Friday 8th, December 2023
canara news

ನೆರೂಲ್‍ನ ಬಿಎಸ್‍ಕೆಬಿಎ ಆಶ್ರಯದಲ್ಲಿ ನಡೆಸಲ್ಪಟ್ಟ ಜೇಷ್ಠ ನಾಗರಿಕರ ದಿನಾಚರಣೆ

Published On : 02 Oct 2023   |  Reported By : Rons Bantwal


ಮುಂಬಯಿ (ಆರ್‍ಬಿಐ), ಅ.01: ಉಪನಗರ ನವಿ ಮುಂಬಯಿಯ ನೆರೂಳ್‍ನಲ್ಲಿ ಕಾರ್ಯಪ್ರವೃತ್ತ ಬಿಎಸ್‍ಕೆಬಿ ಅಸೋಸಿಯೇಶನ್ (ಗೋಕುಲ) ಇದರ ಅಂಗಸಂಸ್ಥೆ ನೆರೂಲ್ ಪೂರ್ವದಲ್ಲಿನ ಹಿರಿಯ ನಾಗರಿಕರ ನೆಮ್ಮದಿಯ ತಾಣ `ಆಶ್ರಯ'ದಲ್ಲಿ ಕಳೆದ ಭಾನುವಾರ ಹಿರಿಯ ನಾಗರಿಕರ ದಿನಾಚರಣೆಯನ್ನು ಅದ್ದೂರಿಯಾಗಿ ಸಂಭ್ರಮಿಸಲಾಯಿತು.

ಬಿಎಸ್‍ಕೆಬಿಎ ಉಪಾಧ್ಯಕ್ಷ ವಾಮನ್ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ನಡೆಸಲ್ಪಟ್ಟ ಸಭಾ ಕಾರ್ಯಕ್ರಮದಲ್ಲಿ ಅತಿಥಿü ಅಭ್ಯಾಗತರಾಗಿ ರಾಮಕೃಷ್ಣ ಪಂಥದ ಹಿರಿಯ ಸಂನ್ಯಾಸಿ ಶ್ರೀ ತತ್ವರೂಪಾನಂದಜಿ ಮಹಾರಾಜ್, ಗೌರವ ಅತಿಥಿsಗಳಾಗಿ ಕೋಪರ್‍ಖೈರ್ಣೆ ಇಲ್ಲಿನ ಲೋಕಮಾನ್ಯ ತಿಲಕ್ ಕಾಲೇಜ್ ಆಫ್ ಇಂಜಿನಿಯರಿಂಗ್ ಪ್ರಾಂಶುಪಾಲ ಡಾ| ವಿವೇಕ್ ಸುನ್ನಪ್‍ವರ್, ವಸಂತ ವಿಹಾರ್ ಚೆಂಬೂರ್‍ನ ಡಬ್ಲೂ ್ಯಇ ಕ್ಲಬ್ ಅಧ್ಯಕ್ಷೆ ಅಂಜಲಿ ಗೋಯಲ್, ಸಮಾಜ ಸೇವಕ ಡಾ| ಬಿಕ್ರಂ ಪರಾಜುಲಿ, ವಾಸ್ತುಶಿಲ್ಪಿ, ಸಮಾಜ ಸೇವಕ ಜೋಯ್ ಗೋಪಾಲ್ ಸನ್ಯಾಲ್ ಉಪಸ್ಥಿತರಿದ್ದರು. ಅತಿಥಿüಗಳು ಕೆ.ವಿಶ್ವನಾಥನ್ ಅವರಿಗೆ ಆಶ್ರಯ ಸ್ಟಾರ್ ಪುರಸ್ಕಾರ ಹಾಗೂ ರೋಲಿಂಗ್ ಶೀಲ್ಡ್‍ನೊಂದಿಗೆ ಸ್ಟಾರ್ ಅವಾರ್ಡ್‍ನ್ನು ನವಿನಾ ಡಿಸೋಜಾ ಅವರಿಗೆ ಪ್ರದಾನಿಸಿ ಅಭಿನಂದಿಸಿದರು.

ಆಶ್ರಯ ಕಾರ್ಯಾಧ್ಯಕ್ಷ ಕೆ.ರಾಜಾರಾಮ ಆಚಾರ್ಯ, ಕಾರ್ಯದರ್ಶಿ ಚಿತ್ರಾ ಮೇಲ್ಮನೆ, ಜೊತೆ ಕೋಶಾಧಿಕಾರಿ ಲಕ್ಷ್ಮೀಶ್ ಆಚಾರ್ಯ, ಬಿಎಸ್‍ಕೆಬಿ ಅಸೋಸಿಯೇಶನ್‍ನ ಬಿಎಸ್‍ಕೆಬಿಎ ಉಪಾಧ್ಯಕ್ಷ ಅವಿನಾಶ್ ಶಾಸ್ತ್ರಿ, ಕಾರ್ಯದರ್ಶಿ ಎ.ಪಿ.ಕೆ ಪೆÇೀತಿ, ಖಜಾಂಚಿ ಸಿಎ| ಹರಿದಾಸ ಭಟ್, ಜೊತೆ ಕಾರ್ಯದರ್ಶಿ ಪ್ರಶಾಂತ್ ಹೆರ್ಲೆ, ಮಹಿಳಾ ವಿಭಾಗಧ್ಯಕ್ಷೆ ಸಹನಾ ಎ.ಪೆÇೀತಿ, ಗೋಕುಲ ಭಜನಾ ಮಂಡಳಿ ಸಮಿತಿ ಕಾರ್ಯಧ್ಯಕ್ಷೆ ಐ.ಕೆ ಪ್ರೇಮಾ ಎಸ್.ರಾವ್, ಮಾಜಿ ಅಧ್ಯಕ್ಷ ಕೆ.ಸುಬ್ಬಣ್ಣ ರಾವ್ ಮತ್ತಿತರ ಪದಾಧಿಕಾರಿಗಳು, ಸದಸ್ಯರನೇಕರು ಹಾಜರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವೃತ್ತಿಪರ ಗಾಯಕರು ಕರೋಕೆ ಗಾಯನ, ಆಶ್ರಯದ ಜ್ಯೇಷ್ಠ ನಾಗರಿಕರು ವಿವಿಧ ಮನರಂಜನಾ ಕಾರ್ಯಕ್ರಮ ಪ್ರಸ್ತುತ ಪಡಿಸಿದರು. ಅನಿತಾ ಅರ್. ಆಚಾರ್ಯ ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಾಹಿಸಿದರು.

ಎಸ್.ರಾಜಮ್ಮ ಪ್ರಾರ್ಥನೆಯನ್ನಾಡಿದರು. ಕೆ.ರಾಜಾರಾಮ ಆಚಾರ್ಯ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಅತಿಥಿüಗಳನ್ನು ಪರಿಚಯಿಸಿ ಗಣ್ಯರಿಗೆ ಪುಷ್ಫಗುಪ್ಚಗಳನ್ನೀಡಿ ಗೌರವಿಸಿದರು. ಚಿತ್ರಾ ಮೇಲ್ಮನೆ ಕಾರ್ಯಕ್ರಮ ನಿರೂಪಿಸಿದರು. ಎ.ಪಿ.ಕೆ ಪೆÇೀತಿ ವಂದನಾರ್ಪಣೆಗೈದರು.

 

 

 




More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here