Friday 9th, June 2023
canara news

ಎ.16: ಅಮೇರಿಕಾದ `ಆಟ' ಆಯೋಜಿತ ತುಳುವ ಹೊಸವರ್ಷ ಬಿಸು ಹಬ್ಬ-2023

Published On : 15 Apr 2023   |  Reported By : Rons Bantwal


ಮುಂಬಯಿ (ಆರ್‍ಬಿ ಐ), ಎ.14: ಅಮೇರಿಕಾ ಹಾಗೂ ಕೆನಡಾ ದೇಶಗಳ ತುಳು ಸಂಘಟನೆಗಳ ಒಕ್ಕೂಟ ಆಲ್ ಅಮೇರಿಕಾ ತುಳು ಅಸೋಸಿಯೇಶನ್ (ಂಂಖಿಂ) ತನ್ನ ಮೂರನೆಯ ವಾರ್ಷಿಕೋತ್ಸವ ಹಾಗೂ ತುಳು ಹೊಸವರ್ಷ `ಬಿಸು ಹಬ್ಬ'ವನ್ನು ಅಂತರ್ಜಾಲ ತಾಣದ ಮುಖೇನ ನಾಳೆ (ಎ.16, 2023) ಭಾನುವಾರ ಆಚರಿಸಲು ಸಿದ್ಧತೆ ನಡೆಸಿದೆ.

ಉತ್ತರ ಅಮೇರಿಕಾ ಖಂಡದಲ್ಲಿ ನೆಲೆಸಿರುವ ತುಳುನಾಡಿನ ಜನರ, ತುಳು ಭಾಷೆ ಹಾಗು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಘನ ಉದ್ದೇಶದಿಂದ ಆರಂಭವಾದ ಅಖಿಲ ಅಮೇರಿಕಾ ತುಳುವರ ಅಂಗಣ (ಆಟ) 2021 ರಿಂದ ಬಿಸು ಹಬ್ಬವನ್ನು ಆಚರಿಸಿಕೊಂಡು ಬಂದಿದೆ. ತುಳುನಾಡಿನ ಹಾಗೂ ಅಮೇರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದೇಶದ ಪ್ರಸಿದ್ಧ ತುಳು ಸಾಹಿತಿಗಳು, ಸಾಧಕರನ್ನು ಆಹ್ವಾನಿಸಿ, ಅವರ ಸಾಧನೆಗಳನ್ನು ನವ, ಯುವ ಜನತೆಗೆ ಪರಿಚಯಿಸಿ, ಪ್ರೇರೇಪಿಸಿ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಇದಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಅಂತರ್ಜಾಲ ತಾಣದಲ್ಲಿ ನಡೆಯುವ ಈ ಕಾರ್ಯಕ್ರಮ್ಮಕ್ಕೆ ತುಳು ವಿದ್ವಾಂಸರಾದ ನಿಟ್ಟೆ ವಿಶ್ವವಿದ್ಯಾಲಯದ ತುಳು ಸಂಶೋಧಕಿ ಡಾ| ಸಾಯೀಗೀತ, ಟೆಕ್ ಉದ್ಯಮಿ ಎಂರಿಸಲ್ಟ್, ಕನೆಕ್ಟಿಕಟ್ ಯುಯಸ್‍ಎ ಇದರ ಸ್ಥಾಪಕ ಹಾಗೂ ಅಧ್ಯಕ್ಷ ಶೇಖರ್ ನಾಯ್ಕ್, ಅಮೆರಿಕಾ ಅಲ್ಲಿನ ಇಂಡಿಯಾನಾದ ಪ್ರಸಿದ್ಧ ಸಂಶೋಧಕ ಹಾಗೂ ಯಕ್ಷಗಾನ ಕಲಾವಿದೆ ಡಾ| ರಾಜೇಂದ್ರ ಕೆದ್ಲಾಯ, ಹಾಲಿವುಡ್ ನಿರ್ದೇಶಕ, ನಟ, ಸಾಹಿತಿ ರಘುರಾಮ್ ಶೆಟ್ಟಿ, ಆಲ್ ಅಮೇರಿಕಾ ತುಳು ಅಸೋಸಿಯೇಶನ್‍ನ ಸ್ಥಾಪಕ ಅಧ್ಯಕ್ಷ ಭಾಸ್ಕರ ಶೇರಿಗಾರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸುಮಾರು 2000 ವರ್ಷಕ್ಕಿಂತಲೂ ಅತೀ ಪುರಾತನವಾದ ತುಳು ಭಾಷೆಗೆ ಸರಕಾರಗಳಿಂದ ಮಾನ್ಯತೆ ದೊರೆಯದಿದ್ದರೂ, ಆಟ ಸಂಸ್ಥೆಯು ತುಳು ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಪ್ರಯತ್ನಕ್ಕೆ ಸಾಕ್ಷಿಯಾಗಿ `ರಾಣಿ ಅಬ್ಬಕ್ಕ ಗೇನಾದ ಚಾವಡಿ' ಅಂತರ್ಜಾಲದ ತುಳು ಗ್ರಂಥಾಲಯವನ್ನು ತುಳುನಾಡಿನ ದಂತಕಥೆಯಾದ ವೀರ ರಾಣಿ ಅಬ್ಬಕ್ಕನ ಹೆಸರಿನಲ್ಲಿ ಆರಂಭಿಸಿದೆ. ಇದರ ಉಧ್ಘಾಟನೆಯನ್ನು ಡಾ. ಸಾಯಿಗೀತಾ ಅವರು ನೆರವೇರಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಈ ಗ್ರಂಥಾಲಯಕ್ಕೆ ಸಂಪೂರ್ಣ ಸಹಕಾರ ನೀಡಿದ್ದು, ತನ್ನ ಪ್ರಕಟಣೆಯ ಎಲ್ಲಾ ಸಾಹಿತ್ಯವನ್ನು ಈ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದೆ. ತುಳು ಸಾಹಿತ್ಯ ಅಕಾಡೆಮಿಯ ಸಹಕಾರಕ್ಕೆ `ಆಟ' ಧನ್ಯವದಿಸಿದೆ.

ಅಮೇರಿಕಾ ಹಾಗೂ ಕೆನಡಾ ದೇಶಗಳಲ್ಲಿ ನೆಲೆಸಿರುವ ತುಳು ಬಂಧುಗಳು ತಮ್ಮ ಕಲಾ ನೈಪುಣ್ಯತೆಗಳನ್ನು ಸಭಾ ಕಾರ್ಯಕ್ರಮದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಿದ್ದಾರೆ. ಯೂಟ್ಯೂಬ್ ಪ್ರೀಮಿಯರ್ ಆಗಿ ಹೊರಬರಲಿರುವ ಆಲ್ ಅಮೇರಿಕಾ ತುಳು ಅಸೋಸಿಯೇಶÀನ್ ನಡೆಸುತ್ತಿದೆ.

`ಆಟ'ದ ಅಧಿಕೃತ ಯೂಟ್ಯೂಬ್ ಚಾನೆಲ್ ಹಾಗೂ ಈ ಕೆಳಗಿನ ಕೊಂಡಿಯಲ್ಲಿ ಕಾರ್ಯಕ್ರಮವನ್ನು ಇದೇ ನಾಳೆ ಭಾನುವಾರ (ಎ.16) ಭಾರತೀಯ ಕಾಲಮಾನ ರಾತ್ರಿ 9:30 ಗಂಟೆಗೆ (ಅಮೆರಿಕಾದ ಪೂರ್ವ ಸಮಯ ಬೆಳಗ್ಗೆ 11:30 ಗಂಟೆ) ವೀಕ್ಷಿಸಬೇಕಾಗಿ ಕೋರಲಾಗಿದೆ. ತಿತಿತಿ.ಚಿಚಿಣಚಿಟಿಚಿ.oಡಿg/bisu_ಠಿಚಿಡಿbಚಿ_2023 ಪ್ರಪಂಚದಾದ್ಯಂತ ನೆಲೆಸಿರುವ ತುಳು ಬಂಧುಗಳಿಗೆ `ಆಟ' ಈ ವರ್ಚುಯಲ್ ಕಾರ್ಯಕ್ರಮಕ್ಕೆ ಹೃತ್ಪೂರ್ವಕ ಸ್ವಾಗತ ಬಯಸಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಸಹಕರಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರು ವಿನಂತಿಸಿದ್ದಾರೆ.

 

 




More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here