Friday 8th, December 2023
canara news

ಸಾಫಲ್ಯ ಸೇವಾ ಸಂಘ ಮುಂಬಯಿ ಅಧ್ಯಕ್ಶರಾಗಿ ಶ್ರೀನಿವಾಸ ಸಾಫಲ್ಯ ಅವಿರೋಧ ಆಯ್ಕೆ

Published On : 19 Oct 2023   |  Reported By : Rons Bantwal


ಮುಂಬಯಿ, ಅ.19: ಮುಂಬಯಿನ ಹಿರಿಯ ಜಾತಿ ಸಂಸ್ಥೆಯಲ್ಲಿ ಒಂದಾದ ಸಾಫಲ್ಯ ಸೇವಾ ಸಂಘ ಮುಂಬಯಿ ಇದರ 2023-24 ರಿಂದ 2025-26 ರವರೆಗಿನ ಮೂರು ವರುಷದ ಆವದಿಗೆ ಹೊಸ ಕಾರ್ಯಕಾರಿ ಸಮಿತಿಯನ್ನು ಇತ್ತೀಚಿಗೆ ಕಳೆದ ಶನಿವಾರ (ಅ.07) ರಂದು ನಡೆದ ಕಿರುಸಭೆಯಲ್ಲಿ ನೇಮಿಸಲಾಯಿತು.

ಕಳೆದ ಆರು ವರುಷಗಳಿಂದ ಸಮಾಜದ ಸರ್ವತೋಮುಖ ಏಳಿಗೆಗಾಗಿ ಶಕ್ತಿ ಮೀರಿ ಪ್ರಯತ್ನಿಸಿದ ಹಾಗೂ ವಿವಿಧ ಯೋಜನೆಯ ಮುಖೇನ, ಅರ್ಥತ್, ನಾದಸ್ವರ ಯೋಜನೆ (ವಿದ್ಯಾಥಿರ್sಯ ಸಂಪೂರ್ಣ ಖರ್ಚನ್ನು ಬರಿಸುವುದು), ಸಾಫಲ್ಯ ಭಾಗ್ಯ ಯೋಜನೆ (ಮಹಿಳೆಯರಿಗೆ ಉಚಿತ ಹೊಲಿಯುವ ಯಂತ್ರ ಹಾಗು ತರಬೇತಿ), ಸಾಫಲ್ಯ ಸಂಜೀವಿನಿ ಯೋಜನೆ (ಹಿರಿಯರಿಗೆ ಉಚಿತ ಮೆಡಿಕಲ್ ಬಿಲ್ಸ್), ಸಾಫಲ್ಯ ಶಿಕ್ಷಣ ಯೋಜನೆ (ಉಚಿತ ಗಣಕ ಯಂತ್ರ ತರಬೇತಿ), ಸಾಫಲ್ಯ ಜ್ಯೋತಿ (ಪ್ರಾಣಿ ಸಂಕುಲಕ್ಕೆ ಸಹಾಯ), ಆನಾಥ ಆಶ್ರಮಕ್ಕೆ ಹಾಗು ವೃದ್ದಾ ಶ್ರಮಕ್ಕೆ ವಿವಿಧ ರೀತಿಯ ಸಹಾಯ ನೀಡಿ ಸಾಫಲ್ಯ ಸೇವಾ ಸಂಘದ ಅಧ್ಯಕ್ಷರಾಗಿ ಕೆಲವು ಜನಪರ ಯೋಜನೆಗಳೊಂದಿಗೆ ಜನಪ್ರಿಯರಾದ ಶ್ರೀನಿವಾಸ ಸಾಫಲ್ಯ ಅವರನ್ನು ಮೂರನೇ ಬಾರಿ ಅವಿರೋಧವಾಗಿ ಅಧ್ಯಕ್ಷರಾಗಿ ನೇಮಿಸಲಾಯಿತು.

   

             Shrinivas P.Saphalya (President)        Krishna Kumar Bangera (Vice President)

   

                                         Jeevan Shiriyan (Vice President)                Bhaskar T.Sapaliga(Secretary)                                        

    

                                             Hemanth Sapaliga (Treasurer)            Lakshmi Mendon(Ladies Chairman)                                          

                            Andhya Puthran (Youth Chairman)                              

ಉಪಾಧ್ಯಕ್ಷರಾಗಿ ಕೃಷ್ಣ ಕುಮಾರ್ ಬಂಗೇರ ಮತ್ತು ಜೀವನ್ ಸಿರಿಯಾನ್, ಪ್ರದಾನ ಕಾರ್ಯದರ್ಶಿಯಾಗಿ ಹಿರಿಯ ಸದಸ್ಯ ಭಾಸ್ಕರ್ ಟಿ. ಸಫಲಿಗ ಹಾಗೂ ಜೊತೆ ಕಾರ್ಯದರ್ಶಿಯಾಗಿ ರಾಜೇಶ್ ಪುತ್ರನ್ ಮತ್ತು ಕಿರಣ್ ಎಂ ಸಫಲಿಗ, ಕೋಶಾಧಿಕಾರಿಯಾಗಿ ಹೇಮಂತ್ ಸಫಲಿಗ ಮತ್ತು ಜೊತೆ ಕೋಶಾಧಿಕಾರಿಯಾಗಿ ಸತೀಶ್ ಕುಂದರ್ ಮತ್ತು ಕಾರ್ಯಕಾರಿ ಸದಸ್ಯರಾಗಿ ಲೀಲಾಧರ್ ಬಂಗೇರ, ಭಾಸ್ಕರ್ ಬಿ.ಸಫಲಿಗ, ಜಗನ್ನಾಥ ಕರ್ಕೇರ, ಮಹೇಶ್ ಬಂಗೇರ, ಶ್ರೀಮತಿ ಶೋಭಾ ಬಂಗೇರ, ಜಿ.ಪಿ. ಕುಸುಮ, ದಿನೇಶ್ ಕಂಚನ್, ದೀಪಕ್ ಕುಂದರ್, ಶ್ರೀಮತಿ ಶೋಭಾ ಕರ್ಕೇರ ಮತ್ತು ಪದ್ಮಿನಿ ಬಂಗೇರ. ಮಹಿಳಾ ವಿಭಾಗದ ಕರ್ಯಧ್ಯಕ್ಷೆಯಾಗಿ ಶ್ರೀಮತಿ ಲಕ್ಷ್ಮೀ ಮೆಂಡನ್, ಉಪಾಧ್ಯಕ್ಷೆಯಾÁಗಿ ವಿಮಲಾ ಬಂಗೇರ, ಕಾರ್ಯದರ್ಶಿಯಾಗಿ ಉಷಾ ಸಪಲಿಗ ಹಾಗೂ ಕೋಶಾಧಿಕಾರಿಯಾಗಿ ಶಾಂತ ಸುವರ್ಣ. ಯುವ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಕು| ಸಂದ್ಯಾ ಪುತ್ರನ್, ಉಪ ಕಾರ್ಯಾಧ್ಯಕ್ಷರಾಗಿ ಸಂತೋಷ್ ಕುಂದರ್, ಕಾರ್ಯದರ್ಶಿಯಾಗಿ ಶ್ವೇತಾ ಬಂಗೇರ ಆಯ್ಕೆಯಾಗಿದ್ದಾರೆ ಎಂದು ಸಾಫಲ್ಯ ಸೇವಾ ಸಂಘ ಪ್ರಕಟಿಸಿದೆ.
More News

ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಹಳೆ ವಿದ್ಯಾರ್ಥಿಗಳ ಸಂಘ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡೇರಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಪೆರ್ಮಂಕಿಗುತ್ತು ರಿತೇಶ್ ಪಕ್ಕಳ ಅವರಿಗೆ ಪಿಹೆಚ್‍ಡಿ ಪದವಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ
ಇಪ್ಪತ್ತ್ತರನೇ ವಾರ್ಷಿಕ ಮಹಾಸಭೆ ಪೂರೈಸಿದ ಗಾಣಿಗ ಸಮಾಜ ಮುಂಬಯಿ

Comment Here