ವಾಲಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ಶುಭ ಕೋರಿದರು. ಸಾಧಕ ಸೇವೆಗೆ ಸಹಕರಿಸಿ ಶುಭಾರೈಸಿದ ಗಣ್ಯರು, ಗ್ರಾಹಕರು, ಹಿತೈಷಿಗಳನ್ನು ಶಿವರಾಮ ಭಂಡಾರಿ ಅಭಿವಂದಿಸಿದರು. ಶಿವಾ'ಸ್ ಪರಿವಾರದ ರವಿ ಭಂಡಾರಿ, ಮೊಹ್ಮದ್ ಇಲಿಯಾಸ್, ಮೆಲಿಸ್ಸಾ ಡಿಕೋಸ್ತಾ, ಎನ್.ನಂದಕುಮಾರ್, ಭರತ್ ರಾವಲ್, ಜಾಗೃತಿ ಪವಾರ್ ಸೇರಿದಂತೆ ಶಿವಾ'ಸ್ ಪರಿವಾರ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದುದ್ದಕ್ಕೂ ದೇಶಭಕ್ತಿಗೀತೆಗಳು ಭಿತ್ತರಗೊಂಡಿದ್ದು ನೆರೆದವರಲ್ಲಿ ರಾಷ್ಟ್ರಪ್ರೇಮವು ಉಕ್ಕುವಂತಿತ್ತು.

 

 
More News

ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ
ಇಂಡಿಯನ್ ಎಂಪಾಯರ್ ಯುನಿವರ್ಸಿಟಿ-ಯೂನಿವರ್ಸಲ್ ಡೆವಲಪ್‍ಮೆಂಟ್ ಕೌನ್ಸಿಲ್‍ನ
ಅಯುಷ್ ಅನುರಾಧ್ ಶೆಟ್ಟಿಗೆ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶೇಕಡಾ 85.40 ಅಂಕಗಳು
ಅಯುಷ್ ಅನುರಾಧ್ ಶೆಟ್ಟಿಗೆ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ ಶೇಕಡಾ 85.40 ಅಂಕಗಳು
ನವಿ ಮುಂಬಯಿಯಲ್ಲಿ ಒಡಿಯೂರುಶ್ರೀ ಷಷ್ಠ ್ಯಬ್ದಿಯ ಜ್ಞಾನವಾಹಿನಿ-2021ರ 42ನೇ ಕಾರ್ಯಕ್ರಮ
ನವಿ ಮುಂಬಯಿಯಲ್ಲಿ ಒಡಿಯೂರುಶ್ರೀ ಷಷ್ಠ ್ಯಬ್ದಿಯ ಜ್ಞಾನವಾಹಿನಿ-2021ರ 42ನೇ ಕಾರ್ಯಕ್ರಮ

Comment Here