Wednesday 29th, May 2024
canara news

ಮಾಟುಂಗಾ ಪೂರ್ವದ ಶ್ರೀ ಶಂಕರ ಮಠದಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಜಿ ಆಶೀರ್ವಚನ

Published On : 07 Mar 2017   |  Reported By : Rons Bantwal


ವೈಜ್ಞಾನಿಕತೆಗೂ ಧಾರ್ಮಿಕತೆಗೂ ವಿರೋಧ ಸಲ್ಲದು : ಸ್ವರ್ಣವಲ್ಲಿ ಸೋಂದಾಶ್ರೀ

(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಮಾ.06: ಇವತ್ತಿನ ಕಾಲ ವೈಜ್ಞಾನಿಕಯುಗ ಆದುದರಿಂದ ಯುವ ಜನತೆ ವೈಜ್ಞಾನಿಕವಾಗಿ ಮುನ್ನಡೆಯುತ್ತಾರೆ ಎಂದರೆ ತಪ್ಪಲ್ಲ. ಇವತ್ತಿನ ಜನತೆ ಕೂಡಾ ವೈಜ್ಞಾನಿಕ ಭಾಷೆಯಲ್ಲಿ ಹೇಳುವುದಾದರೆ ವಿಜ್ಞಾನವನ್ನೇ ಹೆಚ್ಚು ನಂಬುತ್ತಾರೆ. ಆದುದರಿಂದ ಇವತ್ತು ವಾತಾವರಣವೇ ಹಾಗಿದೆ ಅದು ಸರಿನೇ ಹೌದು ಇದು ತಪ್ಪೆಂದು ಹೇಳಕ್ಕಾಗೊಲ್ಲ. ಆದರೆ ವೈಜ್ಞಾನಿಕತೆಗೂ ಧಾರ್ಮಿಕತೆಗೂ ವಿರೋಧವಿದೆ ಅಂದ್ಕೊಳ್ಳಬಾರದು. ಯಾಕಂದ್ರೆ ಧರ್ಮಗಳಲ್ಲೂ ತುಂಬಾ ವೈಜ್ಞಾನಿಕ ಅಂಶಗಳು ಇರುವುದು ಗಮನಕ್ಕೆ ಬಂದಿದೆ. ಇನ್ನುಳಿದ ವಿಷಗಳ ಬಗ್ಗೆ ಸಂಶೋಧನೆ ಆಗಬೇಕಾಗಿದೆ. ಕೆಲವರು ಮಾಡ್ತಾನೂ ಇದ್ದಾರೆ. ವೈಜ್ಞಾನಿಕ ಅನ್ನುವ ಶಬ್ದಕ್ಕೆ ಅನುಭಾಧಾರಿತ ಎಂದರ್ಥ. ಯಾವುದು ಅನುಭವಕ್ಕೆ ಸಿಗುವ ಸತ್ಯವಿದೆಯೇ ಅದು ಅವೈಜ್ಞಾನಿಕ ಎಂದು ಕರೆಯುತ್ತಾರೆ. ಅದು ಅನುಭವಕ್ಕೆ ಸಿಗುವಾಗೆ ವಿವರಣೆ ಕೊಟ್ಟರೆ ಅದು ವೈಜ್ಞಾನಿಕ ಎಂದು ಸ್ವೀಕಾರ ಮಾಡ್ತಾರೆ. ಧರ್ಮಕ್ಕೂ ವೈಜ್ಞಾನಿಕತೆಗೂ ವಿರೋಧವಿಲ್ಲ ಎನ್ನುವುದು ನಮ್ಮ ಸ್ಪಷ್ಟ ನಿಲುವು. ಇದನ್ನ ಅರಿತುಕೊಂಡು ನಮ್ಮ ಯುವಜನರು ಮತ್ತು ವೈಜ್ಞಾನಿಕ ಚಿಂತನೆಯುಳ್ಳವರು ಅವರು ಧರ್ಮದ ಕಡೆ ಹೆಚ್ಚು ಬರಬೇಕು. ಅದರಿಂದ ಸಮಾಜಕ್ಕೂ ಸ್ವಾಸ್ಥ ್ಯ ಅವರ ಜೀವನಕ್ಕೂ ನೆಮ್ಮೆದಿ ಒದಗುವುದು ಎಂದು ಶಿರಸಿ ಸೋಂದಾ ಶ್ರೀಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಗಂಗಾಧರೇಂದ್ರ ಸ್ವಾಮಿಜಿ ಅಭಿಪ್ರಾಯ ಪಟ್ಟರು.

ಇಂದಿಲ್ಲಿ ಸೋಮವಾರ ಮುಂಬಯಿ ಅಲ್ಲಿನ ಮಾಟುಂಗಾ ಪೂರ್ವದಲ್ಲಿನ ಶ್ರೀ ಶಂಕರ ಮಠದಲ್ಲಿ ನೆರೆದ ಸದ್ಭಕ್ತರು ಹಾಗೂ ಶಿಷ್ಯರನ್ನು ಅನುಗ್ರಹಿಸಿ ಮಾತನಾಡಿ ಮುಂಬಯಿ ನಗರ ತುಂಬಾ ಪ್ರಯಾಸದ ನಗರ. ಇದು ಜಗತ್ತಿಗೆ ಮಾದರಿಯಾದ ನಗರ ಆಗಿದ್ದು ಇಲ್ಲಿ ಉದ್ಯೋಗದ ಒತ್ತಡಗಳು ಜಾಸ್ತಿ. ಜನÀಸಂಖ್ಯೆಯೂ ಬಹಳ ದೊಡ್ದದಿದೆ. ಧಾರ್ಮಿಕ ಶ್ರದ್ಧೆಯುಳ್ಳವರು ಅಷ್ಟೇ ಅಧಿಕವಾಗಿದ್ದಾರೆ. ಆದರೂ ಈ ಜನತೆಯ ಒತ್ತಡ ಸರಿದೂಗಿಸುವ ಅವಶ್ಯ ಇರುತ್ತದೆ. ಒತ್ತಡ ಅನಿವಾರ್ಯ ಅಂತೇಳುವಾಗ ಒತ್ತಡದಿಂದ ನಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಹೆಚ್ಚುತ್ತವೆ. ಇಂತಹ ದುಷ್ಪರಿಣಾಮಗಳನ್ನು ಕಡಿಮೆ ಮಾಡಿಕೊಳ್ಳಲು ಉಪಾಯಗಳೂ ಬೇಕು. ದುಷ್ಪರಿಣಾಮಗಳು ಅನಿವಾರ್ಯವಾದಗ ಪರಿಹಾರನೋಪಾಯವೂ ಅನಿವಾರ್ಯ. ಇದು ಧರ್ಮಶ್ರದ್ಧೆಯಿಂದ ಮಾತ್ರ ಶಮನಗೊಳಿಸಲು ಸಾಧ್ಯ. ಅಂತೆಯೇ ಪ್ರತಿ ದಿವಸವೂ ಪ್ರತಿಯೊಬ್ಬರಿಗೂ ಯೋಗ ಬಹಳ ಅತ್ಯಗತ್ಯವಾಗಿದೆ. ಯೋಗ ಮನಸ್ಸಿಗೆ ಮುದನೀಡುತ್ತದೆ. ಇವತ್ತು ರತ್ಕದೊತ್ತಡ (ಬ್ಲಡ್‍ಪ್ರೆಶರ್), ಹೃದಯಾಘಾತ (ಹಾರ್ಟ್ ಅಟ್ಯಾಕ್) ಮತ್ತು ಸಕ್ಕರೆ ಕಾಯಿಲೆ (ಡಯಾಬಿಟಿಕ್)ಗಳೆಂಬ ಮೂರು ರೋಗಗಳು ಜಾಸ್ತಿಯಾಗಿದ್ದು ಇವೆಲ್ಲಕ್ಕೂ ಮಾನಸಿಕ ಒತ್ತಡಗಳೇ ಕಾರಣ ಎಂದರು.

ನಾಗರಾಜ ಭಟ್ ಮತ್ತು ಸುಮನ್ ಭಟ್ ದಂಪತಿ ಪಾದಪೂಜೆ ನೆರವೇಟ್ದರು. ಮಧುಕರ್ ನಾಯ್ಕ್ಕ್, ಭಿಕ್ಷೆ ಮಾಡಿದರು.

ಈ ಸಂದರ್ಭದಲ್ಲಿ ಶ್ರೀ ಸ್ವರ್ಣವಲ್ಲಿ ಸೇವಾ ಸಮಿತಿ ಮುಂಬಯಿ ಪದಾಧಿಕಾರಿಗಳು, ತನುಜಾ ಹೆಗಡೆ, ಎಸ್.ಎನ್ ಜೋಶಿ, ಅಶೋಕ ನಾಯ್ಕ್ಕ್, ಜಿ.ಆರ್ ಹೆಗಡೆ, ಎಸ್.ಆರ್ ನಾಯ್ಕ್ಕ್, ಕೆ.ಸಿ ಹೆಗಡೆ, ಪಿ.ಎನ್ ನಾಯ್ಕ್ಕ್, ರಾಧಾ ಹೆಗಡೆ, ಸಿ.ಎಂ ಜಿ ಶಾಸ್ತ್ರಿ, ವೀಣಾ ಶಾಸ್ತ್ರಿ, ನಾಲಿ ಭಟ್, ರಮೇಶ್ ನಾಯ್ಕ್ಕ್ ಹಳದೀಪುರ, ಕೆ.ಆರ್ ಭಟ್ ಸೆÉೀರಿದಂತೆ ಅನೇಕ ರಾಮಕ್ಷತ್ರೀಯ ಹಾಗೂ ಹವ್ಯಾಕ ಬಂಧು ಭಕ್ತರು ಉಪಸ್ಥಿತರಿದ್ದರು.

 
More News

ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
"ದ ಡಾಪರ್ ಷೋ"
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ
ಕೊಂಡೆವೂರು ಮಠಕ್ಕೆ ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಭೇಟಿ

Comment Here