Thursday 7th, December 2023
canara news

ಸಂವಿಧಾನದ ರಕ್ಷಣೆಯನ್ನು ಮಾಡುವ ಅಗತ್ಯವಿದೆ ಬಾಬಾ ಸಾಹೇಬ್ ಅಂಬೇಡ್ಕರ್ ಜನ್ಮಾ ದಿನಾಚರಣ ಪ್ರಯುಕ್ತ ಜೈ ಭೀಮ್ ರಾಲಿ

Published On : 25 Apr 2017   |  Reported By : Bernard J Costa


ಕುಂದಾಪುರ, ‘ಇವತ್ತು ಭಾರತ ದೇಶದಲ್ಲಿ ದಲಿತರ, ಮುಸ್ಲಿಮರ ಕ್ರೈಸ್ತರ ಸಂವಿಧಾನತ್ಮಕ ಹಕ್ಕುಗಳನ್ನು ದಮನಿಸಲು ಕೇಂದ್ರ ಸರಕಾರ ಹವಣಿಸುತ್ತಿದೆ, ಇದಕ್ಕಾಗಿ ಡಾ|ಬಾಬಾ ರಾವ್ ಸಾಹೇಬ್ ಅಂಬೆಡ್ಕರ್ ರಚಿಸಿದ ಸಂವಿಧಾನಗಳನ್ನು ತಿದ್ದುವ ಪ್ರಯತ್ನ ಮಾಡಲಾಗುತ್ತದೆ, ಎಲ್ಲೆಲ್ಲಿ ಕಂಡರೂ ದಲಿತರನ್ನು ಅವಮಾನಿಸಿ, ಹಿಂಸಿಸಿ ಅಟ್ಟಹಾಸ ಮಾಡುತಿರುತ್ತಾರೆ, ಅಲ್ಪ ಸಂಖ್ಯಾಕರ ಜನರನ್ನು ದಮನಿಸಲು ನೋಡುತ್ತಾರೆ, ನಾವು ದಲಿತರು ಅಲ್ಪ ಸಂಖ್ಯಾಕರರು ಒಟ್ಟು ಸೇರಿದರೆ ಮೇಲ್ಜಾತಿಯವರೆಂದು ನಮ್ಮನ್ನು ದಮನಿಸುವರಿಗೆ ಉಳಿಗಾಲವಿಲ್ಲಾ’ ಎಂದು ದಲಿತ ದಮನಿಯಯರ ಹೋರಾಟ ಸಮಿತಿ ಮತ್ತು ದಲಿತ ಸಂಘಟನೆಗಳ ಒಕ್ಕೂಟ ಜಂಟಿಯಾಗಿ, ಅಂಬೇಡ್ಕರರ 126 ನೇ ಜನ್ಮಾ ಜಯಂತಿಯ ಪ್ರಯುಕ್ತ ನೆಡೆಸಿದ ಜೈ ಭೀಮ್ ಮಹಾ ರ್ಯಾಲಿ ಮಾಡಿ ಕುಂದಾಪುರದ ಲಾಲ್ ಬಹಾದ್ದೂರ್ ಶಾಸ್ತ್ರಿ ಪಾರ್ಕಲ್ಲಿ ಸಮಾವೇಷಗೊಂಡ ಸಭೆಯಲ್ಲಿ ನುಡಿದರು, ಈ ಸಂದರ್ಭದಲ್ಲಿ ಅವರು, ಮೇಲ್ಜಾತಿಯವರು ಮಾನವೀಯತೆ ಮರೆತು ದಲಿತರ ಮೇಲೆ ಕ್ಷುಲಕ ಕಾರಣಗಳಿಗೆ ಮಾಡಿದ, ಅನೇಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಅವರು ಸಭೆಗೆ ತಿಳಿಸಿದರು.

ಈ ರ್ಯಾಲಿ ಗಂಗೊಳ್ಳಿಯಿಂದ ಹೆಮ್ಮಾಡಿ ತಲ್ಲೂರು ಮೂಲಕ ಬಂದಿತ್ತು, ಅಲ್ಲಲ್ಲಿ ಈ ರ್ಯಾಲಿಗೆ ಸ್ವಾಗತವನ್ನು ಕೋರಲಾಯಿತು. ಇನೊಬ್ಬ ಚಿಂತಕ ಶಾಫಿ ಬೆಳ್ಳಾರೆ ಮಾತಾಡಿ ‘ನಾವು ಅಲ್ಪ ಸಂಖ್ಯಾಕರರು, ಅಣ್ಣ ತಮ್ಮಂದಿರಾಗಿದ್ದೆವೆ, ನಮ್ಮ ಡಿ.ಎನ್.ಎ ಪರೀಕ್ಷೆ ಮಾಡಿದರೆ ಇದನ್ನು ನಾವು ಕಂಡುಗೊಳ್ಳಬಹುದು, ನಾವೆಲ್ಲಾ ದಕ್ಷಿಣ ಭಾರತದ ದ್ರಾವಿಡರಾಗಿದ್ದೆವೆ, ಹೊರಗಿನಿಂದ ಬಂದವರು ಆರ್ಯರು ಅವರೀಗ ನಮ್ಮ ಮೇಲೆ ದಮನನಿಯವಾಗಿ ವರ್ತಿಸಿ, ದೌರ್ಜನ್ಯ ಎಸುಗುತಿದ್ದಾರೆ, ಸಂವಿಧಾನದಲ್ಲಿ ಅವಕಾಶವಿದ್ದ ಅಹಾರ ಪದ್ದತಿಗೂ ಅಡ್ಡಿ ಪಡಿಸುತಿದ್ದಾರೆ, ಅನ್ಯಾಯವಾಗಿ ಎತ್ತಿಕಟ್ಟಿ ಮುಸ್ಲಿಮರ ಕೆಡುಕನ್ನು ಬಯಸುತಿದ್ದಾರೆ, ದಲಿತರನ್ನು, ಅಲ್ಪ ಶಾಂಖ್ಯಾಕರನ್ನು ದಮನಿಸಲು ಅಂಬೇಡ್ಕರ್ ನಿಡಿದಂತಹ ಸಂವಿಧಾನ ತಿರುಚಲು ಪ್ರಯತ್ನಿಸುತಿದ್ದಾರೆ, ಹಾಗಾಗಿ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುವ ಸಮಯ ಬಂದಿದೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕಥೊಲಿಕ್ ಸಭೆಯ ಮುಖಂಡ ವಿನೋದ್ ಕ್ರಾಸ್ತಾ ಸಭೆಯನ್ನುದ್ದೇಶಿಸಿ ಮಾತಾನಾಡಿದರು. ಕಥೊಲಿಕ್ ಸಭೆಯ ಅನೇಕ ಮುಖಂಡರು, ದಲಿತ ಸಮಿತಿಯ ಅನೇಕ ಮುಖಂಡರು, ಮುಸ್ಲಿಂ ಸಮುದಾಯದ ಅನೇಕ ಮುಖಂಡರು ಈ ಸಮಾವೇಷದಲ್ಲಿ ಹಾಜರಿದ್ದರು.

ವೇದಿಕೆಯಲ್ಲಿ ಉದಯಕುಮಾರ್ ತಲ್ಲೂರು,ಹುಸೇನ್ ಕೋಡಿ ಬೆಂಗ್ರೆ, ಪೆÇಪ್ಯುಲರ್ ಫ್ರಂಟ್‍ನ ಇಲಿಯಾಸ್ ಸಾಸ್ತಾನ, ಆಶ್ರೀಫ್ ಕೋಟೆಶ್ವರ, ನಾಗರಾಜ್, ವಿಜಯ್ ಗಣಪತಿ, ಆನಂದ ಕುರುರ್ ಮತ್ತಿತರರು ಉಪಸ್ಥಿತರಿದ್ದರು. ಮಂಜುನಾಥ್ ಬಾಳ್ಕುದ್ರು ಕ್ರಾಂತಿ ಗೀತೆ ಹಾಡಿದರು. ನಾರಯಣ ಮಣೂರು ಸ್ವಾಗತಿಸಿ ಪ್ರಸ್ತಾವಿಕ ಮಾತುಗಳನ್ನಾಡಿದರು. ಅನಂತ ಮಚ್ಚಟ್ಟು ಪರಿಚಯಿಸಿದರು. ಸಮಾವೇಷದ ಬಳಿಕ ಈ ಜೈ ಭೀಮ್ ರ್ಯಾಲಿ ಕೋಟೆಶ್ವರ, ತೆಕ್ಕಟ್ಟೆ, ಸಾಸ್ತಾನ, ಬ್ರಹ್ಮಾವರ ಮಾರ್ಗವಾಗಿ ಉಡುಪಿಗೆ ತೆರಳಿತು.




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here