Thursday 20th, June 2024
canara news

ಗಂಗೊಳ್ಳಿ ಕೊಸೆಸಾಂವ್ ಮಾತಾ ನವೀಕ್ರತ ಇಗರ್ಜಿಯ ಉದ್ಘಾಟನಾ ಸಮಾರಂಭಕ್ಕೆ ಕುಂದಾಪುರ ರೋಜರಿ ಮಾತಾ ಇಗರ್ಜಿಯಿಂದ ಹೊರೆ ಕಾಣಿಕೆ

Published On : 16 May 2017   |  Reported By : Bernard J Costa


ಕುಂದಾಪುರ,ಮೇ.16: ಬಹಳ ಪುರಾತನ ಇಗರ್ಜಿಯಾದ ಗಂಗೊಳ್ಳಿಯ ಕೊಸೆಸಾಂವ್ ಮಾತೆಯ ಇಗರ್ಜಿಯ ಕಟ್ಟಡವು ನೂತನವಾಗಿ ನವೀಕ್ರತಗೊಂಡು ಇದೇ ತಿಂಗಳು 18ನೇ ತಾರೀಕಿನಂದು ಉದ್ಘಾಟನಗೊಳ್ಳುವ ಪ್ರಯುಕ್ತ ಹೊರೆ ಕಾಣಿಕೆಯಾಗಿ ಅತ್ಯಂತ ಹಿರಿಯ ಇಗರ್ಜಿಯಾದ ಕುಂದಾಪುರ ರೋಜರಿ ಮಾತಾ ಇಗರ್ಜಿಯ ವತಿಯಿಂದ ಸುಮಾರು ನಾಲ್ವತ್ತಕ್ಕೂ ಅಧಿಕ ಜನರ ಹೊರೆ ಕಾಣಿಕೆಯನ್ನು ಅರ್ಪಿಸುವ ಸಲುವಾಗಿ ಕುಂದಾಪುರ ಇಗರ್ಜಿಯಿಂದ ಹೊರೆ ಕಾಣಿಕೆ ಕೊಂಡಯ್ಯುವ ಕಾರ್ಯವನ್ನು ಕುಂದಾಪುರ ಇಗರ್ಜಿಯ ಹಾಗೂ ವಲಯ ಪ್ರಧಾನರಾದ ವಂ|ಧರ್ಮಗುರು ಅನೀಲ್ ಡಿಸೋಜಾ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕುಂದಾಪುರ ಇಗರ್ಜಿಯ ಪಾಲನ ಮಂಡಳಿ ಉಪಾಧ್ಯಕ್ಷರಾದ ಜೇಕಬ್ ಡಿಸೋಜಾ, ಪಾಲನ ಮಂಡಳಿ ಸದಸ್ಯ, ಸಂತ ಜುಜೆ ವಾಜ್ ವಾಡೆಯ ಗುರ್ಕಾರ್ (ಪತ್ರಕರ್ತ, ಸಾಹಿತಿ) ಬರ್ನಾಡ್ ಡಿಕೋಸ್ತಾ, ಪಾಲನ ಮಂಡಳಿ ಸದಸ್ಯ ವಿನ್ಸೆಂಟ್ ಡಿಸೋಜಾ, ರೊನಾಲ್ಡ್ ಆಲ್ಮೇಡಾ ಮತ್ತು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ವಂ|ಫಾ|ಅನಿಲ್ ಡಿಸೋಜಾ ಗಂಗೊಳ್ಳಿಯ ಈ ಹೊರೆ ಕಾಣಿಕೆ ಕಾರ್ಯಕ್ರಮವು ರೋಜರಿ ಮಾತೆ ಆಶಿರ್ವಾದದಿಂದ ಯಶಸ್ವಿಯಾಗಲೆಂದು ಹಾರೈಸಿದ್ದು ಮಾತ್ರವಲ್ಲಾ ಈ ಪರ್ಯುಕ್ತ ಅವರು ಜನರೊಡನೆ ವಿಶೇಷವಾದ ಪ್ರಾರ್ಥನೆ ಅವರು ಭಾನುವಾರದಂದು ದೇವರಿಗೆ ಸಲ್ಲಿಸಿದ್ದರು.
More News

ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಸಂಸದ ಗೋಪಾಲ್ ಸಿ.ಶೆಟ್ಟಿ ಆಯೋಜಿಸಿದ `ಶ್ರೀರಾಮ ಭಂಡಾರ' ಧಾರ್ಮಿಕ ಕಾರ್ಯಕ್ರಮ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಭಾರತ್ ಬ್ಯಾಂಕ್ ; ನವೀನ್ ಕುಮಾರ್ ಗುಳಿಬೆಟ್ಟು ವೃತ್ತಿ ನಿವೃತ್ತಿ-ಬೀಳ್ಕೋಡುಗೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ
ಧರ್ಮಸ್ಥಳದಲ್ಲಿ 52ನೆ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭ: 123 ಜೊತೆ ವಧು-ವರರು ದಾಂಪತ್ಯ ಜೀವನಕ್ಕೆ ಪಾದಾರ್ಪಣೆ

Comment Here