Sunday 23rd, June 2024
canara news

ಜ.3;ದ.ಕ .ಪತ್ರಕರ್ತರ ಜಿಲ್ಲಾ ಸಮ್ಮೇಳನ -2023;ಆಮಂತ್ರಣ ಪತ್ರ ಬಿಡುಗಡೆ

Published On : 31 Dec 2022   |  Reported By : Rons Bantwal


ಮುಂಬಯಿ (ಆರ್‌ಬಿಐ), ಡಿ.30: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರಸಂಘದ ಜಿಲ್ಲಾ ಸಮ್ಮೇಳನ -2023ಜ.3ರಂದು ಮಂಗಳವಾರ, ಸಮಯ:ಬೆಳಗ್ಗೆ 9:30ರಿಂದ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಲಿದೆ.

ಎಂಆರ್ ಜಿ ಗ್ರೂಪ್ ಆಡಳಿತ ನಿರ್ದೇಶಕರಾದ ಪ್ರಕಾಶ್ ಶೆಟ್ಟಿಉದ್ಘಾಟಿಸಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿಯ ಅಧ್ಯಕ್ಷ ಸದಾಶಿವ ಶೆಣೈ ವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಬೀಚ್ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಯನ್ನು ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಇಲಾಖೆ ಸಚಿವರು, ಕರ್ನಾಟಕ ಸರಕಾರ ಇವರು ನೆರವೇರಿ ಸಲಿದ್ದಾರೆ. ಪತ್ರಕರ್ತರ ಸಂಚಯನ ನಿಧಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ.ಪರಿಸರ ಸ್ನೇಹಿ ಯೋಜನೆಗೆ ಎಸ್ ಸಿಡಿಸಿಸಿ ಬ್ಯಾಂಕ್ ಮಂಗಳೂರು ಇದರ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಚಾಲನೆ ನೀಡಲಿದ್ದಾರೆ. ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರ 'ಭಾವ ಚಿತ್ರ ಯಾನ -2' ಕೃತಿಯನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಬಿಡುಗಡೆ ಗೊಳಿಸಲಿದ್ದಾರೆ.

ಪತ್ರಕರ್ತ ವಿಕ್ರಂ ಕಾಂತಿಕೆರೆಯವರ ಕೃತಿ 'ಕಾವೇರಿ ತೀರದ ಪಯಣ' ಕೃತಿ ಯನ್ನುಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಬಿಡುಗಡೆ ಗೊಳಿಸ ಲಿದ್ದಾರೆ. ದ.ಕ ಜಿಲ್ಲಾ ಪತ್ರ ಕರ್ತರ ಸಂಘದ ವಿಶೇಷ ಸಂಚಿಕೆಯನ್ನುಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಶಕ್ಷ ಶಿವಾನಂದ ತಗಡೂರು ನೆರವೇರಿಸಲಿದ್ದಾರೆ.

ಜಿಲ್ಲಾ ಸಮ್ಮೇಳನದ ಕಿಟ್ ವಿತರಣೆಯನ್ನು ಶಾಸಕ ವೇದವ್ಯಾಸ್ ಕಾಮತ್ ನೆರವೇರಿಸಲಿದ್ದಾರೆ. ಹಸಿರು ಉಸಿರು ಯೋಜನೆಯ - ಹಣ್ಣಿನ ಗಿಡಗಳ ವಿತರಣೆಯನ್ನು ಶಾಸಕ ಡಾ. ಭರತ್ ಶೆಟ್ಟಿ ನೆರವೇರಿಸಲಿದ್ದಾರೆ. ಛಾಯಾಚಿತ್ರ ಪ್ರದರ್ಶನ ಉದ್ಘಾಟನೆಯನ್ನು ಶಾಸಕ ಯು. ಟಿ .ಖಾದರ್ ನೆರವೇರಿಸಲಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ವಾಚನಾಲಯಕ್ಕೆ ಪುಸ್ತಕ ಹಸ್ತಾಂತರವನ್ನು ಶಾಸಕ ಡಾ.ಮಂಜು ನಾಥ ಭಂಡಾರಿ ಮಾಡಲಿದ್ದಾರೆ. ಬಿಜೈ- ಕಾಪಿಕಾಡ್ ಅಂಗನವಾಡಿ ಮಕ್ಕಳಿಗೆ ಕ್ರೀಡಾ ಪರಿಕರಗ ಳನ್ನು ಶಾಸಕ ಹರೀಶ್ ಪೂಂಜಾ ಹಸ್ತಾಂತರಿಸಲಿದ್ದಾರೆ.ಸಮ್ಮೇಳನದಸಾಂಸ್ಕೃತಿಕ ಕಾರ್ಯಕ್ರಮವನ್ನು ಪಟ್ಲ ಪೌಂಡೇಶನ್ ನ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿನೆರ ವೇರಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್, ಜಯಾನಂದ ಅಂಚನ್ , ಪೂರ್ಣಿಮಾ,ಉಪ ಮೇಯರ್ ಮಂಗಳೂರು ಮಹಾನಗರ ಪಾಲಿಕೆ ಬಿ.ವಿ.ಮಲ್ಲಿಕಾರ್ಜುನಯ್ಯ ಅಧ್ಯಕ್ಷರು, ಐಎಫ್ ಡಬ್ಲ್ಯೂ ಜೆ ಹೊಸದಿಲ್ಲಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಉಪ ಕುಲಪತಿಗಳು ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳೂರು ಯೋಗೀಶ್ ಆಚಾರ್ಯ, ಚೀಪ್ ಜನರಲ್ ಮ್ಯಾನೇಜರ್, ಕೆನರಾ ಬ್ಯಾಂಕ್ ಸುಚರಿತ ಶೆಟ್ಟಿ, ಅಧ್ಯಕ್ಷರು , ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ, ನಿಯಮಿತ.ಪುಷ್ಪ ರಾಜ್ ಜೈನ್ಅಧ್ಯಕ್ಷರು ಕ್ರೆಡೈ ಮಂಗಳೂರು.


ಗಿರೀಶ್, ಉಪಾಧ್ಯಕ್ಷರು,ಓಶಿಯನ್ ಪರ್ಲ್, ಮಂಗಳೂರು, ಗಾಯತ್ರಿ .ಆರ್,ಪ್ರಾದೇಶಿಕ ಮುಖ್ಯಸ್ಥರು, ಬ್ಯಾಂಕ್ ಆಫ್ ಬರೋಡಾ ಸಾಂಬ ಶಿವರಾವ್ ಆಡಳಿತ ನಿರ್ದೇಶಕ ರು ಅನಘ ರಿಫೈನರೀಸ್ ಇವರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿಚಾರ ಗೋಷ್ಠಿ ಬೆಳಗೆ 11.30 ರಿಂದ 1 ಗಂಟೆ ತನಕ ಕರಾವಳಿ ಅಭಿವೃದ್ಧಿ ಮತ್ತು ಪತ್ರಿಕೋದ್ಯಮ.

ಮಧ್ಯಾಹ್ನ 2.30 ರಿಂದ 3.30:ವಿವಿಧ ತಾಲೂಕುಗಳ ಪತ್ರಕರ್ತರ ಸಂಘದಿಂದ ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯಾಹ್ನ 3.30ರಿಂದಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ಮತ್ತು ಇಂಧನ ಸಚಿವ ಸುನಿಲ್ ಕುಮಾರ್ ,ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್.ಅಂಗಾರ, ಅದಾನಿ ಸಮೂಹ ಸಂಸ್ಥೆ ಗಳ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಕಿಶೋರ್ ಆಳ್ವ ಹಿರಿಯ ಪತ್ರಕರ್ತರನ್ನು ಸನ್ಮಾನ ನಿಸಲಿದ್ದಾರೆ. ತಾಲೂಕು ಪತ್ರಕರ್ತರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆ ನಡೆಯಲಿದೆ. ಸಮಾರೋಪ ಭಾಷಣವನ್ನು ಮಾಜಿ ಶಾಸಕ ಕ್ಯಾ.ಗಣೇಶ್ ಕಾರ್ಣಿಕ್ ಮಾಡಲಿದ್ದಾರೆ ಎಂದು ಶ್ರೀನಿವಾಸ್ ನಾಯಕ್ ಇಂದಾಜೆ ತಿಳಿಸಿದ್ದಾರೆ.

ಸುದ್ದಿ ಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಅಕಾಡೆಮಿಯ ಸದಸ್ಯ ಜಗನ್ನಾಥ ಶೆಟ್ಟಿ ಬಾಳ,ರಾಷ್ಟ್ರೀಯ ಕಾರ್ಯ ನಿರತ ಪತ್ರ ಕರ್ತರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾ ರ್ಜುನಯ್ಯ, ಕಾರ್ಯಕಾರಿ ಸಮಿತಿ ಸದಸ್ಯ ಪಿ.ಬಿ ಹರೀಶ್ ರೈ,ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ ,ದ.ಕ.ಕಾರ್ಯ ನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಪುಷ್ಪ ರಾಜ್ ಬಿ.ಎನ್,ಜಿಲ್ಲಾ ಉಪಾ ಧ್ಯಕ್ಷ ಭಾಸ್ಕರ ರೈ ಕಟ್ಟ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯ ನಿರತ ಪತ್ರ ಕರ್ತರ ಒಕ್ಕೂಟದ ಅಧ್ಯಕ್ಷ ಮಲ್ಲಿಕಾ ರ್ಜುನಯ್ಯ ಜಿಲ್ಲಾ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
More News

ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಅಂಡಮಾನ್‍ನಲ್ಲಿ ಸಂಭ್ರಮಿಸಲ್ಪಟ್ಟ 19ನೇ ರಾಷ್ಟ್ರೀಯ ಕನ್ನಡ ಸಂಸ್ಕೃತಿ ಸಮ್ಮೇಳನ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಮೂಡಬಿದ್ರೆ ಶ್ರೀ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಭವನದಲ್ಲಿ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ
ಶಾಂತಿವನ ಟ್ರಸ್ಟ್ ಆಶ್ರಯದಿಂದ ಧರ್ಮಸ್ಥಳದಲ್ಲಿ ಹತ್ತನೆ ವಿಶ್ವಯೋಗ ದಿನ ಆಚರಣೆ

Comment Here