Thursday 25th, April 2024
canara news

ವಿರಾರ್; ಹೋಟೆಲ್ ಸ್ಟಾರ್ ಪ್ಲಾನೆಟ್ ಪಾಲುದಾರ ಕರುಣಾಕರ್ ಪುತ್ರನ್ ಆತ್ಮಹತ್ಯೆ

Published On : 17 Jul 2021   |  Reported By : Rons Bantwal


ಮುಂಬಯಿ (ಆರ್‍ಬಿಐ), ಜು.16: ಉಪನಗರ ವಿರಾರ್ ಪಶ್ಚಿಮ ಇಲ್ಲಿನ ಹೋಟೆಲ್ ಸ್ಟಾರ್ ಪ್ಲಾನೆಟ್ ಇದರ ವ್ಯವಸ್ಥಾಪಕ ಪಾಲುದಾರ ಕೆಕೆ ಎಂದೇ ಪ್ರಸಿದ್ಧರಾದ ಕರುಣಾಕರ್ ಪುತ್ರನ್ (48.) ಮಾನಸಿಕ ಕಿರುಕುಳ ಮತ್ತು ಸಾಂಕ್ರಾಮಿಕ ಒತ್ತಡಕ್ಕೆ ಮಣಿದು ಕಳೆದ ಗುರುವಾರ ಬೆಳಿಗ್ಗೆ ತನ್ನ ಸ್ಟಾರ್ ಪ್ಲಾನೇಟ್ ಹೊಟೇಲ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತನ್ನ ಹೊಟೇಲು ಆಸ್ತಿ ಮಾಲೀಕರೂ, ಉದ್ಯಮದ ಪಾಲುದಾರರಾದ ಜಯೇಂದ್ರ ಪಾಟೀಲ್ ಮತ್ತು ಕಿಶೋರ್ ಪಾಟೀಲ್ ಅವರ ತೀವ್ರವಾದ ದಬ್ಬಾಳಿಕೆ, ಮಾನಸಿಕ ಕಿರುಕುಳವನ್ನು ಎದುರಿಸುತ್ತಿದ್ದು ಹೊಟೇಲು ಆಸ್ತಿ ಮಾಲೀಕರನ್ನೇ ದೂಷಿಸಿ ಬರೆದಿಟ್ಟ ಪತ್ರವನ್ನು ಪೆÇೀಲಿಸರು ಬಹಿರಂಗ ಪಡಿಸಿದ್ದಾರೆ. ವಿದ್ಯುತ್ ಬಿಲ್ ಪಾವತಿಸಲೂ ಅವರು ಪುತ್ರನ್ ಅವರನ್ನು ಮಾನಸಿಕವಾಗಿ ಹಿಂಸಿಸುತ್ತಿದ್ದಾರೆಂದು ಎನ್ನಲಾಗಿದೆ.

ಕರ್ನಾಟಕ ಕರಾವಳಿಯ ದ.ಕ ಜಿಲ್ಲೆ ಮೂಡಬಿದ್ರೆ ನೆಲ್ಲಿಕಾರ್ ಮೂಲತಃ ಕರುಣಾಕರ್ ಪತ್ನಿ ಶಾಲಿನಿ ಹೇಳಿಕೆಯಂತೆ ಪಾಟೀಲ್ ಸಹೋದರರು ನನ್ನ ಗಂಡನಿಗೆ ಪದೇಪದೇ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಅವರು ನನ್ನ ಗಂಡನನ್ನು ರೆಸ್ಟೋರೆಂಟ್ ಸಿಬ್ಬಂದಿ ಮುಂದೆಯೇ ಅವಮಾನಿಸುತ್ತಿದ್ದರು. ಅವರನ್ನು ಕಳಕೊಂಡ ನಾನು ಇನ್ನೇಗೆ ನನ್ನ ಮಕ್ಕಳನ್ನು ಹೇಗೆ ಬೆಳೆಸಿ ಸಾಕಬಹುದು..? ಈ ಪೈಕಿ ಒಬ್ಬನು ವಿಶೇಷ ಸಾಮರ್ಥ್ಯದ ಮಗುವಿದೆ.

ಮೃತರ ಪತ್ನಿ ಶಾಲಿನಿ ಅವರ ದೂರಿನ ಮೇರೆಗೆ ಅರ್ನಾಲಾ ಪೆÇಲೀಸರು ಆಸ್ತಿ ಮಾಲೀಕರ ವಿರುದ್ಧ ಆತ್ಮಹತ್ಯೆ ಪ್ರಕರಣ ದಾಖಲಿಸಿದ್ದಾರೆ. ವಿರಾರ್ ಪೂರ್ವದ ಡೊಂಗರಪರಾ ನಿವಾಸಿಗಳಾದ ಜಯೇಂದ್ರ ಪಾಟೀಲ್ ಮತ್ತು ಕಿಶೋರ್ ಪಾಟೀಲ್ ವಿರುದ್ಧ ಎಫ್‍ಐಆರ್ ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 306 (ಆತ್ಮಹತ್ಯೆ), 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದೇವೆ. ತಲೆಮಾರಿಸಿ ಕೊಂಡಿರುವ ಪಾಟೀಲ್ ಇವರಿಬ್ಬರನ್ನು ಶೀಘ್ರವಾಗಿ ಬಂಧಿಸುವುದಾಗಿ ವಲಯ ಡಿಸಿಪಿ ಪ್ರಶಾಂತ್ ವಾಘುಂಡೆ ಹೇಳಿದ್ದಾರೆ.

30:70 ಆಧಾರದ ಮೇಲೆ ವ್ಯವಹಾರವನ್ನು ನಡೆಸಲು ಪಾಟೀಲ್ ಸಹೋದರರು ಪುತ್ರನ್ ಅವರೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದರು. ಎರಡನೇ ಅಲೆಯ ಲಾಕ್‍ಡೌನ್‍ನಲ್ಲಿ ಕಿಂಚಿತ್ತು ವ್ಯವಹಾರ ಇರಲಿಲ್ಲ ಮತ್ತು ನಾವೆಲ್ಲರೂ ನಷ್ಟವನ್ನು ಅನುಭವಿಸಿದ್ದೇವೆ. ಕೆಲವು ದಿನಗಳ ಹಿಂದೆ ಪುತ್ರನ್ ಅವರು ತಮ್ಮ ಮಾನಸಿಕ ಒತ್ತಡವನ್ನು ನನಗೆ ವಿವರಿಸಿದ್ದರು. ಪಾಟೀಲ್ ಸಹೋದರರು ತಮ್ಮ ಶೇಕಡಾ 30 ರಷ್ಟು ಆದಾಯವನ್ನು ಅವರಿಗೆ ನೀಡಬೇಕೆಂದು ಒತ್ತಾಯಿಸುತ್ತಿದ್ದರು. ಪಾಟೀಲ್ ಸಹೋದರರು ಕೆಕೆ ಇವರಿಗೆ ಅವರ ಕನಿಷ್ಠ ಫ್ಲಾ ್ಯಟ್ ಅನ್ನಾದರೂ 40 ಲಕ್ಷ ಮೊತ್ತಕ್ಕೆ ಪಾವತಿಸಲು ಯಾ ಅಡಮಾನ ಇಡಲು ಹೇಳಿದ್ದು ನೀವು ಈ ಸಹೋದರರಲ್ಲಿ ಮಾತನಾಡಿ ಸಂಧಾನ ನಡೆಸಬೇಕೆಂದು ಕೆಕೆ ಬಯಸಿದ್ದರು. ರೆಸ್ಟೋರೆಂಟ್‍ನಲ್ಲಿ 8.50 ಲಕ್ಷ ರೂಪಾಯಿಗಳ ವಿದ್ಯುತ್ ಬಿಲ್ ಬಾಕಿ ಇದ್ದುದರಿಂದ ಸರಬರಾಜು ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ವಿದ್ಯುತ್ ಬಿಲ್ ಪಾವತಿಸದ ಕಾರಣ, ಅವರು ಆಸ್ತಿಯನ್ನು ಖಾಲಿ ಮಾಡಬೇಕೆಂದು ಅವರು ಬಯಸಿದ್ದರು ಎಂದು ಕರುಣಾಕರ್ ಮಿತ್ರ, ಹೋಟೆಲಿಯರ್ ಹರೀಶ್ ಶೆಟ್ಟಿ ತಿಳಿಸಿದ್ದಾರೆ.

ಕರುಣಾಕರ್ ಅವರು ಪತ್ನಿ ಶಾಲಿನಿ ಕೆ.ಪುತ್ರನ್ ಮತ್ತು ಇಬ್ಬರು ಅಪ್ರಾಪ್ತ ಗಂಡು ಮಕ್ಕಳನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ವಸಾಯಿ ಹೊಟೇಲ್ ಓನರ್ಸ್ ಅಸೋಸಿಯೇಶನ್‍ನ ಅಧ್ಯಕ್ಷರು, ವಸಾಯಿ ತಾಲೂಕು ಹೋಟೆಲ್ ಓನರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ನಾಗರಾಜ್ ಶೆಟ್ಟಿ, ಪದಾಧಿಕಾರಿಗಳು ಕೆಕೆ ಅಗಲುವಿಕೆಗೆ ತೀವ್ರ ಶೋಕ ವ್ಯಕ್ತ ಪಡಿಸಿ ಸಂತಾಪ ಸೂಚಿಸಿದ್ದಾರೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here