Wednesday 28th, February 2024
canara news

ಬೊರಿವಿಲಿ ದೇವುಲಪಾಡದ ಶ್ರೀಬ್ರಹ್ಮ ಬೈದರ್ಕಳರ ಗರಡಿಯಲ್ಲಿ ನೆರವೇರಿಸಲ್ಪಟ್ಟ

Published On : 25 Jan 2024   |  Reported By : Rons Bantwal


ಐವತ್ತನೇ ವಾರ್ಷಿಕ ಮಹಾಪೂಜೆ ಮತ್ತು ಬ್ರಹ್ಮ ಬೈದರ್ಕಳ ನೇಮೋತ್ಸವ
(ಚಿತ್ರ / ವರದಿ : ರೋನ್ಸ್ ಬಂಟ್ವಾಳ್)

ಮುಂಬಯಿ, ಜ.25: ಬೊರಿವಿಲಿ ಪೂರ್ವದಲ್ಲಿನ ದೇವುಲಪಾಡಾ ಇಲ್ಲಿನ ತುಳುನಾಡಿನ ವೀರ ದೈವಗಳಾದ ಕೋಟಿ ಚೆನ್ನಯರನ್ನು ಒಳಗೂಡಿಕೊಂಡಿರುವ ಓಂ ಶ್ರೀ ಜಗಧೀಶ್ವರೀ ಸೇವಾ ಸಮಿತಿ (ರಿ.) ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಇಂದಿಲ್ಲಿ ಗುರುವಾರ ಐವತ್ತನೇ ವಾರ್ಷಿಕ ಸುವರ್ಣ ಮಹಾಪೂಜೆ ನೆರವೇರಿಸಿ ಬ್ರಹ್ಮ ಬೈದರ್ಕಳ ನೇಮೋತ್ಸವಕ್ಕೆ ಸಂಭ್ರಮ ಸಡಗರದಿಂದ ಚಾಲನೆಯನ್ನೀಡಲಾಯಿತು.

ಆ ಪ್ರಯುಕ್ತ ಕಳೆದ ಬುಧವಾರ ಅಪರಾಹ್ನ ಸೇವಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಶೇಖರ್ ಇಂದು ಸಾಲಿಯಾನ್ ಕಟಪಾಡಿ ಇವರ ನೇತೃತ್ವ, ಆಶೀರ್ವದ ಮತ್ತು ಮಾರ್ಗದರ್ಶನದಲ್ಲಿ ಕಲಶ ಪ್ರತಿಷ್ಠೆ, ರಾತ್ರಿ ಅಗೆಲ ತಂಬಿಲ ನಂತರ ಬೈದರ್ಕಳ ದರ್ಶನದ ಮೂಲಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿ, ಶಾಸ್ತ್ರೋಕ್ತವಾಗಿ ವಾರ್ಷಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಇಂದಿಲ್ಲಿ ಗುರುವಾರ ಬೆಳಿಗ್ಗೆ ಗಣಹೋಮ, ದುರ್ಗಾಪೂಜೆ, ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಸಲ್ಪಟ್ಟಿತು. ರಾತ್ರಿ ಬೈದರ್ಕಳ ನೇಮ (ಕೋಲ) ನಂತರ ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲಮ್ಮನ ನೇಮ ಜರುಗಿತು. ಗರಡಿಯಲ್ಲಿ ರಘು ಕೆ.ಕೋಟ್ಯಾನ್ ಶಾಸ್ತ್ರಾನುಸಾರ ನೇಮೋತ್ಸವದ ವಿಧಿಗಳನ್ನು ನೆರವೇರಿಸಿದರು. ವಿದ್ವಾನ್ ಸುಕುಮಾರ್ ಭಟ್ ಬೈಕಲ ತನ್ನ ಪೌರೋಹಿತ್ಯದಲ್ಲಿ ಪೂಜಾಧಿಗಳನ್ನು ನೆರವೇರಿಸಿ ನೆರೆದ ಭಕ್ತಾಭಿಮಾನಿಗಳಿಗೆ ತೀರ್ಥ ಪ್ರಸಾದ ವಿತರಿಸಿ ಅನುಗ್ರಹಿಸಿದರು.

ನೇಮೋತ್ಸವದಲ್ಲಿ ದೇವಿಪಾತ್ರಿಯಾಗಿ ಪ್ರಸಾದ್ ಕಲ್ಯ (ಮುಲುಂಡ್), ಮಧ್ಯಾಸ್ಥರಾಗಿ ನರ್ಸಪ್ಪ ಕೆ.ಮಾರ್ನಾಡ್, ಉಮೇಶ್ ಸುವರ್ಣ, ಬೈದರ್ಕಳರ ಪೂಜಾರಿಗಳಾಗಿ ಪಕ್ಕೆಟ್ಟು ಗರಡಿ ಸತೀಶ್ ಪೂಜಾರಿ, ಮಾಣಹ್ಯೊಟ್ಟು ಗರಡಿ ಸತೀಶ್ ಪೂಜಾರಿ ಸಹರಿಸಿದ್ದು, ಬೂಬ ಪರವ, ಸಂತೋಷ್ ಪರವ ಮತ್ತು ವಿಠಲ ಪರವ ಕೋಲ ನೇರವೇರಿಸಿದರು. ಶುಕ್ರವಾರ ಮುಂಜಾನೆ ಮಂಗಳದೊಂದಿಗೆ ವಾರ್ಷಿಕ ನೇಮೋತ್ಸವ ಸಮಾಪನ ಗೊಂಡಿತು.

ಕಾರ್ಯಕ್ರಮದಲ್ಲಿ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಹರೀಶ್ ಜಿ.ಅಮೀನ್, ಉಪಾಧ್ಯಕ್ಷ ಶಂಕರ್ ಡಿ.ಶೆಟ್ಟಿ, ಭಾರತ್ ಬ್ಯಾಂಕ್‍ನ ಕಾರ್ಯಾಧ್ಯಕ್ಷ ಸೂರ್ಯಕಾಂತ್ ಜೆ.ಸುವರ್ಣ, ನಿರ್ದೇಶಕರಾದ ಭಾಸ್ಕರ್ ಎಂ.ಸಾಲ್ಯಾನ್, ಡಾ| ಪಿ.ವಿ ಶೆಟ್ಟಿ, ಪ್ರಭಾಕರ ಶೆಟ್ಟಿ, ಉಷಾ ಗೋಪಾಲ್ ಶೆಟ್ಟಿ, ಕಮಲಾಕ್ಷ ಶೆಟ್ಟಿ, ಪ್ರೇಮನಾಥ ಪಿ.ಕೋಟ್ಯಾನ್ ಮತ್ತಿತರ ಮಹಾನೀಯರು ಆಗಮಿಸಿ ತೀರ್ಥಪ್ರಸಾದವನ್ನು ಸ್ವೀಕರಿಸಿದರು. ಕ್ಷೇತ್ರಕ್ಕೆ ಆದಿಯಿಂದ ಸೇವೆಗೈಯುತ್ತಿರುವ ಭಕ್ತರು, ಕೊಡುಗೈದಾನಿಗಳು ಹಾಗೂ ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಸೇವಾದಳಕ್ಕೆ ಕಾರ್ಯಧ್ಯಕ್ಷ ನಾಗೇಶ್ ಎಂ.ಕೋಟ್ಯಾನ್ ಅವರನ್ನು ವಿಶೇಷವಾಗಿ ಸಮಿತಿಯ ಪದಾಧಿಕಾರಿಗಳು ಗೌರವಿಸಿ ಅಭಿವಂದಿಸಿದರು. ವರ್ಷಂಪ್ರತಿಯಂತೆ ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಜಗಧೀಶ್ವರಿ ಮತ್ತು ಶ್ರೀ ಬ್ರಹ್ಮ ಬೈದರ್ಕಳರ ಕೃಪೆಗೆ ಪಾತ್ರರಾದರು.

ಕಾರ್ಯಕ್ರಮದಲ್ಲಿ ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ್ ಎಸ್.ಸಾಲಿಯಾನ್, ಉಪಾಧ್ಯಕ್ಷ ನರಸಪ್ಪ ಕೆ.ಮಾರ್ನಾಡ್, ಗೌ| ಪ್ರ| ಕಾರ್ಯದರ್ಶಿ ಸಿಎ| ಅಭಿಜಿತ್ ಜಿ.ಶೆಟ್ಟಿ, ಗೌರವ ಕೋಶಾಧಿಕಾರಿ ಆಶಿಶ್ ಆರ್. ಕೋಟ್ಯಾನ್, ಜತೆ ಕಾರ್ಯದರ್ಶಿ ಸದಾಶಿವ ಎಸ್.ಸಾಲಿಯಾನ್, ಜತೆ ಕೋಶಾಧಿಕಾರಿ ಉಷಾ ಎಸ್.ಮೆಂಡನ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿ ಕರುಣಾಕರ್ ಕೆ.ಕಾಪು, ಸಲಹೆಗಾರರಾದ ವಿಶ್ವನಾಥ ಬಿ.ಬಂಗೇರ, ರಘು ಕೆ.ಕೋಟ್ಯಾನ್, ರಜಿತ್ ಎಂ.ಸುವರ್ಣ, ಪ್ರವೀಣ್ ವರಡ್ಕರ್ ಸೇರಿದಂತೆ ಮಾಜಿ-ಹಾಲಿ ಪದಾಧಿಕಾರಿಗ ಳು, ಆಡಳಿತ ಸಮಿತಿ, ಅರ್ಚಕ ವೃಂದ, ಯುವವಾಹಿನಿ ಮತ್ತು ಮಹಿಳಾ ಸಮಿತಿ ಹಾಗೂ ಸದಸ್ಯರನೇಕರು ಉಪಸ್ಥಿತರಿದ್ದರು.

 
More News

ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಖ್ಯಾತ ಸಿನಿಮಾ ನಟ & ಸಿರಿ ಬ್ರ್ಯಾಂಡ್ ರಾಯಭಾರಿ ಶ್ರೀ ರಮೇಶ್ ಅರವಿಂದ್ ಸಿರಿ ಸಂಸ್ಥೆಯ ಪ್ರಧಾನ ಕಛೇರಿಗೆ ಭೇಟಿ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಆಸರೆ ಗೆಳೆಯರ ಬಳಗ ಮಂಗಳೂರು ರಿ ಮಂಗಳೂರು ಏಳನೆಯ ವರ್ಷದ ಸ್ಥಾಪನಾ ದಿನಾಚರಣೆ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ
ಎಚ್.ಡಿ. ದೇವೆಗೌಡ ಹಾಗೂ ಧರ್ಮಪತ್ನಿ ಶ್ರೀಮತಿ ಚೆನ್ನಮ್ಮ ದಂಪತಿ ಧರ್ಮಸ್ಥಳಕ್ಕೆ ಭೇಟಿ

Comment Here